ಮಂಗಳೂರುಃ ಗಡಿನಾಡು ಕಾಸರಗೋಡಿನಲ್ಲಿ ನಿಧಾನವಾಗಿ ಕನ್ನಡ ಮರೆಯಾಗುತ್ತಿದೆ. ಕೇರಳ ಸರಕಾರ ತ್ರಿಭಾಷಾವನ್ನು ಸೂತ್ರ ವನ್ನು ಕೈಬಿಟ್ಟು ಮಲೆಯಾಳೀಕರಣ ಮಾಡುತ್ತಿದೆ, ಕನ್ನಡ ನೆಲದಲ್ಲಿ ಕನ್ನಡ ವನ್ನು ಸಂಪೂರ್ಣ ಮರೆಮಾಚುತ್ತಿದೆ ಎಂದು ಗಡಿ ಜಿಲ್ಲೆ ಕಾಸರಗೋಡು ಮೂಲದ ವೈದ್ಯ , ಸಾಹಿತಿ ಡಾ. ಸುರೇಶ್ ನೆಗಳಗುಳಿ ಅವರು ಹೇಳಿದರು.
ಅವರು ನಗರದ ಪುರಭವನದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಆಯೋಜಿಸಿದ ಗಡಿ ಸಂಭ್ರಮ ವಿಚಾರಗೋಷ್ಠಿ, ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಡಿ ಪ್ರದೇಶದಲ್ಲಿ ಕನ್ನಡ ಭಾಷಾ ಸಾಹಿತ್ಯ ಸಾಂಸ್ಕೃತಿಕ ಕಂಪನ್ನು ಹರಡಲು ರಾಜ್ಯ ಸರಕಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ವಾರ್ಷಿಕ ಕನಿಷ್ಟ ನೂರು ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ವಿಚಾರ ಮಂಡಿಸಿದ ಹಿರಿಯ ಪತ್ರಕರ್ತ ರಮೇಶ್ ಎಸ್ ಪೆರ್ಲ ಸರಕಾರವನ್ನು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಅವರು ಗಡಿನಾಡ ಕನ್ನಡಿಗರು ಎದುರಿಸುತ್ತಿರುವಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ನಿವೃತ್ತ ಸಹಾಯಕ ಪ್ರಾಧ್ಯಾಪಕ ಜಯಾನಂದ ಪೇರಾಜೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ನ್ಯಾಯವಾದಿ ಪರಿಮಳ ರಾವ್, ಕಾದಂಬರಿಕಾರ ಪಿ.ವಿ.ಪ್ರದೀಪ್ ಕುಮಾರ್, ಪಿಂಗಾರ ಪತ್ರಿಕೆಯ ಸಂಪಾದಕ , ಸಾಹಿತಿ ರೇಮಂಡ್ ಡಿಕನ್ಹ ತಾಕೊಡೆ, ಕವಿಗೋಷ್ಠಿ ಸಂಚಾಲಕಿ ಅರ್ಚನಾ ಎಂ. ಬಂಗೇರ ಕುಂಪಲ, ರಾಣಿ ಪುಷ್ಪಲತಾ ದೇವಿ ಉಪಸ್ಥಿತಕರಿದ್ದರು. NSCDF ಅಧ್ಯಕ್ಷ ಗಂಗಾದರ ಗಾಂಧಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರರು. ಕನ್ನಡ ಶಿಕ್ಷಕಿ ಕೀರ್ತನಾ ಸನಿಲ್ ಕಾರ್ಯಕ್ರಮ ನಿರೂಪಿಸಿದರು
ಬಳಿಕ ನಡೆದ ಕವಿಗೋಷ್ಠಿಯಲ್ಲಿ ಗುಣಾಜೆ ರಾಮಚಂದ್ರ ಭಟ್, ಸೌಮ್ಯ ಆರ್ ವಿಟ್ಲ, ಮಹಮ್ಮದ್ ಮನ್ಸೂರ್ ಮೂಲ್ಕಿ, ಹಿತೇಷ್ ಕುಮಾರ್ ನಿರ್ಚಾಲ್, ಬಾಲಕೃಷ್ಣ ಕೇಪುಳು, ಗುರುರಾಜ್ ಎ.ಆರ್ಯಕಾಸರಗೇಡು, ಗೋಪಾಲಕೃಷ್ಣ ಶಾಸ್ತ್ರಿ, ಜಯಲಕ್ಷ್ಮೀ ಶೆಟ್ಟಿ, ಸೌಮ್ಯ ಗೋಪಾಲ್, ಉಮೇಶ್ ಕಾರಂತ್, ರಮಿತಾ ಕುತ್ತಾರ್, ಇಬ್ರಾಹಿಂ ಖಲೀಲ್ ಪುತ್ತೂರು, ಶಿವರಾಜ್ ದೇವರಗುಡಿ, ಲತೀಶ್ ಸಂಕೋಲಿಗೆ, ಮಾನಸ ವಿಜಯ್ ಕೈಂತಜೆ,ರೇಖಾ ಸುದೇಶ್ ರಾವ್, ಬದ್ರುದ್ದೀನ್ ಕುಳೂರು, ಪರಿಮಳ ಮಹೇಶ್, ಉಮೇಶ್ ಶಿರಿಯಾನವೀನ್ ಕುಲಾಲ್ ಚಿಪ್ಪಾರ್, ರಶ್ಮಿ ಸನಿಲ್ ಉರ್ವ, ವಾಣಿ ಲೋಕಯ್ಯ, ಗೀತಾ ಲಕ್ಷ್ಮೀಶ್,ದೀಪಾ ವಾವಂಜೆ, ಸುಮಂಗಲಾ ದಿನೇಶ್ ಶೆಟ್ಟಿಕುಂಪಲ , ಮಹೇಶ್ ಕಲ್ಲಾಪು, ರೇಖಾ ನಾರಾಯಣ್ ಪಕ್ಷಿಕರೆ, ಅನುರಾಧ ರಾಜೀವ್ ಸುರತ್ಕಲ್,ಡಾ. ವಾಣಿಶ್ರೀ ಕಾಸರಗೋಡು. ಶಾಂತಾ ಪುತ್ತೂರು, ಸೋಮು ಹಿಪ್ಪರಗಿ ತಮ್ಮ ಕವನಗಳನ್ನು ಪ್ರಸ್ತುತಪಡಿಸಿದರು.
ವಿವಿಧ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು.
Discover more from Coastal Times Kannada
Subscribe to get the latest posts sent to your email.
Discussion about this post