ಉಡುಪಿ : ತುಳುಕೂಟ ಉಡುಪಿ ಇದರ 27 ನೇ “ಎಸ್.ಯು.ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ”ಗೆ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದಿಂದ, ತುಳು ಚಳವಳಿಯ ಪ್ರವರ್ತಕರಾದ ದಿ.ಎಸ್.ಯು.ಪಣಿಯಾಡಿ ಅವರ ಸ್ಮರಣಾರ್ಥ ನೀಡುವ ಈ ಪ್ರಶಸ್ತಿಯು 8,000 ರೂ. ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
ಹಸ್ತಪ್ರತಿಯನ್ನು 25 -10 – 2021 ರೊಳಗೆ ಕಳುಹಿಸಬೇಕು. ಕಾದಂಬರಿ ಇದುವರೆಗೆ ಯಾವುದೇ ಬಹುಮಾನಗಳಿಗೆ ಆಯ್ಕೆಯಾಗಿರಬಾರದು ಮತ್ತು ಪ್ರಕಟ ಅಥವಾ ಮುದ್ರಿತವಾಗಿರಬಾರದು. ಹಸ್ತಪ್ರತಿಯನ್ನು ಮುದ್ರಿಸುವಾಗ ಕ್ರೌನ್ 1/8 ಆಕಾರದಲ್ಲಿ 120 ಪುಟಗಳಿಗಿಂತ ದೊಡ್ಡದಿರಬೇಕು. ಹಸ್ತಪ್ರತಿಯನ್ನು ಸುಂದರವಾದ ಕೈಬರಹ ಅಥವಾ ಬೆರಳಚ್ಚು ಅಥವಾ ಕಂಪ್ಯೂಟರ್ ಡಿಟಿಪಿ ರೂಪದಲ್ಲಿ ಕಳುಹಿಸಿ ಕೊಡಬೇಕು.
ಕಾದಂಬರಿಯನ್ನು, ತುಳುಕೂಟ (ರಿ) ಉಡುಪಿಯ ಕಾರ್ಯದರ್ಶಿ,ಶ್ರೀಯುತ, ಗಂಗಾಧರ್ ಕಿದಿಯೂರು.
“ಮೀನಾಕ್ಷಿ” ಕಿದಿಯೂರು.
ಪೋಸ್ಟ್ ,ಅಂಬಲಪಾಡಿ.
ಉಡುಪಿ,576103.
ಇಲ್ಲಿಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ ಮೊಬೈಲ್ 9844532629 ನ್ನು ಸಂಪರ್ಕಿಸಬಹುದು ಎಂದು ತುಳುಕೂಟ(ರಿ) ಉಡುಪಿ ಇದರ ಅಧ್ಯಕ್ಷರಾದ ಶ್ರೀಯುತ ಜಯಕರಶೆಟ್ಟಿ ಇಂದ್ರಾಳಿ ಇವರ ಸೂಚನೆಯ ಮೇರೆಗೆ ,ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಹಾಗೂ ಪಣಿಯಾಡಿ ತುಳುಕಾದಂಬರಿ ಪ್ರಶಸ್ತಿಯ ಸಂಚಾಲಕಿ,ಶ್ರೀಮತಿ ತಾರಾ ಉಮೇಶ್ ಆಚಾರ್ಯ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post