ಮಂಗಳೂರು: ಮಳೆಯಿಂದ ಹಾನಿಯಾದ ರಸ್ತೆಯ ಮಧ್ಯೆ ನಿರ್ಮಾಣವಾಗಿದ್ದ ಭಾರಿ ಗಾತ್ರದ ಗುಂಡಿಗಳನ್ನು ಮುಚ್ಚಿದ ಪೊಲೀಸರು ಸಾರ್ವಜನಿಕರ ಸಂಚಾರ ಸಂಕಟ ನಿವಾರಿಸಿದರು. ನಗರದ ಹೃದಯ ಭಾಗದ ರಾವ್ ಆ್ಯಂಡ್ ರಾವ್ ವೃತ್ತದಲ್ಲಿ ಶುಕ್ರವಾರ ನಡೆದ ಈ ಪ್ರಸಂಗಕ್ಕೆ ಸ್ಥಳೀಯ ಜನರು ಕೂಡ ಕೈಜೋಡಿಸಿದರು. ಸ್ವಲ್ಪ ಹೊತ್ತಿನಲ್ಲಿ ಈ ‘ಕಾಮಗಾರಿ’ಯ ಚಿತ್ರ ಸಾಮಾಜಿಕ ತಾಣಗಳಲ್ಲಿ ಹರಿದಾಡತೊಡಗಿತು.
‘ಮೊದಲೇ ರಸ್ತೆ ಸರಿ ಇರಲಿಲ್ಲ. ಒಂದು ತಿಂಗಳಿಂದ ಗುಂಡಿಗಳ ಪ್ರಮಾಣ ಆಳ ಹೆಚ್ಚಾಗಿ ವಾಹನಗಳು ಮುಂದೆ ಸಾಗುವುದೇ ಕಷ್ಟವಾಗುತ್ತಿತ್ತು. ಇದರಿಂದ ಆಗಾಗ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ನಗರ ಪಾಲಿಕೆಗೆ ಅನೇಕ ಬಾರಿ ದೂರು ನೀಡಲಾಗಿತ್ತು. ಆದರೆ ಪ್ರಯೋಜನವಾಗಲಿಲ್ಲ. ಇವತ್ತು ಪೊಲೀಸರೇ ಬಂದು ಗುಂಡಿ ಮುಚ್ಚಿದರು. ಅವರ ಈ ಕಾರ್ಯವನ್ನು ಮೆಚ್ಚಲೇಬೇಕು’ ಎಂದು ಸಾರ್ವಜನಿಕರೊಬ್ಬರು ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post