ಚೀನಾ: ಅದಾಗ್ಯೂ ಮೋಸ ಮಾಡಿ ಒಬ್ಬರು ಒಂದು ಕಂಪನಿ ಜೊತೆ ಇನ್ನೊಂದೆರೆಡು ಕೆಲಸ ಮಾಡುತ್ತಾರೆ. ಆದರೆ ಚೀನಾದಲ್ಲಿ ಒಬ್ಬಳು ಖತರ್ನಾಕ್ ಮಹಿಳೆ ಇದ್ದಾಳೆ. ಹಣ ಮಾಡುವ ಮೋಸದಾಟದಲ್ಲಿ ಈಕೆ ಬರೋಬ್ಬರಿ 16 ಕಂಪನಿಯಲ್ಲಿ ಉದ್ಯೋಗಿಯಾಗಿ ಗುರುತಿಸಿಕೊಂಡಿದ್ದಾಳೆ. ಈಕೆ ಚೀನಾದ ಮಹಿಳೆ, ಹೆಸರು ಗುವಾನ್ ಯುವೆ. 16 ಕಂಪನಿಯಲ್ಲಿ ಉದ್ಯೋಗಿಯಾಗಿ ವಂಚನೆಗೈದ ಪ್ರಕರಣದಲ್ಲಿ ಬಂಧಿಯಾಗಿದ್ದಾಳೆ. ಮೂರು ವರ್ಷಗಳಿಂದ ಸುಮಾರು 16 ಕಂಪನಿಯಲ್ಲಿ ಉದ್ಯೋಗಿಯಾಗಿ $7 ಮಿಲಿಯನ್ ಮೌಲ್ಯದ ಬೃಹತ್ ಕಾರ್ಮಿಕ-ವಂಚನೆ ಎಸಗಿದ್ದಾಳೆ. ಈ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಕ್ಸಿನ್ಮಿನ್ ವರದಿ ಮಾಡಿದೆ.
ಗುವಾನ್ ತನ್ನ ಎಲ್ಲಾ ನೇಮಕಾತಿಗಳನ್ನು ಪುಸ್ತಕದಲ್ಲಿ ಟ್ರ್ಯಾಕ್ ಮಾಡುತ್ತಿದ್ದಳು ಮತ್ತು ಹೊಸ ಉದ್ಯೋಗಕ್ಕಾಗಿ ಸಂದರ್ಶನ ಮಾಡುವಾಗ, ತನ್ನ ಕಂಪನಿಗಳ ಕೆಲಸದ ಚಾನೆಲ್‌ಗಳಲ್ಲಿ ಸಂದರ್ಶನದ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಳು. ಕೆಲಸ ಮಾಡುತ್ತಿದ್ದೇನೆ ಎನ್ನುವುದಕ್ಕೆ ಕ್ಲೈಂಟ್‌ಗಳನ್ನು ಭೇಟಿಯಾಗುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಳು. ಪುಸ್ತಕದಲ್ಲಿ ಯಾವ್ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಯಾವ ಕಂಪನಿಗೆ ಯಾವ ಬ್ಯಾಂಕ್ ಖಾತೆ ಬಳಸಿದ್ದೇನೆ, ಕಂಪನಿಯಲ್ಲಿ ಅವರ ಪಾತ್ರ ಏನು ಹೀಗೆ ಎಲ್ಲಾ ವಿವರಗಳನ್ನು ಪುಸ್ತಕದಲ್ಲಿ ನಮೂದಿಸಿದ್ದಾಳೆ. ಹಲವು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಗೊಂದಲ ತಪ್ಪಿಸುವ ಸಲುವಾಗಿ ಈ ರೀತಿ ಮಾಡುತ್ತಿದ್ದಳು ಯುವೆ.
ಬಯಲಾಯ್ತು ಮಹಿಳೆಯ ವಂಚನೆ : ಯಾವುದೇ ಮೋಸಕ್ಕೆ ಒಂದು ಕೊನೆಯಂತ ಇರುತ್ತದೆ. ಈ ಚೀನಾದ ಮಹಿಳೆಯ ವಂಚನೆಯಲ್ಲೂ ಇದು ನಿಜವಾಯಿತು. ಮೂರು ವರ್ಷಗಳ ಕಾಲ ವಂಚನೆ ಎಸಗುತ್ತಾ ಬಂದ ಈಕೆ ಕೊನೆಗೂ ಸಿಕ್ಕಿಬಿದ್ದಳು. ಈ ವರ್ಷದ ಜನವರಿಯಲ್ಲಿ ಉದ್ಯೋಗದಾತರಲ್ಲಿ ಒಬ್ಬರಾದ ಟೆಕ್ ಕಂಪನಿಯ ಮಾಲೀಕ ಲಿಯು ಜಿಯಾನ್ ದಾಖಲೆಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಿದಾಗ ಈಕೆಯ ಮೇಲೆ ಅನುಮಾನ ಹುಟ್ಟಿದೆ.
ಜಿಯಾನ್ ಕಂಪನಿಯು ಗುವಾನ್ ಯು ಮತ್ತು ಇತರೆ ಏಳು ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು. ಆದರೆ ಕೆಲಸದಲ್ಲಿ ಯಾವುದೇ ಫಲಿತಾಂಶ ಬರದಿದ್ದಕ್ಕೆ ಅವರನ್ನು ವಜಾ ಮಾಡಲಾಯಿತು. ರಾಜೀನಾಮೆ ಪತ್ರವನ್ನು ವಂಚಕಿ ಮಹಿಳೆ ಬೇರೋಂದು ಕಂಪನಿಯ ಗ್ರೂಪ್‌ಗೆ ಕಳುಹಿಸಿದ್ದಾಳೆ. ಅದರಲ್ಲಿ ಲಿಯು ಜಿಯಾನ್ ಕೂಡ ಇದ್ದರು. ಆಗ ಲಿಯುಗೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿದ್ದಾರೆ. ಹ್ಯಾಂಗ್‌ಝೌನಲ್ಲಿನ ಪುಡಾಂಗ್ ಪೊಲೀಸರು ಮಾರ್ಚ್ 8 ರಂದು ಅಧಿಕಾರಿಗಳಿಗೆ ವರದಿ ಮಾಡಿದ ಉದ್ಯೋಗಿ ಲಿಯು ಸೇರಿದಂತೆ 53 ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸ್ಕ್ಯಾಮರ್‌ಗಳ ಈ ವಂಚನೆಯಿಂದಾಗಿ 50 ಮಿಲಿಯನ್ ಯುವಾನ್ (ಸುಮಾರು $6.8 ಮಿಲಿಯನ್) ನಷ್ಟ ಸಂಭವಿಸಿದೆ. ಗುವಾನ್ ಅನೇಕ ಗುರುತಿನ ಚೀಟಿಗಳನ್ನು ಮತ್ತು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅಲ್ಲಿ ಅವಳು ವಿವಿಧ ಸಂಸ್ಥೆಗಳಿಂದ ಸಂಬಳವನ್ನು ಹೇಗೆ ಪಡೆದಿದ್ದಾಳೆ ಎಂಬುದು ತನಿಖೆಯಲ್ಲಿ ಬಯಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post