ಕೋಲ್ಕತ್ತ: ವ್ಯಕ್ತಿಯೊಬ್ಬರ ಹೆಸರನ್ನು ರೇಷನ್ ಕಾರ್ಡ್‌ನಲ್ಲಿ ದತ್ತಾ ಬದಲು ಕುತ್ತಾ (ನಾಯಿ) ಎಂದು ದಾಖಲು ಮಾಡಿದ್ದಕ್ಕೆ ಆತ ಸಂಬಂಧಿಸಿದ ಅಧಿಕಾರಿಗಳಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾನೆ. ಈ ಘಟನೆ ಪಶ್ಚಿಮ ಬಂಗಾಳದ ಬಂಕುರಾದಲ್ಲಿ ನಡೆದಿದೆ.

'Kutta' was written instead of Dutta in the ration card, so the person got angry, started barking in front of the officer pic.twitter.com/tCFu7ajvNj
— Rahil Gupta (@RahilGupta) November 19, 2022
ಶ್ರೀಕಾಂತಿ ಕುಮಾರ್ ದತ್ತಾ ಎನ್ನುವ ವ್ಯಕ್ತಿಯ ಹೆಸರಲ್ಲಿ ದತ್ತಾ ಬದಲು ಕುತ್ತಾ ಎಂದು ತಪ್ಪಾಗಿ ನಮೂದಿಸಲಾಗಿದೆ. ಇದರಿಂದ ಕೆರಳಿದ ಶ್ರೀಕಾಂತಿ ಕುಮಾರ್ ಬಂಕುರಾದ ಸ್ಥಳೀಯ ಪಾಲಿಕೆ ಅಧಿಕಾರಿ ಕಾರಿನಲ್ಲಿ ಬರುವಾಗ ಎದುರು ಹೋಗಿ ಪ್ರತಿಭಟನೆ ರೂಪವಾಗಿ ಯಾವುದೇ ಒಂದು ಮಾತು ಮಾತನಾಡದೇ ಬೌ ಬೌ ಎಂದು ಬೊಗಳಿದ್ದಾನೆ. ಇದರಿಂದ ಕಂಗಾಲದ ಅಧಿಕಾರಿ ದಾಖಲೆ ನೋಡಿ ಹೌಹಾರಿದ್ದಾರೆ.
ಕಡೆಗೂ ಸುಮ್ಮನಾಗದ ಶ್ರೀಕಾಂತಿ ಕುಮಾರ್ ದತ್ತಾ, ನಾಯಿಯ ಹಾಗೇ ಬೊಗಳಿ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿದೆ. ಕಡೆಗೆ ಅಧಿಕಾರಿಗಳು ಸರಿ ಮಾಡುವುದಾಗಿ ಭರವಸೆ ನೀಡಿ ಕಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post