ಕಠ್ಮಂಡು: ಜಗತ್ತಿನಲ್ಲೇ ಅತಿ ಎತ್ತರವಾದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 10 ಬಾರಿ ಯಶಸ್ವಿಯಾಗಿ ಏರಿ ಬಂದಿದ್ದ ನೋಯೆಲ್ ಹನ್ನಾ ನೇಪಾಳದಲ್ಲಿ 26,545 ಅಡಿ ಎತ್ತರದ ವಿಶ್ವದ 10 ನೇ ಅತಿ ಎತ್ತರದ ಪರ್ವತವಾದ ಅನ್ನಪೂರ್ಣದಿಂದ ಇಳಿಯುವಾಗ ರಾತ್ರಿ ನಿಧನರಾದರು. 56 ವರ್ಷ ವಯಸ್ಸಿನ ಅವರು ವಿಶ್ವದ ಎರಡನೇ ಅತಿ ಎತ್ತರದ ಪರ್ವತವಾದ K2 ನಿಂದ ಏರಲು ಮತ್ತು ಇಳಿದ ಐರ್ಲೆಂಡ್‌ನ ಮೊದಲ ವ್ಯಕ್ತಿಯಾಗಿದ್ದಾರೆ.
ಅವರು ನೇಪಾಳದ ಅನ್ನಪೂರ್ಣ ಪರ್ವತ ಪ್ರದೇಶದಲ್ಲಿ ಪರ್ವತಾರೋಹಣ ಮಾಡಿ ವಾಪಸ್ ಬರುವಾಗ ಟೆಂಟ್‌ನಲ್ಲಿ ಆಕ್ಸಿಜನ್ ಕೊರತೆಯಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಕೆಳಗೆ ತರಲಾಗುತ್ತಿದ್ದು ಅಲ್ಲಿಂದ ಕಠ್ಮಂಡುವಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಸೆವೆನ್ ಸಮ್ಮಿಟ್ ಟ್ರೆಕ್ಕಿಂಗ್‌ನ ಮಿಂಗ್ಮಾ ಶೆರ್ಫಾ ತಿಳಿಸಿದ್ದಾರೆ. ನೊಯೇಲ್ ಅವರು ಸಾಯುವ ಮುನ್ನ 8,091 ಮೀಟರ್ ಎತ್ತರವಿರುವ ಅನ್ನಪೂರ್ಣ ಪರ್ವತವನ್ನು (ಮೌಂಟ್ ಎವರೆಸ್ಟ್ 8,849) ಯಶಸ್ವಿಯಾಗಿ ಏರಿದ್ದರು.
2006 ರಿಂದ 2020ರವರೆಗೆ ವಿವಿಧ ಸಂದರ್ಭಗಳಲ್ಲಿ ನೊಯೇಲ್ ಒಟ್ಟು 10 ಬಾರಿ ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ್ದರು. ಈ ಮೂಲಕ ಅವರು ಪ್ರಪಂಚದ ಟಾಪ್ 10 ಪರ್ವತಾರೋಹಿಗಳ ಸಾಲಿನಲ್ಲಿ ಹೆಸರು ಪಡೆದಿದ್ದರು. ಇದೇ ವೇಳೆ ನೊಯೇಲ್ ಅವರ ಜೊತೆ ಅನ್ನಪೂರ್ಣ ಪರ್ವತ ಏರಲು ಹೋಗಿದ್ದ ಭಲಜೀತ್ ಕೌರ್ ಹಾಗೂ ಅರ್ಜುನ್ ವಾಜಪೇಯಿ ಅವರನ್ನು ಅಪಾಯದಿಂದ ರಕ್ಷಿಸಲಾಗಿದೆ. ಕಳೆದ ವಾರ ಇಲ್ಲಿಯೇ ಹಿಮಗಾಳಿಯಿಂದ ನೇಪಾಳದ ಮೂವರು ಪರ್ವತಾರೋಹಿಗಳು ಮೃತಪಟ್ಟಿದ್ದರು.
ಅತ್ಯಂತ ಅಪಾಯಕಾರಿಯಾಗಿರುವ ಅನ್ನಪೂರ್ಣ ಪರ್ವತಪ್ರದೇಶದಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post