• About us
  • Contact us
  • Disclaimer
Sunday, July 5, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ನಂತೂರು ವಾಹನ ಮೇಲ್ಸೇತುವೆ ಪೂರ್ವಭಾವಿ ಕಾರ್ಯ ಪೂರ್ಣಗೊಳಿಸಿ – ಕ್ಯಾ| ಬ್ರಿಜೇಶ್‌ ಚೌಟ

Coastal Times by Coastal Times
July 21, 2024
in ಕರಾವಳಿ
ಮಂಗಳೂರು: ನಂತೂರು ವಾಹನ ಮೇಲ್ಸೇತುವೆ ಪೂರ್ವಭಾವಿ ಕಾರ್ಯ ಪೂರ್ಣಗೊಳಿಸಿ – ಕ್ಯಾ| ಬ್ರಿಜೇಶ್‌ ಚೌಟ
62
VIEWS
WhatsappTelegramShare on FacebookShare on Twitter

ಮಂಗಳೂರು: ನಂತೂರು ವಾಹನ ಮೇಲ್ಸೇತುವೆ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಅಗತ್ಯವಿರುವ ಕಟ್ಟಡ, ರಚನೆಗಳ ತೆರವು, ವಿದ್ಯುತ್‌ ಲೈನ್‌, ನೀರಿನ ಪೈಪ್‌ಲೈನ್‌ ಸ್ಥಳಾಂತರ ಕುರಿತಂತೆ ಬಾಕಿ ಇರುವ ಎಲ್ಲ ಕಾರ್ಯಗಳನ್ನೂ ತ್ವರಿತವಾಗಿ ಕೈಗೊಳ್ಳುವಂತೆ ಸಂಸದ ಕ್ಯಾ| ಬ್ರಿಜೇಶ್‌ ಚೌಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ನಂತೂರು ಹಾಗೂ ಕೆಪಿಟಿಯ ವಾಹನ ಮೇಲ್ಸೇತುವೆಗಳ ಕುರಿತು ಶನಿವಾರ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು.

ನಗರದ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಹಿಂದೆ ನಿರ್ಮಿಸಿರುವ ಫ್ಲೆಓವರ್‌ಗಳು ಗುಣಮಟ್ಟ ಹೊಂದಿಲ್ಲ. ಅದು ಎನ್‌ಎಚ್‌ಎಐನ ಘನತೆಗೂ ತಕ್ಕು ದಲ್ಲ. ಹಾಗಾಗಿ ಈಗ ನಿರ್ಮಿಸುವ ಹೊಸ ಮೇಲ್ಸೇತುವೆಗಳು ನಗರದ ಸಮಗ್ರ ಅಭಿವೃದ್ಧಿ, ಸುಗಮ ಸಂಚಾರಕ್ಕೆ ಪೂರಕವಾಗಿರುವಂತೆ ನೋಡಿ ಕೊಳ್ಳ ಬೇಕು ಎಂದು ಸಂಸದರು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್‌ ಅಜ್ಮಿಗೆ ಸೂಚಿಸಿದರು.

60 ಕೋಟಿ ರೂ. ವೆಚ್ಚದ ಪ್ರಸ್ತಾವಿತ ಮೇಲ್ಸೇತುವೆಗೆ ಸದ್ಯ ಪರಿಶಿಷ್ಟ ವಿದ್ಯಾರ್ಥಿಗಳ ಹಾಸ್ಟೆಲ್‌ ಕಾಂಪೌಂಡ್‌, ಮಲ್ಯ ಪ್ರತಿಮೆ ಇರುವ ಪಾರ್ಕ್‌, ಮಿಯಾವಾಕಿ ಉದ್ಯಾನವನ ಸಹಿತ ಕೆಲವೊಂದು ಅಡಚಣೆಗಳು ಬಾಕಿ ಇವೆ. ಇವುಗಳನ್ನು ಬಗೆಹರಿಸಿಕೊಂಡು ಆರಂಭದಲ್ಲಿ ನಂತೂರು ಜಂಕ್ಷನ್‌ನ ಮಧ್ಯದಲ್ಲಿ 2025ರ ಮಾರ್ಚ್‌ ವೇಳೆಗೆ ಓವರ್‌ಪಾಸ್‌ನ ಮಧ್ಯ ಭಾಗವನ್ನು ನಿರ್ಮಿಸಬಹುದು. ಆ ಬಳಿಕ ಇಕ್ಕೆಲಗಳ ಸರ್ವಿಸ್‌ ರಸ್ತೆ ಕಾಮಗಾರಿ 7 ಮೀಟರ್‌ ಅಗಲವಾಗಿ ಕೈಗೊಳ್ಳಲಾಗುವುದು. ಓವರ್‌ ಪಾಸ್‌ 9 ಮೀ. ಅಗಲ ಹೊಂದಿರಲಿದ್ದು, ಒಟ್ಟು ಕಾಮಗಾರಿ ಮುಗಿಯಲು 2 ವರ್ಷ ಬೇಕಾಗಬಹುದು ಎಂದರು.

ಸ್ಥಳೀಯ ಕಾರ್ಪೊರೇಟರ್‌ಗಳಾದ ಶಕೀಲಾ ಕಾವ ಹಾಗೂ ಮನೋಹರ್‌ ನೆರವಿನೊಂ ದಿಗೆ ಬಾಕಿ ಇರುವ ತೆರವು ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಈಗಾಗಲೇ ಹಾಕಿರುವ ಭೂಗತ ಕೇಬಲನ್ನು ಮತ್ತೆ ತೆರವು ಮಾಡಬೇಕಾಗುತ್ತದೆ. ಅದಕ್ಕಾಗಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಆದ್ಯತೆ ಮೇರೆಗೆ ಕೆಲಸ ನಡೆಸಿಕೊಡಬೇಕು ಎಂದರು. ನಂತೂರಿಗೆ ಮೂರು ಸ್ತರಗಳ ಮೇಲ್ಸೇತುವೆ ವಿನ್ಯಾಸವನ್ನು ಖಾಸಗಿ ಯಾಗಿ ಕ್ರೆಡೈ ರಚಿಸಿದ್ದು, ಅಧ್ಯಕ್ಷ ವಿನೋದ್‌ ಪಿಂಟೋ ಅವರು ಪ್ರಸ್ತುತಪಡಿಸಿದ್ದು, ಕಾರ್ಯ ಸಾಧ್ಯತೆ ಬಗ್ಗೆ ಚರ್ಚಿಸಲಾಯಿತಾದರೂ ಅದು ಅಧಿಕ ವೆಚ್ಚದಾಯಕವಾಗಿರುವ ಕಾರಣ ಒಮ್ಮತ ವ್ಯಕ್ತವಾಗಲಿಲ್ಲ.

ಕುಡಿಯುವ ನೀರಿನ ಪೈಪ್‌ಲೈನ್‌ ಸ್ಥಳಾಂತರಕ್ಕೆ 2.5 ಕೋಟಿ ರೂ. ಪ್ರಸ್ತಾವನೆಯನ್ನು ಪಾಲಿಕೆ ಸಲ್ಲಿಸಿದೆ. ಆದರೆ ಅಷ್ಟು ಮೊತ್ತ ಒದಗಿಸುವಂತಿಲ್ಲ ಎಂದು ಎನ್‌ಎಚ್‌ಎಐ ಅಧಿಕಾರಿ ಆರಂಭದಲ್ಲಿ ತಿಳಿಸಿದರು. ಆ ವಿಷಯವನ್ನು ತ್ವರಿತವಾಗಿ ಬಗೆಹರಿಸಿ ಎಂದು ಶಾಸಕ ವೇದವ್ಯಾಸ ಕಾಮತ್‌ ಸೂಚಿಸಿದರು. ಡಿ.ಸಿ. ಮುಲ್ಲೆ ಮುಗಿಲನ್‌, ಡಿಸಿಪಿ ದಿನೇಶ್‌ ಕುಮಾರ್‌, ವಿಶೇಷ ಭೂಸ್ವಾಧೀ ನಾಧಿಕಾರಿ ಇಸಾಕ್‌ ಇದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು ತೋಟಬೆಂಗ್ರೆ ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದ ವೀಡಿಯೋ ಚಿತ್ರೀಕರಣ: ಯುವಕನಿಗೆ ಧರ್ಮದೇಟು

Next Post

ಮಂಗಳೂರು: ರೋಹನ್‌ ಸಿಟಿ ವಾಣಿಜ್ಯ ಮಳಿಗೆಗಳಲ್ಲಿ ವಿನಿಯೋಗಿಸಿ ಖಚಿತ ಶೇ.7.50 ಪ್ರತಿಫ‌ಲವನ್ನು ಪಡೆಯಿರಿ

Related Posts

ಮಂಗಳೂರು: ವೈದ್ಯರ ದಿನಾಚರಣೆ: ಸಮುದಾಯ ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಸನ್ಮಾನ
ಕರಾವಳಿ

ಮಂಗಳೂರು: ವೈದ್ಯರ ದಿನಾಚರಣೆ: ಸಮುದಾಯ ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಸನ್ಮಾನ

July 4, 2026
15
ಕಾಸರಗೋಡು: ಶಾಲಾ ಮೈದಾನದಲ್ಲಿ ‘ಆಪರೇಷನ್ ತೂಫಾನ್’ ಕಾರ್ ರೇಸಿಂಗ್ ; ತಡೆಯಲು ಬಂದ ಪೊಲೀಸರ ಮೇಲೆ ಹಲ್ಲೆ , 6 ಕಾರುಗಳು ವಶಕ್ಕೆ, ಹಲವು ಯುವಕರ ಬಂಧನ
ಕರಾವಳಿ

ಕಾಸರಗೋಡು: ಶಾಲಾ ಮೈದಾನದಲ್ಲಿ ‘ಆಪರೇಷನ್ ತೂಫಾನ್’ ಕಾರ್ ರೇಸಿಂಗ್ ; ತಡೆಯಲು ಬಂದ ಪೊಲೀಸರ ಮೇಲೆ ಹಲ್ಲೆ , 6 ಕಾರುಗಳು ವಶಕ್ಕೆ, ಹಲವು ಯುವಕರ ಬಂಧನ

July 2, 2026
80
Next Post
ಮಂಗಳೂರು: ರೋಹನ್‌ ಸಿಟಿ ವಾಣಿಜ್ಯ ಮಳಿಗೆಗಳಲ್ಲಿ ವಿನಿಯೋಗಿಸಿ ಖಚಿತ ಶೇ.7.50 ಪ್ರತಿಫ‌ಲವನ್ನು ಪಡೆಯಿರಿ

ಮಂಗಳೂರು: ರೋಹನ್‌ ಸಿಟಿ ವಾಣಿಜ್ಯ ಮಳಿಗೆಗಳಲ್ಲಿ ವಿನಿಯೋಗಿಸಿ ಖಚಿತ ಶೇ.7.50 ಪ್ರತಿಫ‌ಲವನ್ನು ಪಡೆಯಿರಿ

Discussion about this post

Recent News

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

July 4, 2026
89
ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

July 4, 2026
21
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

July 4, 2026
ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

ಸೈಬರ್ ವಂಚಕರಿಗೆ ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಕೊಡುತ್ತಿದ್ದ ಆರೋಪಿಯ ಬಂಧನ

July 4, 2026
ಮಂಗಳೂರು: ವೈದ್ಯರ ದಿನಾಚರಣೆ: ಸಮುದಾಯ ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಸನ್ಮಾನ

ಮಂಗಳೂರು: ವೈದ್ಯರ ದಿನಾಚರಣೆ: ಸಮುದಾಯ ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಸನ್ಮಾನ

July 4, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d