ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಶನಿವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸಿತು. ಹರಿಯಾಣದ ಫರಿದಾಬಾದ್‌ನಿಂದ ಯಾತ್ರೆಯು ಬರದಾಪುರ್ ಮೂಲಕ ದೆಹಲಿ ತಲುಪಿತು.

ಈ ವೇಳೆ ರಾಹುಲ್ ಗಾಂಧಿ ಸೇರಿದಂತೆ ಜೋಡೊ ಯಾತ್ರೆಯ ಕಾರ್ಯಕರ್ತರನ್ನು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌದರಿ ನೇತೃತ್ವದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಯಾತ್ರೆಯು 107 ದಿನ ಪೂರೈಸಿ ಇಂದು ದೆಹಲಿಗೆ ಆಗಮಿಸಿತು. ಈ ವೇಳೆ ಕಾಂಗ್ರೆಸ್ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ, ಕುಮಾರಿ ಸೆಲ್ಜಾ, ಶಶಿಕಾಂತ್ ಗೋಹಿಲ್, ರಣದೀಪ್ ಸುರ್ಜೇವಾಲಾ ರಾಹುಲ್ ಗಾಂಧಿ ಅವರಿಗೆ ಸಾಥ್ ಕೊಟ್ಟರು.
#WATCH | Congress's Bharat Jodo Yatra enters national capital Delhi.
(Source: AICC) | reported by news agency ANI pic.twitter.com/Wvz2ViLsUm
— NDTV (@ndtv) December 24, 2022

ದೆಹಲಿಯಲ್ಲಿ ನಿಜಾಮುದ್ದಿನ್, ಇಂಡಿಯಾ ಗೇಟ್ ಸರ್ಕಲ್, ಐಟಿಒ, ದೆಹಲಿ ಕೌಂಟ್, ದರಿಯಾಗಂಜ್ ನಂತರ ಕೆಂಪು ಕೋಟೆಯತ್ತ ಯಾತ್ರೆಯು ಸಾಗಲಿದೆ. ಹೊಸ ವರ್ಷದ ಪ್ರಯುಕ್ತ ಯಾತ್ರೆಗೆ 9ದಿನ ವಿಶ್ರಾಂತಿ ನೀಡಲಾಗಿದ್ದು ಜನವರಿ 3ರಿಂದ ಪುನಃ ಪ್ರಾರಂಭವಾಗಲಿದೆ. ಬಳಿಕ ಹರಿಯಾಣಕ್ಕೆ ಹಿಂತಿರುಗಿ ಪಂಜಾಬ್ ಮೂಲಕ ಜಮ್ಮು ಮತ್ತು ಕಾಶ್ಮೀರದತ್ತ ಯಾತ್ರೆ ಸಾಗಲಿದೆ ಎಂದು ವಕ್ತಾರ ಮಾಹಿತಿ ನೀಡಿದ್ದಾರೆ.
ಯಾತ್ರೆಯು ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ 15 ದಿನದಲ್ಲಿ 485 ಕಿಮೀ ಕ್ರಮಿಸಿತು. ಭಾರತ್ ಜೋಡೊ ಪಾದಯಾತ್ರೆ ಸೆಪ್ಟೆಂಬರ್ 7ರಿಂದ ಕನ್ಯಾಕುಮಾರಿಯಿಂದ ಆರಂಭವಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post