ಮಂಗಳೂರು, ಅ.19 : ಮಾರ್ಕ್ ಕಡಿಮೆ ಬಂತೆಂದು ಬೆಂಗಳೂರಿನ ಮನೆ ಬಿಟ್ಟು ಮಂಗಳೂರಿಗೆ ಬಂದು ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಭಾರ್ಗವಿ ಗೋವಾದಲ್ಲಿ ಪತ್ತೆಯಾಗಿದ್ದಾಳೆ. ಆಕೆ ಮಂಗಳವಾರ ಮುಂಜಾವ 3ಕ್ಕೆ ನಗರದ ಬಿಜೈ ಸರಕಾರಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಳು. ಅಲ್ಲಿಂದ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಮುಕ್ಕ ಬೀಚ್‌ಗೆ ಹೋಗಿ ಸಂಜೆ 5.55ಕ್ಕೆ ಮರಳಿ ಬಿಜೈ ಸರಕಾರಿ ಬಸ್ ನಿಲ್ದಾಣಕ್ಕೆ ಬಂದಿದ್ದಳು. ಬಿಜೈ ಸರಕಾರಿ ಬಸ್ ನಿಲ್ದಾಣದ ಸಿಸಿ ಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆ ಬಳಿಕ ಈಕೆ ಎಲ್ಲಿಗೆ ತೆರಳಿದ್ದಾಳೆ ಎನ್ನುವ ಮಾಹಿತಿ ಸಿಕ್ಕಿರಲಿಲ್ಲ. ಬೆಂಗಳೂರು ಪೊಲೀಸರು ಮಂಗಳೂರು ಹಾಗೂ ಧರ್ಮಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದರು. ಅಲ್ಲದೆ ಈಕೆ ನಾಪತ್ತೆಯಾಗಿರುವ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಈಕೆ ಗೋವಾಕ್ಕೆ ತೆರಳಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬುಧವಾರ ಸಂಜೆ ವೇಳೆಗೆ ಪಣಜಿ ಪೊಲೀಸರು ಹುಡುಗಿಯನ್ನು ಪತ್ತೆ ಮಾಡಿದ್ದಾರೆ. ಸದ್ಯಕ್ಕೆ ಹುಡುಗಿ ಪಣಜಿ ಪೊಲೀಸರ ವಶದಲ್ಲಿದ್ದಾಳೆಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post