ಮಂಗಳೂರು,ಮಾ.19 : ದಕ ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ ತಿಂಗಳ 23,24 ಎರಡು ದಿನಗಳ ಕಾಲ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ” ಘೋಷಣೆಯಿಂದ ನಡೆಯಲಿದೆ ಎಂದು ದಕ ಜಿಲ್ಲೆಯ ಅಧ್ಯಕ್ಷ ರಾದ ಡಾ ಎಂಪಿ ಶ್ರೀನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿದಂತೆ ಹಿರಿಯ ಹಾಸ್ಯ ಸಾಹಿತಿ ಶ್ರೀಮತಿ ಭುವನೇಶ್ವರಿ ಹೆಗಡೆ ಅವರು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಇಡೀ ಸಾಹಿತ್ಯದ ಸಂಭ್ರಮವು ಆಮೃತ ಸೋಮೇಶ್ವರ ನಗರದಲ್ಲಿ, ಮಿಜಾರು ಆನಂದ ಆಳ್ವ ವೇದಿಕೆ, ಕೇಶವ ಕುಡ್ಲ ಪುಸ್ತಕ ಮಳಿಗೆ,ಕೆ ಟಿ ಗಟ್ಟಿ ಮಹಾದ್ವಾರ ಮಾಡಿ ನಡೆಸಲು ಆಯೋಜನ ಸಮಿತಿ ನಿರ್ಯಿಸಲಾಗಿದೆ. ಉದ್ಘಾಟನೆಯನ್ನು ಕಸಾಪ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಷಿ ಮಾಡುವರು.ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ದಕ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಮಾಡುವರು
ಸುಮಾರು ಹತ್ತು ಪುಸ್ತಕ ಮಳಿಗೆಗಳು ಬರುವ ನಿರೀಕ್ಷೆ ಇದ್ದು ,ಖಾದಿ ಹಾಗೂ ಗ್ರಾಮೋದ್ಯೋಗ, ಮಹಿಳಾ ಸಭಲೀಕರಣ ಉತ್ಪನ್ನಗಳ ಪ್ರದರ್ಶನ ಸೇರಿದಂತೆ 60 ವಿವಿಧ ಮಳಿಗೆಗಳನ್ನು ನಿರೀಕ್ಷಿಸಲಾಗಿದೆ.
ಈ ಈಗಾಗಲೇ ಹತ್ತು ಪುಸ್ತಕ ಬಿಡುಗಡೆಗೆ ಪ್ರಕಾಶಕರು ಹಾಗೂ ಬರಹಗಾರರು ನೊಂದಾವಣೆ ಮಾಡಿದ್ದಾರೆ. ಹೆಚ್ಚಿನ ಪುಸ್ತಕಗಳನ್ನು ನಿರೀಕ್ಷಿಸಲಾಗಿದೆ.
ಮಾಜಿ ಕಸಾಪ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪುಸ್ತಕಗಳನ್ನು ಬಿಡುಗಡೆ ಮಾಡುವರು. ಅವರಿಗೆ ಜೊತೆಯಾಗಿ ಜಿಪಂ ಮುಖ್ಯಾಧಿಕಾರಿ ಆನಂದ್ ಕೆ ಹಾಗೂ ಮಹಾನಗರ ಪಾಲಿಕೆಯ ಮುಖ್ಯಾಧಿಕಾರಿ ಆನಂದ ಎಲ್ ಇರುವರು.ಈ ಬಾರಿ ಸಾಹಿತಿಗಳು, ಸಂಶೋದಕರು, ಸಂಘಟಕರು ಜೊತೆಯಲ್ಲಿ ಸಮ್ಮೇಳನದ ಮುಖಂಡತ್ವ ವಹಿಸಿಕೊಂಡಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳನ್ನು ಕನ್ನಡದ ಸಂಭ್ರಮಕ್ಕೆ ಜೊತೆಯಲ್ಲಿ ಸೇರಿಕೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ಸಾಂಸ್ಕೃತಿಕ ಪ್ರಸ್ತುತಿಯಲ್ಲಿ ವಿದ್ಯಾರ್ಥಿಗಳು ಇರುವಂತೆ ಆಯೋಜನೆ ಮಾಡಲಾಗಿದೆ. ಇತರಂತೆ,ಹಿರಿಯ ಹಾಗೂ ಕಿರಿಯರ ಕವಿ ಗೋಷ್ಟಿ, ಹಿರಿಯ ಪತ್ರಕರ್ತರಿಂದಲೇ ಪತ್ರಿಕಾ ಗೋಷ್ಟಿ,ಮತ್ತು ಇತರ ವಿವಿಧ ಸಾಂಸ್ಕೃತಿಕ ಗೋಷ್ಟಿಗಳು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಮಾಧವ ಎಂ.ಕೆ,ವಿನಯ ಆಚಾರ್ ,ಚಂದ್ರಹಾಸ ಶೆಟ್ಟಿ, ಮುರಳೀ ಮೋಹನ ಚೂಂತಾರು,ಪುಷ್ಪರಾಜ್ ಕೆ,ರೇಮಂಡ್ ಡಿ ಕುನ್ಹಾ,ಮಂಜುನಾಥ ರೇವಣ್ಕರ್ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post