ಮಂಗಳೂರು, ಜ. 20: ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮೂರು ದಿನಗಳಲ್ಲಿ 10 ಶಾಲೆಗಳು ಮತ್ತು ಎರಡು ಪಿಯು ಕಾಲೇಜುಗಳು ಒಂದು ವಾರದ ಮಟ್ಟಿಗೆ ಸ್ಥಗಿತವಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಐದಕ್ಕಿಂತ ಹೆಚ್ಚು ಮಕ್ಕಳಲ್ಲಿ ಸೋಂಕು ಪತ್ತೆಯಾದಲ್ಲಿ ಅಂತಹ ಶಾಲೆಗಳನ್ನು ಬಂದ್ ಮಾಡಿ ಆನ್ ಲೈನ್ ಶಿಕ್ಷಣವನ್ನು ನೀಡುವಂತೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದರು. ಅದರಂತೆ ಐದಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದ ಶಾಲೆಗಳನ್ನು ಬಂದ್ ಮಾಡಲಾಗಿದೆ.
ಬುಧವಾರ ಎಡಪದವಿನ ಪಿಯು ಕಾಲೇಜಿನ 13 ವಿದ್ಯಾರ್ಥಿಗಳಿಗೆ ಪಾಸಿಟಿವ್ ಆಗಿದ್ದರೆ, ಗುರುವಾರ ನಗರದ ಬೆಂದುರ್‌ವೆಲ್‌ನ ಕಾಲೇಜಿನಲ್ಲಿ ಐವರು ವಿದ್ಯಾರ್ಥಿಗಳಿಗೆ ಪಾಸಿಟಿವ್ ಆಗಿದೆ. ಹಾಗಾಗಿ ಈ ಕಾಲೇಜುಗಳನ್ನು ಕೂಡ ಒಂದು ವಾರದ ಮಟ್ಟಿಗೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ.
ಪುತ್ತೂರು-ಉದನೆ ಬಿಷಪ್ ಪೋಲಿಕಾರ್ಷಸ್ ಪಬ್ಲಿಕ್ ಸ್ಕೂಲ್ – 6ಮಕ್ಕಳು ಹಾಗೂ ಓರ್ವ ಶಿಕ್ಷಕನಿಗೆ ಸೋಂಕು ಪತ್ತೆಯಾಗಿದೆ. ಶಿರಾಡಿ ಸೈಂಟ್ ಅಂಟೋನಿ ಪ್ರೌಢ ಶಾಲೆ – ಮೂವರಿಗೆ ಪಾಸಿಟಿವ್ ದೃಢಪಟ್ಟಿದೆ. ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಶಾಲೆ – 6 ಮಂದಿಗೆ ಪಾಸಿಟಿವ್ ಪತ್ತೆಯಾಗಿದೆ. ಹೀರಾ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆ ಪೆರ್ಮನ್ನೂರು-ಐವರಿಗೆ ಸೋಂಕು ಇರುವುದು ಖಚಿತಗೊಂಡಿದೆ. ಮಂಗಳೂರು ಸೈಂಟ್ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಓರ್ವನಿಗೆ ಪಾಸಿಟಿವ್ ಪತ್ತೆ. ಈ ಹಿನ್ನೆಲೆ ಕೇವಲ 10ನೇ ತರಗತಿ ಮಾತ್ರ ಬಂದ್ ಮಾಡಲಾಗಿದೆ.
ತಾತ್ಕಾಲಿಕ ಮುಚ್ಚಲ್ಪಟ್ಟ ಶಾಲೆಗಳ ವಿವರ:
ಸರಕಾರಿ ಪ್ರೌಢ ಶಾಲೆ ಬೆಂಗ್ರೆ ಕಸಬ,
ಕೆನರಾ ಸಿಬಿಎಸ್ ಇ ಡೊಂಗ್ರಕೇರಿ,
ಅನ್ಸಾರ್ ಇಂಗ್ಲೀಷ್ ಮೀಡಿಯಮ್ ಹೈ ಸ್ಕೂಲ್ ಬಜ್ಪೆ,
ವ್ಯಾಸ ಮಹರ್ಷಿ ಇಂಗ್ಲೀಷ್ ಮೀಡಿಯಮ್ ಹೈ ಸ್ಕೂಲ್ ಮೂಲ್ಕಿ,
ವಿವೇಕಾನಂದ ಪಿಯು ಕಾಲೇಜು ಎಡಪದವು,
ಸರಕಾರಿ ಪ್ರೌಢ ಶಾಲೆ ಮುಂಚೂರು 1 ವಾರಗಳ ಕಾಲ ಬಂದ್
Discover more from Coastal Times Kannada
Subscribe to get the latest posts sent to your email.
Discussion about this post