• About us
  • Contact us
  • Disclaimer
Tuesday, April 28, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಭಾರತದಲ್ಲಿ ಮತಾಂತರಕ್ಕೆ ಅಮೆರಿಕ, ಕೆನಾಡ ಸೇರಿದಂತೆ ವಿದೇಶಗಳಿಂದ ಫಂಡಿಂಗ್‌ 6 ರಾಜ್ಯಗಳಲ್ಲಿ 10 ಮಂದಿ ಅರೆಸ್ಟ್‌ ಬೃಹತ್‌ ಜಾಲ ಭೇದಿಸಿದ ಯುಪಿ ಪೊಲೀಸರು

Coastal Times by Coastal Times
July 20, 2025
in ಕ್ರೈಮ್ ನ್ಯೂಸ್
ಭಾರತದಲ್ಲಿ ಮತಾಂತರಕ್ಕೆ ಅಮೆರಿಕ, ಕೆನಾಡ ಸೇರಿದಂತೆ ವಿದೇಶಗಳಿಂದ ಫಂಡಿಂಗ್‌ 6 ರಾಜ್ಯಗಳಲ್ಲಿ 10 ಮಂದಿ ಅರೆಸ್ಟ್‌ ಬೃಹತ್‌ ಜಾಲ ಭೇದಿಸಿದ ಯುಪಿ ಪೊಲೀಸರು
154
VIEWS
WhatsappTelegramShare on FacebookShare on Twitter

ಲಕ್ನೋ: ಉತ್ತರ ಪ್ರದೇಶದ ಸ್ವಯಂ ಘೋಷಿತ ದೇವಮಾನವ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತಾಂತರದ ಸೀಕ್ರೆಟ್‌ ಬಯಲಾದ ಬೆನ್ನಲ್ಲೇ ಉತ್ತರ ಪ್ರದೇಶದ ಪೊಲೀಸರು ಮತ್ತೊಂದು ಮತಾಂತರದ ಬೃಹತ್‌ ಜಾಲವನ್ನ ಭೇದಿಸಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನೆರವು ಪಡೆದು ಐಸಿಸ್‌ ಮಾದರಿಯಲ್ಲಿ ಮತಾಂತರ ದಂಧೆ ನಡೆಸುತ್ತಿದ್ದ ಬೃಹತ್‌ ಜಾಲ ಭೇದಿಸಿರುವ ಪೊಲೀಸರು 6 ವಿಭಿನ್ನ ರಾಜ್ಯಗಳಲ್ಲಿ 10 ಮಂದಿಯನ್ನ ಬಂಧಿತರನ್ನ ಗೋವಾದ ಆಯೇಷಾ (ಅಲಿಯಾಸ್ ಎಸ್.ಬಿ. ಕೃಷ್ಣ), ಕೋಲ್ಕತ್ತಾದ ಅಲಿ ಹಸನ್ (ಅಲಿಯಾಸ್ ಶೇಖರ್ ರಾಯ್) ಮತ್ತು ಒಸಾಮಾ, ಆಗ್ರಾದ ರೆಹಮಾನ್ ಖುರೇಷಿ, ಖಲಾಪರ್, ಮುಜಫರ್‌ನಗರದ ಅಬ್ಬು ತಾಲಿಬ್, ಡೆಹ್ರಾಡೂನ್‌ನ ಅಬುರ್ ರೆಹಮಾನ್, ದೆಹಲಿಯ ಮುಸ್ತಫಾ (ಅಲಿಯಾಸ್ ಮನೋಜ್), ಜೈಪುರದ ಮೊಹಮ್ಮದ್ ಅಲಿ ಮತ್ತು ಜುನೈದ್ ಖುರೇಷಿ ಎಂದು ಗುರುತಿಸಲಾಗಿದೆ.

ಬೆನ್ನುಬಿದ್ದದ್ದು ಹೇಗೆ? : ಕಳೆದ ಮಾರ್ಚ್‌ ತಿಂಗಳಲ್ಲಿ 33 ಮತ್ತು 18 ವರ್ಷದ ಇಬ್ಬರು ಸಹೋದರಿಯರು ಕಾಣೆಯಾಗಿದ್ದರು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಅವರನ್ನು ತಮ್ಮ ಧರ್ಮ ಬದಲಾಯಿಸಲು ಒತ್ತಾಯಿಸಲಾಗಿದೆ ಜೊತೆಗೆ ಮೂಲಭೂತ ವಾದಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಗೊತ್ತಾಯಿತು. ಅಲ್ಲದೇ ‘ಲವ್ ಜಿಹಾದ್’ ಮತ್ತು ಮೂಲಭೂತವಾದದಲ್ಲಿ ತೊಡಗಿರುವ ಗ್ಯಾಂಗ್ ಈ ಸಹೋದರಿಯರನ್ನ ಗುರಿಯಾಗಿಸಿಕೊಂಡಿದೆ ಎಂಬುದನ್ನೂ ಕಂಡುಕೊಂಡರು. ಇಲ್ಲಿಂದ ತನಿಖೆ ಶುರು ಮಾಡಿದ ಪೊಲೀಸರು ದಂಧೆಯನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ಗುಂಪು ಐಸಿಸ್‌ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಂದಿಗೆ ಮಾತನಾಡಿದ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕೃಷ್ಣ, ಮತಾಂತರ ದಂಧೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ʻಮಿಷನ್ ಅಸ್ಮಿತಾʼಕಾರ್ಯಾಚರಣೆ ಆರಂಭಿಸಿದ್ದು, ಮತಾಂತರ ಸಿಂಡಿಕೇಟ್‌ನ ಪ್ರಮುಖರಾದ ಮೊಹಮ್ಮದ್ ಉಮರ್ ಗೌತಮ್ ಮತ್ತು ಮುಫ್ತಿ ಜಹಾಂಗೀರ್ ಆಲಂ ಖಾಸ್ಮಿನನ್ನ ವಿಶೇಷ ತಂಡ ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಛಂಗೂರ್ ಬಾಬಾ ನೇತೃತ್ವದ ಸಿಂಡಿಕೇಟ್ ವಿಚಾರಣೆಯನ್ನ ಎಸ್ ಐಟಿ ಮತ್ತು ವಿಶೇಷ ಕಾರ್ಯಪಡೆ ಮುಂದುವರೆಸಿವೆ. ಲವ್ ಜಿಹಾದ್, ಅಕ್ರಮವಾಗಿ ಮತಾಂತರ ದಂಧೆ ನಡೆಸುವವರು, ತೀವ್ರವಾದಿಗಳು ಮತ್ತು ಜಾಗತಿಕ ಮಟ್ಟದಲ್ಲಿರುವ ಜಿಹಾದಿಗಳ ಜೊತೆಗೆ ಸೇರಿಕೊಂಡು ರಾಷ್ಟ್ರದ ಭದ್ರತೆಗೆ ಧಕ್ಕೆ ತರಲು ಪ್ರಯತ್ನಿಸುವ ಜಾಲದೊಂದಿಗೆ ಕೈ ಜೋಡಿಸುತ್ತಿರುವುದು ಕಂಡುಬಂದಿದೆ. ಈ ಸಂಬಂಧ ಆರು ರಾಜ್ಯಗಳಾದ್ಯಂತ 10 ಜನರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಮೆರಿಕ, ಕೆನಡಾದಿಂದ ಫಂಡಿಂಗ್‌ : ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಇನ್ನಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಈ ಕುರಿತು ಮಾಹಿತಿ ನೀಡಿರುವ ಆಗ್ರಾ ಪೊಲೀಸ್‌ ಆಯುಕ್ತ, ಈ ಮತಾಂತರ ದಂಧೆಗೆ ಅಮೆರಿಕ ಮತ್ತು ಕೆನಡಾ ಸೇರಿದಂತೆ ವಿದೇಶಗಳಿಂದ ಹಣೆ ಹೊಳೆಯೇ ಹರಿದುಬಂದಿದೆ. ಸದ್ಯಕ್ಕೆ ಅಮೆರಿಕ ಮತ್ತು ಕೆನಡಾದ ಹಣದ ಮೂಲದ ಬಗ್ಗೆ ಸುಳಿವು ಸಿಕ್ಕಿದೆ. ಉಳಿದ ದೇಶಗಳಿಂದ ಹಣ ಸಂದಾಯವಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆ ವಿಶೇಷ ಕಾರ್ಯಪಡೆ (STF) ಮತ್ತು ಭಯೋತ್ಪಾದನಾ ನಿಗ್ರಹ ದಳ (ATS) ಸೇರಿದಂತೆ ವಿಶೇಷ ಘಟಕಗಳನ್ನು ಕರೆಸಿಕೊಂಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಶ್ರೀಮಂತ ಉದ್ಯಮಿಗಳಿಗೆ ಬಹುಕೋಟಿ ರೂ.ವಂಚನೆ ಪ್ರಕರಣ: ರೋಶನ್ ಸಲ್ಡಾನ ಬ್ಯಾಂಕ್ ಖಾತೆ ಸ್ತಬ್ಧಕ್ಕೆ ತನಿಖಾಧಿಕಾರಿಗಳು ಸೂಚನೆ

Next Post

ಮಂಗಳೂರು: ಇನ್‌ಸ್ಟಾಗ್ರಾಮ್ ಮೂಲಕ ಅಪ್ರಾಪ್ತ ಬಾಲಕಿಯ ಪರಿಚಯ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಯುವಕರ ಬಂಧನ

Related Posts

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!
ಕ್ರೈಮ್ ನ್ಯೂಸ್

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

April 27, 2026
159
ಬೆಳ್ತಂಗಡಿ ಐತಿಹಾಸಿಕ ಬಳಂಜ ಪಂಚಲಿಂಗೇಶ್ವರ ದೇಗುಲಕ್ಕೆ ನುಗ್ಗಿ ದಾಂಧಲೆ: ದೈವದ ಪರಿಕರಗಳನ್ನ ಚೆಲ್ಲಾಪಿಲ್ಲಿ ಮಾಡಿದ ಪದವೀಧರ
ಕ್ರೈಮ್ ನ್ಯೂಸ್

ಬೆಳ್ತಂಗಡಿ ಐತಿಹಾಸಿಕ ಬಳಂಜ ಪಂಚಲಿಂಗೇಶ್ವರ ದೇಗುಲಕ್ಕೆ ನುಗ್ಗಿ ದಾಂಧಲೆ: ದೈವದ ಪರಿಕರಗಳನ್ನ ಚೆಲ್ಲಾಪಿಲ್ಲಿ ಮಾಡಿದ ಪದವೀಧರ

April 24, 2026
64
Next Post
ಮಂಗಳೂರು: ಇನ್‌ಸ್ಟಾಗ್ರಾಮ್ ಮೂಲಕ ಅಪ್ರಾಪ್ತ ಬಾಲಕಿಯ ಪರಿಚಯ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಯುವಕರ ಬಂಧನ

ಮಂಗಳೂರು: ಇನ್‌ಸ್ಟಾಗ್ರಾಮ್ ಮೂಲಕ ಅಪ್ರಾಪ್ತ ಬಾಲಕಿಯ ಪರಿಚಯ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಯುವಕರ ಬಂಧನ

Discussion about this post

Recent News

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

April 27, 2026
159
ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

April 26, 2026
20
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

ಕಣ್ಣೂರು : ಮಾದಕ ವ್ಯಸನಿ ಮಗನಿಂದ ತಾಯಿಯನ್ನು ಚಾಕುವಿನಿಂದ ಕೊಚ್ಚಿ ಬರ್ಬರ ಹತ್ಯೆ..!

April 27, 2026
ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

April 26, 2026
ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

April 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d