ಮಂಗಳೂರು: ನಗರದ ಮುಂಚೂಣಿಯ ಕಟ್ಟಡ ನಿರ್ಮಾಣ ಸಂಸ್ಥೆ ರೋಹನ್ ಕಾಪೊರೇಷನ್ ಅವರ ಅತೀ ದೊಡ್ಡ ಹಾಗೂ ವಿಶಿಷ್ಟವಾದ ರೋಹನ್ ಸಿಟಿ ಬಿಜೈನ ವಾಣಿಜ್ಯ ಮಳಿಗೆಗಳಲ್ಲಿ ವಿನಿಯೋಗಿಸಿ; ಖಚಿತ ಶೇ.7.50 ಪ್ರತಿಫಲವನ್ನು ಪಡೆಯಿರಿ ಯೋಜನೆ ಪ್ರಕಟಿಸಲಾಗಿದೆ.
ರೋಹನ್ ಸಿಟಿಯ ನೆಲ ಮತ್ತು ಮೇಲಿನ 2 ವಾಣಿಜ್ಯ ಮಳಿಗೆಗಳು ಹೈಟೆಕ್ ಮಾರ್ಕೆಟ್, ರಿಟೇಲ್ ಮತ್ತು ಹೋಲ್‌ಸೇಲ್, ಕಾರ್ಪೊರೇಟ್ ಹಾಗೂ ಇತರ ಆಫೀಸ್‌ಗಳು, ಫುಡ್ ಕೋರ್ಟ್‌ಗಳು, ಸಿಎ, ಲಾಯರ್ ಆಫೀಸ್ ಮತ್ತು ಕ್ಲಿನಿಕ್‌ಗಳಿಗೆ ಪ್ರಶಸ್ತವಾಗಿದ್ದು, ಕಟ್ಟಡ ನಿರ್ಮಾಣ ಕೊನೆಗೊಳ್ಳುವವರೆಗೆ ಖರೀದಿದಾರರಿಗೆ ಹೂಡಿಕೆ ಮೇಲೆ ಶೇ 7.50 ಆದಾಯ ನೀಡಲಾಗುವುದು. ರೋಹನ್ ಸಿಟಿ, ಮಂಗಳೂರಿನ ಪ್ರಮುಖ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಉತ್ತಮ ಬಾಡಿಗೆಯ ಸಾಧ್ಯತೆ ಅಧಿಕವಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಯೋಜನೆಯು 6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. 1405ರಿಂದ 1505 ಚದರ ಅಡಿ 3 ಬಿಎಚ್‌ಕೆ, 1075ರಿಂದ 1135 ಚದರ ಅಡಿ 2 ಬಿಎಚ್‌ಕೆ, 700ರಿಂದ 815 ಚದರ ಅಡಿ 1 ಬಿಎಚ್‌ಕೆಯ ಡ್ಯುಪ್ಲೆಕ್ಸ್ ಪ್ಲ್ರಾಟ್‌ಗಳನ್ನು ಹೊಂದಿದೆ. ವಸತಿ ಪ್ರದೇಶದ ಜತೆಗೆ, 284 ಪ್ರತ್ಯೇಕ ಘಟಕಗಳನ್ನು ಒಳ ಗೊಂಡಿರುವ 2 ಲಕ್ಷ ಚದರ ಅಡಿ ವಾಣಿಜ್ಯ ಮಳಿಗೆಗಳಿವೆ. ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆ ಹೊಂದಿದ್ದು, ಉನ್ನತವಾಗಿ ವಿನ್ಯಾಸಗೊಳಿಸಿದ ವಸತಿ ಸಮುಚ್ಚಯ ಮತ್ತು ವಾಣಿಜ್ಯ ಮಳಿಗೆಗಳಿಗೆ ಪ್ರತ್ಯೇಕವಾದ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.
ರೋಹನ್ ಸಿಟಿ ಸಮುಚ್ಚಯದ ವೈಶಿಷ್ಟ್ಯಗಳು : 2 ಹಂತಗಳಲ್ಲಿ 35000 ಚದರ ಅಡಿ ಹೈಪರ್ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳಿಗೆ 2 ಎಸ್ಕಲೇಟರ್ ವ್ಯವಸ್ಥೆ, ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೊಟೇಲ್, ಅತ್ಯಾಧುನಿಕ ಕ್ಲಬ್ ಹಾಗೂ ಇನ್ನಿತರ ಸೌಲಭ್ಯಗಳು ಒಂದೇ ಸೂರಿನಡಿ, ಬ್ಯಾಂಕ್‌ಗಳಿಂದ ತ್ವರಿತ ಸಾಲ ಸೌಲಭ್ಯ, ಅತ್ಯಾಧುನಿಕ ಭದ್ರತಾ ವ್ಯವಸ್ಥೆ, ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ವ್ಯವಸ್ಥೆ, ಸೌರ ಶಕ್ತಿ ಸಂಗ್ರಹ ಘಟಕ, ಲೈಟಿಂಗ್ ಆಟೊಮೇಶನ್ (ಮಂಗಳೂರಿನಲ್ಲಿ ಮೊದಲ ಬಾರಿಗೆ)
ಸಿಟಿ ಕ್ಲಬ್‌ನ ವಿಶೇಷತೆಗಳು : ಸಂಪೂರ್ಣ ಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ, ಫ್ಯಾಮಿಲಿ ರೆಸ್ಟೋರೆಂಟ್, ಒಳಾಂಗಣ ಕ್ರೀಡೆ, ಜಿಮ್, ಸ್ಪಾ, ಯುನಿಸೆಕ್ಸ್ ಸಲೂನ್ ಇತ್ಯಾದಿ, 3ಡಿ ಥಿಯೇಟರ್, ಮಲ್ಟಿಪರ್ಪಸ್ ಹಾಲ್, ಸ್ವಿಮ್ಮಿಂಗ್ ಪೂಲ್ ಇತ್ಯಾದಿ. ಹೆಚ್ಚಿನ ವಿವರಗಳಿಗಾಗಿ ಮಾರಾಟ ಕಚೇರಿ, ರೋಹನ್ ಸಿಟಿ, ಬಿಜೈ ಮುಖ್ಯರಸ್ತೆ, ಮಂಗಳೂರು.
ವೆಬ್ ಸೈಟ್: http://www.rohancorporation.in
Discover more from Coastal Times Kannada
Subscribe to get the latest posts sent to your email.
Discussion about this post