ಮಂಗಳೂರು ಜ 20 : ತೊಕ್ಕೊಟ್ಟು ನೇತ್ರಾವತಿ ಸೇತುವೆ ಮೇಲೆ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಜ. 20 ರ ಗುರುವಾರ ನಡೆದಿದೆ.
ಅಪಘಾತದ ಸ್ಥಳದಲ್ಲಿ ದೊರೆತ ಪಾನ್ ಕಾರ್ಡ್ ಆಧಾರದ ಮೇಲೆ ಪೊಲೀಸರು ಮೃತರನ್ನು ಸಚಿನ್ ಕೆ ಎಂ (32) ಎಂದು ಗುರುತಿಸಲಾಗಿದೆ. ಸಚಿನ್ ನಗರದ ಚಿಲಿಂಬಿ ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಲೆಟ್ಸ್ ಪಾರ್ಟಿ ಹೆಸರಲ್ಲಿ ಶಾಪ್ ನಡೆಸುತ್ತಿದ್ದರು. ಅವರು ಬುಧವಾರ ರಾತ್ರಿ ಸೋಮೇಶ್ವರದಲ್ಲಿ ಪಾರ್ಟಿ ಒಂದರಲ್ಲಿ ಭಾಗವಹಿಸಿ, ಹಿಂತಿರುಗುತ್ತಿದ್ದಾಗ ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಬೈಕ್ ಸ್ಕಿಡ್ ಆಗಿದೆ. ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ಕಾರಿಡಾರ್ ಮೇಲೆ ಬಿದ್ದಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು.ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Discussion about this post