• About us
  • Contact us
  • Disclaimer
Sunday, April 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

World Cup 2025: ಮಹಿಳಾ ವಿಶ್ವಕಪ್​ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ; 25 ವರ್ಷದ ಬಳಿಕ ಹೊಸ ಚಾಂಪಿಯನ್ಸ್

Coastal Times by Coastal Times
November 3, 2025
in ಕ್ರೀಡಾ ಸುದ್ದಿ
World Cup 2025: ಮಹಿಳಾ ವಿಶ್ವಕಪ್​ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ; 25 ವರ್ಷದ ಬಳಿಕ ಹೊಸ ಚಾಂಪಿಯನ್ಸ್
45
VIEWS
WhatsappTelegramShare on FacebookShare on Twitter

ವಿಶ್ವಕಪ್ ಫೈನಲ್ (Women’s ODI World Cup Final 2025) ಪಂದ್ಯದಲ್ಲಿ ಆತಿಥೇಯ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಎತ್ತಿಹಿಡಿದಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತಾ ಪಡೆ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಲಷ್ಟೇ ಶಕ್ತವಾಗಿ 52 ರನ್​ಗಳಿಗೆ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ ತಂಡ ಮೂರನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ.

ಇದಕ್ಕೂ ಮುನ್ನ ಎರಡೂ ಬಾರಿ ಫೈನಲ್​ಗೆ ಪ್ರವೇಶ ಮಾಡಿದ್ದರು ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದ್ರೆ ಈ ಬಾರಿ ತವರಿನಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಪಣ ತೊಟ್ಟಿದ್ದ ಟೀಮ್​ ಇಂಡಿಯಾ ಅಂತಿಮವಾಗಿ ಗುರಿಯನ್ನು ತಲುಪಿದೆ. ಇದಲ್ಲದೇ ಸುಮಾರು 25 ವರ್ಷಗಳ ನಂತರ, ಮಹಿಳಾ ವಿಶ್ವಕಪ್ ಹೊಸ ಚಾಂಪಿಯನ್ ಅನ್ನು ಪಡೆದುಕೊಂಡಿದೆ.ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ, ದೀಪ್ತಿ ಶರ್ಮಾ ಅವರ ಅದ್ಭುತ ಬೌಲಿಂಗ್​ ಪ್ರದರ್ಶನ, ಶಫಾಲಿ ವರ್ಮಾ ಅವರ ಆಲ್ ರೌಂಡ್ ಆಟ ಮತ್ತು ಅಮನ್ ಜೋತ್ ಕೌರ್ ಅವರ ಅದ್ಭುತ ಕ್ಯಾಚ್ ಭಾರತಕ್ಕೆ ಗೆಲುವು ತಂದುಕೊಟ್ಟಿತು.

ಒಂದೆಡೆ ತಂಡದ ವಿಕೆಟ್​ ಬೀಳುತ್ತಿದ್ದರೂ ದೃತಿಗೆಡದ ವೋಲ್ವಾರ್ಡ್ ಶತಕ ಸಿಡಿಸಿ ತಂಡಗ ಗೆಲವಿಗಾಗಿ ಅಂತಿಮವರೆಗೆ ಹೋರಾಡಿದರೂ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ತಂಡ 246 ರನ್​ಗಳಿಗೆ ಆಲೌಟ​ ಆಗುವ ಮೂಲಕ ಭಾರತಕ್ಕೆ ಶರಣಾಯ್ತು. ಇದರೊಂದಿಗೆ ಟೀಮ್​ ಇಂಡಿಯಾ ನಾಯಕಿ ಹರ್ಮನ್​ ಪ್ರೀತ್​ ಚೊಚ್ಚಲ ಟ್ರೋಫಿ ಗೆದ್ದ ಭಾರತದ ಮೊದಲ ಮಹಿಳಾ ನಾಯಕಿ ಎಂಬ ದಾಖಲೆಯನ್ನು ಇತಿಹಾಸದ ಪುಟಕ್ಕೆ ಸೇರಿಸಿದರು.

ವರ್ಮಾ-ಶರ್ಮಾ ಆಲ್-ರೌಂಡ್ ಶೋ: ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 298 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಆರಂಭಿಕರಾದ ಶಫಾಲಿ ವರ್ಮಾ (78 ಎಸೆತಗಳಲ್ಲಿ 87, 7 ಬೌಂಡರಿ ಮತ್ತು 2 ಸಿಕ್ಸರ್‌ಗಳು) ಮತ್ತು ದೀಪ್ತಿ ಶರ್ಮಾ (58 ಎಸೆತಗಳಲ್ಲಿ 58, 3 ಬೌಂಡರಿ ಮತ್ತು 6 ಸಿಕ್ಸರ್‌ಗಳು) ಅರ್ಧಶತಕಗಳನ್ನು ಗಳಿಸಿದರು, ಆದರೆ ಸ್ಮೃತಿ ಮಂಧಾನ (58 ಎಸೆತಗಳಲ್ಲಿ 45, 8 ಬೌಂಡರಿ ಮತ್ತು 24 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳು) ಪ್ರಮುಖ ಇನ್ನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ, ಖಾಕಾ (3/58) ಮೂರು ವಿಕೆಟ್‌ಗಳನ್ನು ಪಡೆದರು, ಆದರೆ ಮ್ಲಾಬಾ, ಡಿ ಕ್ಲರ್ಕ್ ಮತ್ತು ಟ್ರಯಾನ್ ತಲಾ ಒಂದು ವಿಕೆಟ್ ಪಡೆದರು.

ಭಾರತದ ಗೆಲುವಿನ ರೂವಾರಿ ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಎಂದರೆ ತಪ್ಪಾಗಲಾರದು. ಬದಲಿ ಆಟಗಾರ್ತಿಯಾಗಿ ವಿಶ್ವಕಪ್​ಗೆ ಎಂಟ್ರಿಕೊಟ್ಟಿದ್ದ ಶಫಾಲಿ ವರ್ಮಾ ಮೊದಲು ಬ್ಯಾಟಿಂಗ್​​ನಲ್ಲಿ ಸಿಡಿಲಬ್ಬರದ 87 ರನ್​ಗಳ ಇನ್ನಿಂಗ್ಸ್ ಆಡಿದರೆ, ಬೌಲಿಂಗ್​​ನಲ್ಲೂ ಪ್ರಮುಖ 2 ವಿಕೆಟ್ ಪಡೆದರು. ಇವರ ಜೊತೆಗೆ ನಾನು ಎಂತಹ ಆಲ್​ರೌಂಡರ್ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ ದೀಪ್ತ ಶರ್ಮಾ, ಮೊದಲು ಬ್ಯಾಟಿಂಗ್​ನಲ್ಲಿ 58 ರನ್​ಗಳ ಇನ್ನಿಂಗ್ಸ್ ಆಡಿದರೆ, ಬೌಲಿಂಗ್​ನಲ್ಲಿ ಐದು ವಿಕೆಟ್ ಪಡೆಯುವದರ ಜೊತೆಗೆ ಒಬ್ಬರನ್ನು ರನೌಟ್ ಕೂಡ ಮಾಡಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌: ಮೂರು ವಿಭಾಗಗಳಲ್ಲಿ ಭಾರತಕ್ಕೆ ಸ್ವರ್ಣ

Next Post

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

Related Posts

IPL 2026: ಬೆಂಗಳೂರು(ಆರ್‌ಸಿಬಿ)ರೂ.16,705 ಕೋಟಿಗೆ ಮತ್ತು ರಾಜಸ್ಥಾನ್ ರಾಯಲ್ಸ್ ರೂ.15,290 ಕೋಟಿಗೆ ಸೇಲ್! ಹೊಸ ಮಾಲೀಕರು ಇವರು
ಕ್ರೀಡಾ ಸುದ್ದಿ

IPL 2026: ಬೆಂಗಳೂರು(ಆರ್‌ಸಿಬಿ)ರೂ.16,705 ಕೋಟಿಗೆ ಮತ್ತು ರಾಜಸ್ಥಾನ್ ರಾಯಲ್ಸ್ ರೂ.15,290 ಕೋಟಿಗೆ ಸೇಲ್! ಹೊಸ ಮಾಲೀಕರು ಇವರು

March 26, 2026
20
ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!
ಕ್ರೀಡಾ ಸುದ್ದಿ

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

March 9, 2026
24
Next Post
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

Discussion about this post

Recent News

ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

April 26, 2026
18
ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

April 25, 2026
49
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

ಎನ್ವಿಡಿಯಾಗೆ ಭಾರೀ ಶಾಕ್! ಗೂಗಲ್​ ನಿಂದ ಪವರ್‌ಫುಲ್ ಎಐ ಚಿಪ್ ಲಾಂಚ್

April 26, 2026
ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯ

April 25, 2026
ಬೆಳ್ತಂಗಡಿ ಐತಿಹಾಸಿಕ ಬಳಂಜ ಪಂಚಲಿಂಗೇಶ್ವರ ದೇಗುಲಕ್ಕೆ ನುಗ್ಗಿ ದಾಂಧಲೆ: ದೈವದ ಪರಿಕರಗಳನ್ನ ಚೆಲ್ಲಾಪಿಲ್ಲಿ ಮಾಡಿದ ಪದವೀಧರ

ಬೆಳ್ತಂಗಡಿ ಐತಿಹಾಸಿಕ ಬಳಂಜ ಪಂಚಲಿಂಗೇಶ್ವರ ದೇಗುಲಕ್ಕೆ ನುಗ್ಗಿ ದಾಂಧಲೆ: ದೈವದ ಪರಿಕರಗಳನ್ನ ಚೆಲ್ಲಾಪಿಲ್ಲಿ ಮಾಡಿದ ಪದವೀಧರ

April 24, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d