ಮಂಗಳೂರು : ಮಂಗಳೂರು ಕೆಥೋಲಿಕ್ ಧರ್ಮ ಪ್ರಾಂತ್ಯದ ಕಾರಿಸ್ತಾಟಿಕ ನವೀಕರಣ ಸಂಚಲನವು 50ನೇ ವರ್ಷಕ್ಕೆ ಪದಾ | ರ್ಪಣೆ ಮಾಡುವ ಸಂದರ್ಭದಲ್ಲಿ ‘ಗೋಲ್ಡನ್ ಜುಬಿಲಿ ಮಹಾ ಸಮ್ಮೇಳನ’ವನ್ನು ಫೆ.22ರಿಂದ 25ರ ತನಕ ಸಂಜೆ 4ರಿಂದ ರಾತ್ರಿ 8.30ರ ವರೆಗೆ ಕುಲಶೇಖರದ ಹೋಲಿ ಕ್ರಾಸ್ ಚರ್ಚ್ ಮೈದಾನದಲ್ಲಿ ಆಯೋಜಿಸಲಾಗಿದೆ. ಫೆ.22ರಂದು ಸಂಜೆ 5 ಗಂಟೆಗೆ ಮಹಾ ಸಮ್ಮೇಳನ ಉದ್ಘಾಟನೆ ನಡೆಯಲಿದ್ದು, ಪ್ರತಿ ದಿನ ದಿವ್ಯ ಬಲಿಪೂಜೆ, ಪರಮ ಪ್ರಸಾದ ಆರಾಧನೆ, ಪ್ರವಚನ ಹಾಗೂ ವಿಶೇಷ ಪ್ರಾರ್ಥನಾ ವಿಧಿ ಇರಲಿದೆ ಎಂದು ಬಿಷಪ್ ಪೀಟರ್ ಪೌಲ್ ಸಲ್ದಾನ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದ ಕಾರಿಸ್ಮಾಟಿಕ ನವೀಕರಣಕ್ಕೆ 49 ವರುಷಗಳ ಇತಿಹಾಸವಿದೆ. ಕ್ರಿ. ಶ. 1975ರಲ್ಲಿ ಅಂದಿನ ಧರ್ಮಾಧ್ಯಕ್ಷರಾದ ದಿ| ಅ| ವಂ| ಬಾಜಿಲ್ ಡಿ’ಸೋಜಾರವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಸಂಚಾಲನಕ್ಕೆ ನಿವೃತ್ತ ಧರ್ಮಾಧ್ಯಕ್ಷ ಅ ವಂ| ಡೊ| ಅಲೋಶಿಯಸ್ ಪಾವ್ ಡಿ’ಸೋಜಾರವರ ಸಹಕಾರ ಹಾಗೂ ಪ್ರಸ್ತುತ ಧರ್ಮಾಧ್ಯಕ್ಷರಾದ ಅ| ವಂ| ಡೊ| ಪೀಟರ್ ಪಾವ್ ಸಲ್ದಾನಾರವರ ಉತ್ತೇಜನ ಹಾಗೂ ಮಾರ್ಗದರ್ಶನದಿಂದ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಆಯೋಗ ಮತ್ತು ಕಥೊಲಿಕ್ ಕಾರಿಸ್ಕಾತಿಕ್ ಸೇವಾ ಸಂಚಲನದ ಪರಿಶ್ರಮದಿಂದ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ.
ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದ ಕಾರಿಸ್ಮಾಟಿಕ ನವೀಕರಣವು, ಮಂಗಳೂರು ಧರ್ಮಗುರುಗಳ, ಧಾರ್ಮಿಕ ಸಹೋದರ ಸಹೋದರಿಯರ, ಧಾರ್ಮಿಕ ಸಂಘ- ಸಂಸ್ಥೆಗಳ ಹಾಗೂ ಪ್ರಾರ್ಥನಾ ಪಂಗಡದವರ ಸಹಕಾರದಿಂದ ಈ ಧರ್ಮಪ್ರಾಂತ್ಯದಲ್ಲಿ ಹಲವಾರು ತರಬೇತಿ ಕಾರ್ಯಕ್ರಮ, ನವೀಕರಣ ಚಟುವಟಿಕೆ, ಪ್ರಾರ್ಥನಾ ಅಧಿವೇಶನ, ಜಾಗರಣಾ ಪ್ರಾರ್ಥನೆ, ಧ್ಯಾನಕೂಟ ಹಾಗೂ ಸಮ್ಮೇಳನಗಳನ್ನು ನಡೆಸಿವೆ. ಈ ಆಧ್ಯಾತ್ಮಿಕ ಕಾರ್ಯಕ್ರಮಗಳಿಂದ ಲಕ್ಷಾಂತರ ಜನರು ಇದರ ಫಲವನ್ನು ಪಡೆದಿದ್ದಾರೆ.
ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದ ಕಾರಿಸ್ಮಾಟಿಕ ನವೀಕರಣ ಸಂಚಲನವು, ತನ್ನ ಅಸ್ಥಿತ್ವದ 50ನೇ ವರುಷಂಕ್ಕೆ ಕಾಲಿಡುವ ಸಂಭ್ರಮದ ಈ ಸುಸಂದರ್ಭದಲ್ಲಿ ‘ಗೋಲ್ಡನ್ ಜುಬಿಲಿ ಮಹಾ ಸಮ್ಮೇಳನ’ವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದ ಉದ್ಘಾಟನೆಯು, ಮಂಗಳೂರು ಕುಲೇಕರದ ಹೋಲಿ ಕ್ರೂಸ್ ಚಚ್‌ರ್ನ ಮೈದಾನದಲ್ಲಿ ಫೆಬ್ರವರಿ 22 ತಾರೀಕಿನಂದು ನಡೆದು, ಅಂದಿನಿಂದ 25 ತಾರೀಕಿನ ವರೆಗೆ; ಸಂಜೆ 4.00 ಗಂಟೆಯಿಂದ ರಾತ್ರಿ 8.30 ಗಂಟೆಯ ವರೆಗೆ ಜರುಗಲಿರುವುದು. ಈ ಧಾರ್ಮಿಕ ಸಮ್ಮೇಳನದಲ್ಲಿ ದಿವ್ಯ ಬಲಿಪೂಜೆ, ಪರಮ ಪ್ರಸಾದದ ಆರಾಧನೆ, ಪ್ರವಚನೆ ಹಾಗೂ ವಿಶೇಷ ಪ್ರಾರ್ಥನಾ ವಿಧಿ ಇರುವುದು.
ಆ ಪ್ರಯುಕ್ತ ವಿಶೇಷ ಆಹ್ವಾನಿತರಾಗಿ, ಪೊಟ್ಟಾ ಆಶ್ರಮದ ವಿನೈನ್ಶಿಯನ್ ಸಭೆಯ ಧರ್ಮಗುರುಗಳಾದ ವಂ| ಜೋಸೆಫ್ ಎಡಟ್ಟುರವರು ಪ್ರಭೋದನೆ ನೀಡಲಿರುವರು. ಕುಟುಂಬ ಕಲ್ಯಾಣಕ್ಕಾಗಿ, ಜಾಗತಿಕ ಶಾಂತಿಗಾಗಿ ಹಾಗೂ ಸರ್ವ ಜನರ ಒಳಿತಿಗಾಗಿ, ಸರ್ವೇಶ್ವರರ ಕೃಪಾ, ವರದಾನ, ಆಶೀರ್ವಾದಗಳಿಗಾಗಿ ವಿಶೇಷ ಪ್ರಾರ್ಥನೆ ಇರುವುದು.
ಕಾರಿಸ್ಮಾಟಿಕ ನವೀಕರಣವು 1975 ರಲ್ಲಿ ಅಂದಿನ ಬಿಷಪ್ ದಿವಂಗತ ಡಾ.ಬಾಝಿಲ್ ಡಿಸೋಜ ಅವರ ಮಾರ್ಗ ದರ್ಶನದಿಂದ ಆರಂಭಗೊಂಡು, ನಂತದ ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅವರ ಸಹಕಾರದಿಂದ ಈಗ ನಮ್ಮ ಮಾರ್ಗದರ್ಶನದಲ್ಲಿ ಧಾರ್ಮಿಕ ಸೇವೆ ನೀಡುತ್ತಿದೆ ಎಂದರು.
ಧರ್ಮ ಪ್ರಾಂತ್ಯದ ಶ್ರೇಷ್ಠ ಧರ್ಮಗುರು ಮೊನ್ಸಿ ಮ್ಯಾಕ್ಸಿಮ್ ನೊರೊನ್ಹ ಫಾ. ಕ್ಲಿಫರ್ಡ್ ಫರ್ನಾಂಡಿಸ್, ಫಾ. ರೂಪೇಶ್ ಮಾಡ್ತ, ಕಾರಿಸ್ಮಾಟಿಕ ಸಂಚಾಲಕ ಕೆವಿನ್ ಡಿಸೋಜ, ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ಟಲಿನೊ, ಮಾಧ್ಯಮ ಸಲಹೆಗಾರ ಎಲಿಯಾಸ್ ಫರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post