ಉಡುಪಿ, ಡಿ.20: ನಗರದ ಅಜ್ಜರಕಾಡಿನಲ್ಲಿರುವ ಸಹಕಾರಿ ಸಂಸ್ಥೆಯ ಇಬ್ಬರು ಮಹಿಳಾ ಉದ್ಯೋಗಿಗಳಿಗೆ ಸಂಸ್ಥೆಯ 5 ಮಂದಿ ಲೈಂಗಿಕ ಕಿರುಕುಳ ಮತ್ತು ಜೀವ ಬೆದರಿಕೆ ಒಡ್ಡಿದ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಂತ್ರಸ್ತ ಮಹಿಳೆಯರು ತಾವು ಈ ಸಹಕಾರಿ ಸಂಸ್ಥೆಯ 25 ವರ್ಷಗಳಿಂದ ಉದ್ಯೋಗ ನಡೆಸುತ್ತಿದ್ದು, ಕಳೆದೆರಡು ವರ್ಷಗಳಿಂದ ಸಂಸ್ಥೆಯ ನಿರ್ದೇಶಕರ ಬಣವೊಂದು ತಮಗೆ ಕಿರುಕುಳ ನೀಡುತ್ತಿದೆ ಎಂದು ದೂರಿದ್ದಾರೆ ನಾಲ್ಕು ವರ್ಷಗಳ ಹಿಂದೆ ನಿರ್ದೇಶಕ ಮಧ್ಯೆ ಒಡಕಿನಿಂದ ಎರಡು ಬಣಗಳಾಗಿದ್ದು, ಆರೋಪಿಗಳ ಬಣವು 2022 ರ ಮೇ 4 ರಂದು ನಡೆದ ಸಿಬ್ಬಂದಿ ಸಭೆಯಲ್ಲಿ ಸಂತ್ರಸ್ತ ಮಹಿಳೆಯರಿಬ್ಬರಿಗೆ ರಾಜಿನಾಮೆ ನೀಡವಂತೆ ಗದರಿಸಿದ್ದರು. ಅಲ್ಲದೆ ಕಚೇರಿಯ ಬಾಗಿಲು ಹಾಕಿ, ಲೈಟ್ ಆಫ್ ಮಾಡಿ ಕೂಡಿ ಹಾಕಿದ್ದು, ಅವಾಚ್ಯ ಶಬ್ದಗಳಿಂದ ಬೈದಿರುವುದು, ಸೀರೆ ಎಳೆದಿರುವುದಾಗಿ ಆರೋಪಿಸಿದ್ದಾರೆ.
ಅಲ್ಲದೆ, ಮೆಮೋ ನೀಡಿ, ಸಂಬಳದಲ್ಲಿ 2,000 ರೂ ಕಡಿತಗೊಳಿಸಿದ್ದು, ಠೇವಣಿ ವಿಭಾಗದಿಂದ ಸಾಲ ವಿಭಾಗಕ್ಕೆ ವರ್ಗಾಯಿಸಿರುವುದು, ತಮ್ಮ ಕಂಪ್ಯೂಟರ್‌ಪಾಸ್ ವರ್ಡ್ ಕದ್ದಿದ್ದು, ಸಾಲದ ಅರ್ಜಿಗಳನ್ನು ಮತ್ತು ಕಡತಗಳನ್ನು ಅಡಗಿಸಿಟ್ಟಿದ್ದು, ಕೈಯನ್ನು ಎಳೆದಾಡಿದ್ದು ಕಚೇರಿಯಲ್ಲಿ ಹರಿತವಾದ ಆಯುಧವನ್ನು ತಂದಿಟ್ಟು ಹೆದರಿಸಿರುವುದು ಇತ್ಯಾದಿ ಕೃತ್ರಗಳನ್ನು ಎಸಗಿದ್ದಾರೆ ಎಂದು ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ. ಠಾಣೆಯಲ್ಲಿ ದೂರು ನೀಡಿದರೆ ಕೆಲಸದಿಂದ ತೆಗೆದು ಹಾಕುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದವರು ಆರೋಪಿಸಿದ್ದಾರೆ
Discover more from Coastal Times Kannada
Subscribe to get the latest posts sent to your email.
Discussion about this post