ಉಡುಪಿ : ನಗರದ ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ಉಡುಪಿ ಮಳಿಗೆಯಲ್ಲಿ ಪ್ರಪ್ರಥಮ ಬಾರಿಗೆ ಹೆರಿಟೇಜ್ ಕಲಾತ್ಮಕ ಚಿನ್ನಾಭರಣಗಳ ಸಂಗ್ರಹಗಳೊಂದಿಗೆ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉಡುಪಿ ಅಜೆಕಾರ್ ಗ್ರಾಮ ಪಂಚಾಯತ್ ಮಾಜಿ ಸದಸ್ಯೆರಾದ ವಿದ್ಯಾ ಪೈ ಚಾಲನೆ ನೀಡಿದರು.
ಸೆ.22ರಿಂದ ಸೆ.30ರವರೆಗೆ ಆಯೋಜಿಸಲಾಗಿದೆ. ಹೆರಿಟೇಜ್ ಚಿನ್ನಾಭರಣಗಳ ಪ್ರದರ್ಶನದಲ್ಲಿ ವಿವಿಧ ನಮೂನೆಯ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹಗಳಿವೆ. ‘ಮೈನ್’ನಲ್ಲಿ ವಜ್ರಾಭರಣಗಳ ಅಭೂತ ಪೂರ್ವ ಸಂಗ್ರಹ, ನವ ವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣೀಕೃತ ವಜ್ರಾಭರಣಗಳು, ‘ಡಿವೈನ್’ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿನ್ನಾಭರಣಗಳ ಸಂಗ್ರಹ, ‘ಪ್ರಶಿಯಾ’ದಲ್ಲಿ ರುಬಿ, ಎಮರಾಲ್ ಆಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದೆ. ‘ಎಥಿನಿಕ್ಸ್’ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ. ‘ಏರ’ ಅನ್ವಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹಗಳಿವೆ.
ಸಂಪೂರ್ಣ ಪಾರದರ್ಶಕ, ಉಚಿತ ನಿರ್ವಹಣೆ, ವಿನಿಮಯದಲ್ಲಿ ಶೂನ್ಯ ಕಡಿತ, ಬೈ ಬ್ಯಾಕ್ ಗ್ಯಾರಂಟಿ, ಉಚಿತ ವಿಮೆ, ಎಲ್ಲಾ ಆಭರಣಗಳು ಹಾಲ್‌ಮಾರ್ಕ್ ಹೊಂದಿದ್ದು, 28 ರೀತಿಯ ಪರೀಕ್ಷೆ ಮಾಡಿದ ಐಜಿಐ ಮತ್ತು ಜೆಐಪಿ ಪ್ರಾಮಾಣಿಕತ ವಜ್ರಾಭರಣಗಳು, ಮದುವೆ ಖರೀದಿಗಳಿಗಾಗಿ ಮುಂಗಡ ಶೇ.5ರಿಂದ ಪಾವತಿಸುವ ಮೂಲಕ ಆಭರಣಗಳನ್ನು ಕಾಯ್ದಿರಿಸಿ ಮತ್ತು ಚಿನ್ನದ ದರದಲ್ಲಿ ಆಗುವ ಏರಿಳಿತದಿಂದ ಸಂರಕ್ಷಿಸಬಹುದು.
ಈ ಪ್ರದರ್ಶನದಲ್ಲಿ ಹೊಸದಾಗಿ ಅನಾವರಣಗೊಂಡ ‘ಎಲಾರ’ ಕಲೆಕ್ಷನ್, ಬ್ರಾಂಡೆಡ್ ವಾಚ್ ಗಳಾದ ರಾಡೊ, ಟಿಪ್ಪೋ, ಸಿಕೊ, ಟೈಮಾಕ್ಸ್, ಫೋಲ್‌ಗೆ ಶೇ.30ರಷ್ಟು ಕಡಿತ ಇದೆ.
ಕಾರ್ಯಕ್ರಮದಲ್ಲಿ ರೂಪದರ್ಶಿನಿಯರಾದ ಅನುರಾಧ, ಸುಮಾ ಆರ್, ಸ್ಪರ್ಶ ಜೈನ್ ಮತ್ತು ಸಮೀಕ್ಷಾ ಹಾಗೂ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರಹ್ಮಾನ್ , ಜಿಆರ್ ಎಮ್ ರಾಘವೇಂದ್ರ ನಾಯಕ್, ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ಮತ್ತು ಶಾಖೆಯ ಎಲ್ಲಾ ಸಿಬ್ಬಂದಿ ಉಪಸ್ಥಿತಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post