ಮಂಗಳೂರು: ಮಂಗಳೂರಿನ ಮುಸ್ಲಿಂ ಯುವತಿಯೊಬ್ಬಳು ತನ್ನ 21ನೇ ವಯಸ್ಸಿಗೆ ಪೈಲೆಟ್ ಆಗುವ ಮೂಲಕ ಕರಾವಳಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ, ಮುಹಮ್ಮದ್ ಹನೀಫ್ ಮತ್ತು ನಾಝಿಯಾ ದಂಪತಿಗೆ ಜನಿಸಿದ ನಾಲ್ವರು ಮಕ್ಕಳಲ್ಲಿ ಹನಿಯಾ ಮೊದಲನೆಯವಳು, ಮೂಲತಃ ಕಾಪುನವರು ಮತ್ತು ಪ್ರಸ್ತುತ ಮಂಗಳೂರಿನ ಪಾಂಡೇಶ್ವರ ನಿವಾಸಿ.
ವಿಮಾನಯಾನ ಇನ್ನೂ ಅನೇಕರಿಗೆ ಅಚ್ಚರಿಯ ವಿಷಯ. ವಿಶೇಷವಾಗಿ ಹಾರುವ, ಇದು ಬಹಳ ರೋಮಾಂಚನಕಾರಿಯಾಗಿದೆ. ಪೈಲಟ್ ಆಗುವುದು ಸಾಮಾನ್ಯ ವಿಷಯವಲ್ಲ. ಶೈಕ್ಷಣಿಕ ಅರ್ಹತೆಗಳು, ಕಠಿಣ ತರಬೇತಿ ಮತ್ತು ದೈಹಿಕ ಸಾಮರ್ಥ್ಯ ಎಷ್ಟು ಮುಖ್ಯವೋ, ಮಾನಸಿಕ ಗಟ್ಟಿತನವೂ ಅಷ್ಟೇ ಮುಖ್ಯ. ಪೈಲಟ್ ಆಗಿರುವುದು ಸಾಹಸಮಯ. ಮಂಗಳೂರಿನ ಹನಿಯಾ ಹನೀಫ್ ಎಂಬ ಯುವತಿ ಇಂತಹ ಸಾಧನೆ ಮಾಡಿದ್ದಾಳೆ. ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನದಿಂದ ಹನಿಯಾ ಇದೀಗ ವಾಣಿಜ್ಯ ಪೈಲಟ್ ಪರವಾನಗಿ ಪಡೆದು ಅಧಿಕೃತ ಪೈಲಟ್ ಆಗಿದ್ದಾರೆ.
ನಮ್ಮಲ್ಲಿ ಡಾಕ್ಟರ್, ಇಂಜಿನಿಯರ್ ಆಗುವವರೇ ಹೆಚ್ಚು ಇನ್ನು ಹನಿಯಾ ಅವರು 9ನೇ ತರಗತಿವರೆಗೆ ದುಬೈನ ‘ದಿ ಇಂಡಿಯನ್ ಹೈಸ್ಕೂಲ್’ನಲ್ಲಿ ಓದಿದ್ದು. ಬಳಿಕ ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಹತ್ತನೇ ತರಗತಿ ಹಾಗೂ ಪಿಯು ಶಿಕ್ಷಣವನ್ನು ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದರು.ಚಿಕ್ಕಂದಿನಿಂದಲೆ ವಿದೇಶಕ್ಕೆ ಹೋಗುತ್ತಿದ್ದ ಕಾರಣ ವಿಮಾನಗಳ ಹಾರಾಟ ಕಂಡು ಪೈಲೆಟ್ ಹಾಗಬೇಕು ಎಂದು ಹನಿಯಾ ದೃಢ ನಿರ್ಧಾರಕ್ಕೆ ಬಂದಿದ್ದರು.
ಪಿಯು ನಂತರ, ಹನಿಯಾ ಮೈಸೂರಿನ ಓರಿಯಂಟ್ ಫ್ಲೈಟ್ಸ್ ಏವಿಯೇಷನ್ ಅಕಾಡೆಮಿಗೆ ಸೇರಿಕೊಂಡರು, ಮೂರೂವರೆ ವರ್ಷಗಳ ಕಾಲ ಪೈಲಟ್ ಆಗಿ ತರಬೇತಿ ಪಡೆದರು ಮತ್ತು 21 ನೇ ವಯಸ್ಸಿನಲ್ಲಿ ತನ್ನ ವಾಣಿಜ್ಯ ಪೈಲಟ್ ಪರವಾನಗಿಯನ್ನು ಯಶಸ್ವಿಯಾಗಿ ಪಡೆದರು. ಒಟ್ಟು 206 ತಾಸುಗಳ ಕಾಲ ವಿಮಾನ ಹಾರಾಟ ನಡೆಸಿದ ಬಳಿಕ ಕಮರ್ಶಿಯಲ್ ಪೈಲಟ್ ಪರವಾನಿಗೆಯನ್ನು ಹನಿಯಾ ತನ್ನದಾಗಿಸಿಕೊಂಡಿದ್ದಾರೆ.
“ನನ್ನ ಜೀವನದಲ್ಲಿ ಪೈಲಟ್ ಆಗಬೇಕೆಂಬ ಕನಸು. ನನ್ನ ತಂದೆಯವರಿಗೂ ಅದೇ ಆಸೆ ಇತ್ತು.ಪೈಲಟ್ ತರಬೇತಿ ಎಲ್ಲರೂ ಮಾಡಬಹುದಾದ ವೃತ್ತಿಯಲ್ಲ, ವಿಶೇಷವಾಗಿ ಈ ಕ್ಷೇತ್ರದಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸಲು ಪೋಷಕರು ತುಂಬಾ ಹಿಂಜರಿಯುತ್ತಾರೆ. ಆದರೆ ನನ್ನ ಪೋಷಕರಿಂದ ನನಗೆ ದೊರೆತ ಬೆಂಬಲ ಮತ್ತು ಪ್ರೋತ್ಸಾಹ ನನ್ನನ್ನು ಇಲ್ಲಿಯವರೆಗೆ ತಲುಪುವಂತೆ ಮಾಡಿದೆ”.
Discover more from Coastal Times Kannada
Subscribe to get the latest posts sent to your email.
Discussion about this post