• About us
  • Contact us
  • Disclaimer
Sunday, June 7, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಾರ್ವಜನಿಕರಲ್ಲಿ ಪ್ರವೇಶ ಮಾಡಿದಾಗ ಚಪ್ಪಲಿ ಹಾರ ಹಾಕಿಕೊಳ್ಳಲೂ ಸಿದ್ಧವಾಗಿರಬೇಕು – ಪ್ರಮೋದ್ ಮುತಾಲಿಕ್

Coastal Times by Coastal Times
May 21, 2023
in ಕರಾವಳಿ
ಸಾರ್ವಜನಿಕರಲ್ಲಿ ಪ್ರವೇಶ ಮಾಡಿದಾಗ ಚಪ್ಪಲಿ ಹಾರ ಹಾಕಿಕೊಳ್ಳಲೂ ಸಿದ್ಧವಾಗಿರಬೇಕು – ಪ್ರಮೋದ್ ಮುತಾಲಿಕ್
84
VIEWS
WhatsappTelegramShare on FacebookShare on Twitter

ಪುತ್ತೂರು: ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆದಿರುವ ಅಮಾನುಷ ಹಲ್ಲೆ ಅಕ್ಷಮ್ಯ ಅಪರಾಧವಾಗಿದೆ. ಈ ಪ್ರಕರಣದ ಪ್ರಮುಖ ವ್ಯಕ್ತಿ ಆಗಿರುವ ಡಿವೈಎಸ್ಪಿ ಅವರನ್ನು ತಕ್ಷಣ ಸಸ್ಪೆಂಡ್ ಮಾಡಬೇಕು. ಆತನ ಅಮಾನತು ಆಗುವ ತನಕ ಶ್ರೀರಾಮ ಸೇನೆ ಹೋರಾಟ ನಡೆಸಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಪುತ್ತೂರಿನಲ್ಲಿ ನಡೆದ ಈ ಘಟನೆ ಅತ್ಯಂತ ಅಮಾನುಷ. ಹಲ್ಲೆಗೊಳಗಾದವರು ಬಾಲ್ಯದಿಂದಲೇ ಸ್ವಯಂಸೇವಕರಾಗಿ ಸಿದ್ಧಾಂತಕ್ಕೆ ಬದ್ಧರಾಗಿ ದುಡಿದವರಾಗಿದ್ದಾರೆ. ಬ್ರಿಟಿಷರ ಮಾದರಿ ಅವರ ಮೇಲೆ ಕೌರ್ಯ ಮೆರೆದಿರುವುದು ಅಕ್ಷಮ್ಯ ಅಪರಾಧವಾಗಿದೆ. ಬ್ಯಾನರ್​​ಗೆ ಚಪ್ಪಲಿ ಹಾರ ಹಾಕಿದ್ದಾರೆ ಎಂಬ ಕಾರಣಕ್ಕಾಗಿ ಈ ರೀತಿ ಮಾಡಿರುವುದು ಸರಿಯಲ್ಲ. ಸಾರ್ವಜನಿಕರಲ್ಲಿ ಪ್ರವೇಶ ಮಾಡಿದಾಗ ಹೂವಿನ ಹಾರ ಹಾಕಿಕೊಳ್ಳುವುದಕ್ಕೂ ಸಿದ್ಧರಿರಬೇಕು. ಚಪ್ಪಲಿ ಹಾರ ಹಾಕಿಕೊಳ್ಳಲೂ ಸಿದ್ಧವಾಗಿರಬೇಕು. ಮಾನ ಅಪಮಾನ ಸನ್ಮಾನ ಎಲ್ಲವನ್ನೂ ಸಮಾನವಾಗಿ ನೋಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುತ್ತೂರಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿರುವ ಸಂತ್ರಸ್ತರನ್ನು ಶನಿವಾರ ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇಂದು ಆಡಳಿತಕ್ಕೆ ಬಂದಿದೆ. ಶ್ರೀರಾಮಸೇನೆಯಿಂದ ರಾಜ್ಯದ ಗೃಹಮಂತ್ರಿ ಆಗುವವರಿಗೆ ಮನವಿ ಕೊಟ್ಟು ಪ್ರಕರಣದಲ್ಲಿ ನೇರ ಭಾಗಿಯಾದ ಇಲಾಖಾಧಿಕಾರಿ ಮತ್ತು ಅದರ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಗುವುದು. ಈ ಪ್ರಕರಣದ ಮೂಲ ವ್ಯಕ್ತಿ ಡಿವೈಎಸ್ಪಿ ಆಗಿದ್ದು, ಅವರನ್ನು ಸಸ್ಪೆಂಡ್ ಮಾಡುವವರೆಗೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಗೃಹಸಚಿವರಿಗೆ ತಿಳಿಸುತ್ತೇವೆ ಎಂದು ಹೇಳಿದರು.

ಪ್ರಕರಣ ಮುಚ್ಚಿಹಾಕುವ ತಂತ್ರಗಾರಿಕೆ ಬೇಡ. ಬೇರೆಯವರ ಮೇಲೆ ಕೆಸರೆರೆಚುವ, ತಪ್ಪುಹೊರಿಸುವ ಕೆಲಸ ಮಾಡಿ ಅಪಹಾಸ್ಯಕ್ಕೊಳಗಾಗಬೇಡಿ. ಹಿಂದೂಗಳ ನಡುವಿನ ಕಚ್ಚಾಟದಿಂದಾಗಿ ಬೇರೆಯವರು ನಗುವಂತಾಗಿದೆ. ಈ ವಿದ್ಯಮಾನ ಬೇರೆಯವರಿಗೆ ಖುಷಿಕೊಡುತ್ತಿದೆ. ದ್ವೇಷ ಅಸೂಯೆ ಕ್ಷೇಮ ತರುವಂತದ್ದಲ್ಲ ಎಂದು ಅವರು, ಪ್ರಭಾಕರ್ ಭಟ್ ಕಾಂಗ್ರೆಸ್ ಬಗ್ಗೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ಮುತಾಲಿಕ್ ವಕೀಲ ಹರೀಶ್ ಅಧಿಕಾರಿ, ಚಿತ್ತರಂಜನ್ ದಾಸ್, ಸುಭಾಶ್ ಹೆಗ್ಡೆ, ರೂಪಾ ಶೆಟ್ಟಿ, ಸುಧೀರ್ ಆಚಾರ್, ಸಂತೋಷ್ ಮತ್ತಿತರರು ಇದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ನಾರಾಯಣ ನೇತ್ರಾಲಯದ ಮುಖ್ಯಸ್ಥ, ಖ್ಯಾತ ನೇತ್ರತಜ್ಞ ಡಾ ಭುಜಂಗ ಶೆಟ್ಟಿ ನಿಧನ, ಹೃದಯಾಘಾತದಿಂದ ಕೊನೆಯುಸಿರು

Next Post

ಮಂಗಳೂರಿನ ಮುಸ್ಲಿಂ ಯುವತಿ ಕ್ಯಾಪ್ಟನ್ ಹನಿಯಾ ಹನೀಫ್ ಪೈಲಟ್ ಆಗುವ ಕನಸು ನನಸು

Related Posts

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು
ಕರಾವಳಿ

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು

June 7, 2026
13
ಕರ್ನಾಟಕದ 34ನೇ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ
ಕರಾವಳಿ

ಕರ್ನಾಟಕದ 34ನೇ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ

June 3, 2026
32
Next Post
ಮಂಗಳೂರಿನ ಮುಸ್ಲಿಂ ಯುವತಿ ಕ್ಯಾಪ್ಟನ್ ಹನಿಯಾ ಹನೀಫ್ ಪೈಲಟ್ ಆಗುವ ಕನಸು ನನಸು

ಮಂಗಳೂರಿನ ಮುಸ್ಲಿಂ ಯುವತಿ ಕ್ಯಾಪ್ಟನ್ ಹನಿಯಾ ಹನೀಫ್ ಪೈಲಟ್ ಆಗುವ ಕನಸು ನನಸು

Discussion about this post

Recent News

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು

June 7, 2026
13
ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿಬಳಿ , ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿಬಳಿ , ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

June 7, 2026
33
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು

ಕಾಸರಗೋಡು: ಭಾರೀ ಮಳೆಗೆ ಮನೆಯ ಆವರಣದ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಮೃತ್ಯು

June 7, 2026
ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿಬಳಿ , ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

ಮಂಗಳೂರು: ಹೊಯಿಗೆ ಬಜಾರ್‌, ಪದವಿನಂಗಡಿಬಳಿ , ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, 16.40 ಲಕ್ಷ ರೂ. ಎಂಡಿಎಂಎ ಜಪ್ತಿ

June 7, 2026
ಬಂಟ್ವಾಳ: ಕಾರಿನಲ್ಲಿ 7.64 ಲಕ್ಷ ಮೌಲ್ಯದ ಎಂಡಿಎಂಎ ಸಾಗಾಟ ಮೂವರು ಅರೆಸ್ಟ್

ಬಂಟ್ವಾಳ: ಕಾರಿನಲ್ಲಿ 7.64 ಲಕ್ಷ ಮೌಲ್ಯದ ಎಂಡಿಎಂಎ ಸಾಗಾಟ ಮೂವರು ಅರೆಸ್ಟ್

June 6, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d