• About us
  • Contact us
  • Disclaimer
Sunday, June 7, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪುತ್ತೂರು: ಆಸ್ಪತ್ರೆಗೆ ಭೇಟಿಗೆ ಆಗಮಿಸಿದ ಬಿಜೆಪಿ ಮುಖಂಡರನ್ನು ಹೊರದಬ್ಬಿದ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು

Coastal Times by Coastal Times
May 19, 2023
in ಕರಾವಳಿ
ಪುತ್ತೂರು: ಆಸ್ಪತ್ರೆಗೆ ಭೇಟಿಗೆ ಆಗಮಿಸಿದ ಬಿಜೆಪಿ ಮುಖಂಡರನ್ನು ಹೊರದಬ್ಬಿದ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು
192
VIEWS
WhatsappTelegramShare on FacebookShare on Twitter

ಪುತ್ತೂರು : ಬ್ಯಾನರ್ ವಿಚಾರದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವವರ ಭೇಟಿಗೆ ವಿಜಯಪುರ ಶಾಸಕ ಆಗಮಿಸಿದ ವೇಳೆ ಬಿಜೆಪಿ‌ ಮುಖಂಡರನ್ನು ಪುತ್ತಿಲ ಬೆಂಬಲಿಗರು ಆಸ್ಪತ್ರೆ ಕೊಠಡಿಯಿಂದ ಹೊರದಬ್ಬಿದ ಘಟನೆ ಶುಕ್ರವಾರ ನಡೆದಿರುವುದು ವರದಿಯಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದ ಗೌಡರ ಬಗ್ಗೆ ಅವಹೇಳನಕಾರಿ ಬ್ಯಾನರ್ ಅಳವಡಿಸಿದ ಆರೋಪದಲ್ಲಿ ಬಂಧನಕ್ಕೊಳಗಾದ ಸಂಘ ಪರಿವಾರದ ಕಾರ್ಯಕರ್ತರು ಪೊಲೀಸ್ ದೌರ್ಜನ್ಯಕ್ಕೊಳಗಾಗಿದ್ದಾರೆ. ಈ ಪೈಕಿ ಆಸ್ಪತ್ರೆಗೆ ದಾಖಲಾಗಿರುವವರನ್ನು ಭೇಟಿಯಾಗಲು ಇಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಆಗಮಿಸಿದ್ದರು. ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಆಗಮಿಸಿದ ಯತ್ನಾಳ್ ಸಮ್ಮುಖವೇ ಬಿಜೆಪಿ ನಾಯಕರು ಹಾಗೂ ಸಂಘ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಇನ್ನು ಬಿಜೆಪಿಯ ಬಹುತೇಕ ಸ್ಥಳೀಯ ಮುಖಂಡರು ಆಸ್ಪತ್ರೆಗೆ ಬಂದಿದ್ದರೂ ದೂರವೇ ಉಳಿದಿದ್ದರು. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಕೊಠಡಿಯೊಳಗೆ ಕೇವಲ ಬಸನಗೌಡ ಪಾಟೀಲ್ ಅವರನ್ನು ಮಾತ್ರ ಬಿಟ್ಟ ಪುತ್ತಿಲ ಪರ ಬೆಂಬಲಿಗರು ಅವರ ಜೊತೆ ಆಗಮಿಸಿದ್ದ ಬಿಜೆಪಿ ಹಾಗೂ ಬಿಜೆಪಿ ಪರ ಇರುವ ಸಂಘ ಪರಿವಾರದ ಮುಖಂಡರನ್ನು ಬಾಗಿಲಿನಿಂದಲೇ ತಳ್ಳಿ ಹೊರದಬ್ಬಿದ್ದಾರೆ ಇದರ ವೀಡಿಯೋ ವೈರಲ್ ಆಗಿದೆ.

ಯುವಕರ ಆರೋಗ್ಯ ವಿಚಾರಿಸಿದ ಯತ್ನಾಳ್ ಬಳಿಕ ಮಾದ್ಯಮದ ಜೊತೆ ಮಾತನಾಡಿ ಪುತ್ತೂರಲ್ಲಿ ಹಿಂದು ಕಾರ್ಯಕರ್ತರ ಮೇಲೆ ನಡೆದ ಪೊಲೀಸ್ ದೌರ್ಜನ್ಯಕ್ಕೆ  ಬಿಜೆಪಿ ನಾಯಕರೇ ಹೊಣೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌  ಹೇಳಿದ್ದಾರೆ. ಅವರು ಶುಕ್ರವಾರ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರನ್ನು ಭೇಟಿಯಾದರು. ಅವರ ಭೇಟಿಯ ವೇಳೆ ಬಿಜೆಪಿ ಮತ್ತು ಹಿಂದು ಸಂಘಟನೆ ಕಾರ್ಯಕರ್ತರ ನಡುವೆ ಸಣ್ಣ ಜಗಳವೂ ನಡೆದಿದೆ. ಇದುವರೆಗೆ ಭೇಟಿ ನೀಡಿದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಈ ಘಟನೆಯನ್ನು  ಕಾಂಗ್ರೆಸ್‌ ತಲೆಗೆ ಕಟ್ಟಲು ಯತ್ನಿಸಿದ್ದರು. ಆದರೆ, ಮೊದಲ ಬಾರಿಗೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಇದರ ಹಿಂದೆ ಬಿಜೆಪಿ ನಾಯಕರದೇ ಕೈವಾಡವಿದೆ ಎಂದು ಹೇಳಿದ್ದಾರೆ.

ಈಗ ಎನು ಘಟನೆ ಆಗಿದೆಯೋ ಅದನ್ನು ಮತ್ತೆ ಮತ್ತೆ ಕೆದಕುವುದಕ್ಕಿಂತ ನಾವು ಒಂದಾಗಬೇಕು. ಮುಂದೆ ಒಂದು ವರ್ಷದಲ್ಲಿ‌ ಲೋಕಸಭೆ ಚುನಾವಣೆ ಬರಲಿದ್ದು, ಆ ಬಗ್ಗೆ ಚಿಂತಿಸಿ ಮತ್ತೆ ಒಂದಾಗಿ ಪಕ್ಷ, ಸಂಘಟನೆ, ದೇಶ ಕಟ್ಟೋಣ ಎಂದರು. ಇದು ಬಿಜೆಪಿ ಮತ್ತು ಸಂಘಟನೆ ನಡುವಿನ ಸಣ್ಣ ಭಿನ್ನಮತ. ಇದನ್ನು ಸರಿಪಡಿಸಿಕೊಂಡು ಪಕ್ಷ ಬಲಪಡಿಸಲಾಗುವುದು ಎಂದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ್, ಸುಧೀರ್ ಶೆಟ್ಟಿ ಕಣ್ಣೂರು, ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಗೂಗಲ್ ಸರ್ಚ್​ ಹಿಸ್ಟರಿಯಿಂದ ಗೊತ್ತಾಯ್ತು ಕೊಲೆಗಾರ ಯಾರೆಂದು ‘ಚೇಚಿ’ ಎನ್ನುತ್ತಲೇ ಬ್ಯೂಟಿಶಿಯನ್ ಲೇಡಿಯನ್ನು ಕೊಂದು ಮುಗಿಸಿದ್ದ ಮ್ಯೂಸಿಕ್ ಟೀಚರ್

Next Post

ಸಿದ್ದರಾಮಯ್ಯ, ಡಿಕೆಶಿ ಜತೆಗೆ 8 ಶಾಸಕರ ಪ್ರಮಾಣವಚನ ಸ್ವೀಕರಿಸಲಿದ್ದಾರೆ : ಯಾರಿಗೆ ಸಿಕ್ಕಿದೆ ಮಂತ್ರಿ ಭಾಗ್ಯ?

Related Posts

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು
ಕರಾವಳಿ

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು

June 7, 2026
14
ಕರ್ನಾಟಕದ 34ನೇ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ
ಕರಾವಳಿ

ಕರ್ನಾಟಕದ 34ನೇ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ

June 3, 2026
32
Next Post
ಸಿದ್ದರಾಮಯ್ಯ, ಡಿಕೆಶಿ ಜತೆಗೆ 8 ಶಾಸಕರ ಪ್ರಮಾಣವಚನ ಸ್ವೀಕರಿಸಲಿದ್ದಾರೆ : ಯಾರಿಗೆ ಸಿಕ್ಕಿದೆ ಮಂತ್ರಿ ಭಾಗ್ಯ?

ಸಿದ್ದರಾಮಯ್ಯ, ಡಿಕೆಶಿ ಜತೆಗೆ 8 ಶಾಸಕರ ಪ್ರಮಾಣವಚನ ಸ್ವೀಕರಿಸಲಿದ್ದಾರೆ : ಯಾರಿಗೆ ಸಿಕ್ಕಿದೆ ಮಂತ್ರಿ ಭಾಗ್ಯ?

Discussion about this post

Recent News

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು

June 7, 2026
14
ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿಬಳಿ , ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿಬಳಿ , ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

June 7, 2026
35
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು

June 7, 2026
ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿಬಳಿ , ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿಬಳಿ , ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

June 7, 2026
ಬಂಟ್ವಾಳ: ಕಾರಿನಲ್ಲಿ 7.64 ಲಕ್ಷ ಮೌಲ್ಯದ ಎಂಡಿಎಂಎ ಸಾಗಾಟ ಮೂವರು ಅರೆಸ್ಟ್

ಬಂಟ್ವಾಳ: ಕಾರಿನಲ್ಲಿ 7.64 ಲಕ್ಷ ಮೌಲ್ಯದ ಎಂಡಿಎಂಎ ಸಾಗಾಟ ಮೂವರು ಅರೆಸ್ಟ್

June 6, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d