ಬೆಂಗಳೂರು: ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಇನ್ಸ್ಟ್ರಾಗ್ರಾಮ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ಒಬ್ಬನನ್ನು ನಗರ ಈಶಾನ್ಯ ವಿಭಾಗದ ಸೈಬರ್ ಪೊಲೀಸರು, ಮೊಬೈಲ್ ಜಪ್ತಿ ಮಾಡಿದ್ದಾರೆ.
ಯಲಹಂಕ ಭಾಗದ ಖಾಸಗಿ ಕಾಲೇಜೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಧುಸೂದನ್ (45) ಎಂಬಾತನನ್ನು ವಿಚಾರಣೆ ನಡೆಸಿರುವ ಪೊಲೀಸರು ಬಳಿಕ ನೋಟಿಸ್ ನೀಡಿ ಕಳುಹಿಸಿದ್ದಾರೆ. ಆರೋಪಿ ವಿವಾಹಿತನಾಗಿದ್ದು ಮಕ್ಕಳಿರಲಿಲ್ಲ. ಮಕ್ಕಳ ಪೋರ್ನ್ ವಿಡಿಯೋ ನೋಡುವ ಚಟ ಅಂಟಿಸಿಕೊಂಡಿದ್ದನಂತೆ.
ಆನ್ಲೈನ್ನಲ್ಲಿ ಸಿಗುವ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಈತ ಇನ್ಸ್ಟ್ರಾಗ್ರಾಮ್ ಮೂಲಕ ಅಪ್‌ಲೋಡ್ ಮಾಡುತ್ತಿದ್ದ. ನಿರಂತರವಾಗಿ ವಿಡಿಯೋ ಮಾಡುತ್ತಿರುವ ಬಗ್ಗೆ ಎನ್ಸಿಆರ್ಬಿ ಅಧೀನದಲ್ಲಿರುವ ಅಧಿಕಾರಿಗಳ ತಂಡದ ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ಬೆಂಗಳೂರಿನಿಂದ ವಿಡಿಯೋ ಅಪ್ಲೋಡ್ ಮಾಡಿರುವುದು ಗೊತ್ತಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post