ಮಂಗಳೂರು: ನಗರದ ಕೇಂದ್ರ ಕಾರಾಗೃಹದ ಬಳಿ ಇರುವ ಡಯಟ್ ನಲ್ಲಿ ಮೂವರು ಮಹಿಳೆಯರ ಮೇಲೆ ಅಪರಿಚಿತನಿಂದ ಮಚ್ಚಿನಿಂದ ದಾಳಿ ನಡೆದ ಬಗ್ಗೆ ವರದಿಯಾಗಿದೆ.
ಸ್ಟೆನೋ ಗ್ರಾಫರ್ ಆಗಿರುವ ನಿರ್ಮಲಾ (43) ತಲೆ ಮತ್ತು ಕೈಗೆ ಗಂಭೀರ ಗಾಯಗೊಂಡಿದ್ದಾರೆ. ಪ್ರಥಮ ದರ್ಜೆ ಸಹಾಯಕಿ ಆಗಿರುವ ರೀನಾ ರಾಯ್(45) ಮತ್ತು ಅಟೆಂಡರ್ ಗುಣವತಿ (58) ಅವರಿಗೂ ಕತ್ತಿಯೇಟು ಬಿದ್ದಿದ್ದು ತಲೆ, ಕೈ, ಬೆನ್ನಿಗೆ ಕಡಿದ ಗಾಯಕ್ಕೀಡಾಗಿದ್ದಾರೆ. ಕತ್ತಿ ತೆಗೆದು ಬೀಸಿದ್ದನ್ನು ನೋಡಿದ ಮಹಿಳಾ ಸಿಬಂದಿಯೊಬ್ಬರು ಹೊರಗೆ ಬಂದಿದ್ದು ಕಟ್ಟಡದ ಹೊರಗೆ ಇದ್ದ ಜೈಲು ಸೆಕ್ಯುರಿಟಿಗೆ ತಿಳಿಸಿದ್ದಾರೆ. ಕೂಡಲೇ ಆ ಸಿಬಂದಿ ತಮ್ಮ ಜೈಲು ಸಿಬಂದಿ ಪೊಲೀಸರನ್ನು ಕರೆದಿದ್ದು ಅಲ್ಲಿಗೆ ತೆರಳುವಷ್ಟರಲ್ಲಿ ಮೂವರಿಗೆ ಹಲ್ಲೆ ಮಾಡಿ, ಚೇರ್ ಒಂದರಲ್ಲಿ ಕತ್ತಿ ಹಿಡಿದು ಕುಳಿತಿದ್ದ.
ತಕ್ಷಣವೇ ಮಹಿಳೆಯರು ಬೊಬ್ಬೆ ಹೊಡೆದಿದ್ದಾರೆ.ಬೊಬ್ಬೆ ಕೇಳಿ ಹತ್ತಿರದಲ್ಲೇ ಇದ್ದ ಜೈಲು ಸಿಬ್ಬಂದಿ ಓಡೋಡಿ ಬಂದಿದ್ದಾರೆ. ತಕ್ಷಣವೇ ಆರೋಪಿಯನ್ನು ಸ್ಥಳೀಯರು ಹಿಡಿದಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್, ಜಿಪಂ ಸಿಇಓ ಕುಮಾರ್, ಡಿಡಿಪಿಐ ಸೇರಿದಂತೆ ಅಧಿಕಾರಿಗಳು ವಿಷಯ ತಿಳಿದು ದೌಡಾಯಿಸಿ ಬಂದಿದ್ದು ಪರಿಶೀಲನೆ ನಡೆಸಿದ್ದಾರೆ. ಆರೋಪಿ 35 ವರ್ಷದ ಯುವಕನಾಗಿದ್ದು ಯಾಕಾಗಿ ಈ ಕೃತ್ಯ ನಡೆಸಿದ್ದಾನೆ. ಆತನ ಉದ್ದೇಶ ಏನಿತ್ತು ಎಂಬುದನ್ನು ತನಿಖೆ ನಡೆಸಬೇಕಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಗಾಯಾಳು ಮೂವರು ಸಿಬಂದಿಯನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು ಅಗತ್ಯ ಚಿಕಿತ್ಸೆ ನೀಡಲಾಗುವುದು. ಸದ್ಯಕ್ಕೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಜಿಪಂ ಸಿಇಓ ಕುಮಾರ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post