ಮಂಗಳೂರು : ಕರ್ನಾಟಕ ಮಲಯಾಳಿ ವಿಶ್ವಕರ್ಮ ಸಮಾಜಂ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಅಮೆಚ್ಯೂರ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮಂಗಳೂರು ಇದರ ಸಹಯೋಗದಲ್ಲಿ ಕಳಿಕ್ಕಳಂ ಸೀಸನ್- 2 ಅಂತರ್ ಸಮಾಜಂ ಒಳಾಂಗಣ ಬ್ಯಾಡ್ಮಿಂಟನ್ ಪಂದ್ಯಾವಳಿ ಇಂದು ಮಂಗಳೂರಿನ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯಾವಳಿಯಲ್ಲಿ ಕರ್ನಾಟಕ ಮಲಯಾಳಿ ವಿಶ್ವಕರ್ಮ ಸಮಾಜಂ, ಕೇರಳ ಸಮಾಜಂ, ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ, ಮಲಯಾಳಿ ಸಮಾಜಂ,ಕೈರಳಿ ಮತ್ತು ದೇವಾಂಗ ಸಮಾಜಂ ಎಂಬ ಆರು ತಂಡಗಳು ಭಾಗವಹಿಸಿದ್ದವು. ಬೆಳಗ್ಗಿನಿಂದ ಮಧ್ಯಾಹ್ನ ತನಕ ನಡೆದ ಪಂದ್ಯಾಟದಲ್ಲಿ ಕೇರಳ ಸಮಾಜಂ ಪ್ರಥಮ ಹಾಗೂ ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ದ್ವಿತೀಯ ಸ್ಥಾನ ಗಳಿಸಿತು. ಪಂದ್ಯಾಟವನ್ನು ದಕ್ಷಿಣ ಕನ್ನಡ ಜಿಲ್ಲಾ ಅಮೆಚ್ಯೂರ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ನಿರ್ದೇಶಕ ಪ್ರದೀಪ್ ಡಿ’ಸೋಜಾ ಮುಖ್ಯ ಅತಿಥಿಯಾಗಿದ್ದರು. ಸಮಾರೋಪದಲ್ಲಿ ಕೇರಳ ಸಮಾಜಂ ಅಧ್ಯಕ್ಷ ಟಿ.ಕೆ. ರಾಜನ್ ಮತ್ತು ಉದ್ಯಮಿ ಕೂಳೂರಿನ ಮುಕುಂದ್ ಎಂಟರ್ ಪ್ರೈಸಸ್ ಮಾಲಕ ರಂಜಿತ್ ಕುಮಾರ್ ಮುಕುಂದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಕರ್ನಾಟಕ ಮಲಯಾಳಿ ವಿಶ್ವಕರ್ಮ ಸಮಾಜಂ ಅಧ್ಯಕ್ಷ ಸಂದೇಶ್ ಎಂ., ಕಾರ್ಯದರ್ಶಿ ರಮೇಶ್ ಕೆ., ಉಪಾಧ್ಯಕ್ಷ ಎಂ.ಆರ್. ರಾಜನ್, ಕೋಶಾಧಿಕಾರಿ ಸುನಿಲದದ ಕೆ. ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post