ಮಂಗಳೂರು: ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ವಿಶ್ವದಲ್ಲೇ ಅಗ್ರಮಾನ್ಯ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ಸುಮಾರು 117 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. 35000ಕ್ಕೂ ಹೆಚ್ಚು ಕ್ಲಬ್ಬುಗಳು ಮತ್ತು 12 ಲಕ್ಷಕ್ಕಿಂತಲೂ ಹೆಚ್ಚಿನ ಸದಸ್ಯರನ್ನು ಹೊಂದಿರುವ ಸಂಸ್ಥೆ. ಇದರ ಅಂಗ ಸಂಸ್ಥೆಗಳನ್ನು ರೋಟಾಕ್ಸ್, ಇಂಟಲ್ಯಾಕ್ಸ್ ಹಾಗೂ ರೋಟರಿ ಕಮ್ಯೂನಿಟಿ ಕೊರ್ಲ್ಸ್ (ಗ್ರಾಮೀಣ ದಳ) ಕಾರ್ಯಾನಿರ್ವಹಿಸುತ್ತಿವೆ.
ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಪೊಲೀಯೊ ಮಹಾಮಾರಿಯನ್ನು ಜಗತ್ತಿನಿಂದ ನಿರ್ಮೂಲನೆ ಮಾಡುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಅಂತಹ ರೋಟರಿ ಸಂಸ್ಥೆಯ ರೋಟರಿ ಜಿಲ್ಲೆ 3181ರ ನಾಯಕರಾಗಿ ಎನ್ . ಪ್ರಕಾಶ ಕಾರಂತರವರು ಈ ಜಿಲ್ಲೆಯ ಚುಕ್ಕಾಣಿ ಹಿಡಿದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.
54 ವರ್ಷಗಳ ಇತಿಹಾಸವುಳ್ಳ ರೋಟರಿ ಬಂಟ್ವಾಳ ಕ್ಲಬ್ಬಿಗೆ ಪ್ರಥಮ ಬಾರಿಗೆ ಜಿಲ್ಲೆಯ ನೇತೃತ್ವವನ್ನು ವಹಿಸುವ ಸುವರ್ಣಾವಕಾಶ ಒದಗಿ ಬಂದಿರುವುದು ನಮ್ಮ ಪುಣ್ಯವೇ ಸರಿ. ಪ್ರತೀ ವರ್ಷದ ಹಾಗೆ ಈ ಸಲ ಜಿಲ್ಲಾ ಅಧಿವೇಶನ “ಪರಿಕಲ್ಪನೆ” ಎಂಬ ಹೆಸರಿನಲ್ಲಿ ಬಂಟ್ವಾಳ ಕ್ಲಬ್ಬಿನ ಮಾಜಿ ಅಧ್ಯಕ್ಷ ಬಿ.ಸಂಜೀವ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಇದೇ ಜನವರಿ 27, 28, 29ರಂದು ನೇತ್ರಾವತಿ ನದಿ ದಡದಲ್ಲಿ ಇರುವ ರಮಣೀಯ ಪ್ರಖ್ಯಾತ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ. ಈ ಜಿಲ್ಲಾ ಅಧಿವೇಶನದಲ್ಲಿ 4 ಕಂದಾಯ ಜಿಲ್ಲೆಗಳಾದ ದಕ್ಷಿಣಕನ್ನಡ, ಕೊಡಗು, ಮೈಸೂರು ಮತ್ತು ಚಾಮಾರಾಜನಗರದ ವಿವಿಧ ಕ್ಲಬ್ಬುಗಳಿಂದ ಸುಮಾರು 2,000 ರೋಟರಿ ಸದಸ್ಯರು ಮತ್ತು ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ.
ರೋಟರಿಯ ಧೈಯ, ಉದ್ದೇಶಗಳಾದ ಗೆಳೆತನ, ಬಾಂದವ್ಯ, ಒಡನಾಟದ ನವೀಕರಣ ಅಲ್ಲದೆ ನಮ್ಮ ಬೇರೆ ಬೇರೆ ಆಹಾರ ಕ್ರಮಗಳ ಸವಿ ಉಣಬಡಿಸುವುದರೊಂದಿಗೆ ಸಾ೦ಸ್ಕೃತಿಕ ಅನಾವರಣ ಹಾಗೂ ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ತೋರ್ಪಡಿಕೆ, ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ನಮ್ಮ ಜ್ಞಾನ ಉದ್ದೀಪನಗೊಳಿಸುವುದು.
ಈ ಸಂದರ್ಭದಲ್ಲಿ ಅಧಿವೇಶನವನ್ನು ಅಂತರಾಷ್ಟ್ರೀಯ ರೋಟರಿ ಮಾಜಿ ಅಧ್ಯಕ್ಷರಾದ ಕೆ.ಆರ್. ರವೀಂದ್ರನ್ ಉದ್ಘಾಟಿಸಲಿರುವರು. ಹಾಗೆಯೇ ಅಂತರಾಷ್ಟ್ರೀಯ ರೋಟರಿ ನಿರ್ದೇಶಕರಾದ ಟಿ.ಎನ್ ಸುಬ್ರಮಣಿಯನ್ ಮತ್ತು ಅಂತರಾಷ್ಟ್ರೀಯ ಅಧ್ಯಕ್ಷರ ಪ್ರತಿನಿಧಿಯಾಗಿ ರೋ, ಪಿ.ಡಿ.ಜಿ ರಶ್ಮಿ ಕುಲಕರ್ಣಿಯವರು ಭಾಗವಹಿಸಲಿರುವರು.
ಮೂರು ದಿನ ನಡೆಯುವ ಜಿಲ್ಲಾ ಅಧಿವೇಶನದಲ್ಲಿ ಅಥಿತಿಗಳಾಗಿ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆ, ಬಿಗ್ರೇಡಿಯರ್ ಐ.ಎನ್ ರೈ, ಕರ್ನಾಟಕ ಸರಕಾರದ ಮಾಜಿ ಅಡಿಶನಲ್ ಅಡ್ವಕೇಟ್ ಜನರಲ್ ಸಂದೇಶ್ ಚೌಟ, ಖ್ಯಾಶ್ ಚಿ೦ಸಕಿ ಶ್ರೀಮತಿ ವೀಣಾ ಬನ್ನಂಜೆ, ಲೇಖಕ ಗುರುರಾಜ ಕರ್ಜಗಿ, 330. ಸತೀಶ್ ಉಪಕುಲಪತಿ ನಿಟ್ಟೆ ಯುನಿವಟಿ, ಶ್ರೀನಿವಾಸ್ ವಿದ್ಯಾ ಸಂಸ್ಥೆಯ ಉಪ ಕುಲಪತಿಗಳಾದ ಶ್ರೀನಿವಾಸ್‌ರವರು, ಅಂತರಾಷ್ಟ್ರೀಯ ಕಾರ್ಪೋರೇಟ್ ತರಬೇತುದಾರ ಸವೀನ್ ಹೆಗ್ಡೆ ಹಾಗೂ ಹಾಸ್ಯ ಕಲಾವಿದ ವಿಠಲ್ ನಾಯ್ಕರವರು ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ರೋಟರಿ ಇತರ ಜಿಲ್ಲೆಗಳ ನಾಯಕರುಗಳಾದ ಪಿಡಿಜಿ ಅಭಿನಂದನ್ ಶೆಟ್ಟಿ, ಪಿಡಿ ಸುನೀಲ್ ಜಕಾರಿಯಾ ಮತ್ತು ಮೋಹನ್ ಕೆ.ವಿ ಮತ್ತು ಜಿಲ್ಲಾ ಸಮ್ಮೇಳನದ ಮುಖ್ಯ ಸಲಹೆಗಾರರಾದ ಪಿಡಿಜಿ, ಕೃಷ್ಣ ಶೆಟ್ಟಿ, ಜಿಲ್ಲಾ ಸಲಹೆಗಾರರಾದ ಪಿಡಿಜಿ ಸುರೇಶ್ ಚೆ೦ಗಪ್ಪ, ಜಿಲ್ಲಾ ಕೌನ್ಸಿಲರ್ ಪಿಡಿಜಿ ರಂಗನಾಥ್ ಭಟ್, ಜಿಲ್ಲಾ ತರಬೇತುದಾರ ಪಿಡಿಜಿ ರವೀಂದ್ರ ಭಟ್, ಜಿಲ್ಲಾ ಸಹತರಬೇತುದಾರ ರೂ. ಶೇಖರ್ ಶೆಟ್ಟಿ, ನಿಯೋಜಿತ ಜಿಲ್ಲಾ ಗವರ್ನರ್ ಹೆಚ್. ಆರ್. ಕೇಶವ್, ನಾಮನಿರ್ದೇಶಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಇನ್ನಿತರ ನಾಯಕರ ಪಾಲ್ಗೊಳ್ಳಲಿರುವರು.
ಉಪಸ್ಥಿತರಿರುವವರು: ಎನ್ ಪ್ರಕಾಶ್ ಕಾರಂತ್, ಜಿಲ್ಲಾ ಗವರ್ನರ್, ಬಿ. ಸಂಜೀವ ಪೂಜಾರಿ, ಜಿಲ್ಲಾ ಸಮ್ಮೇಳನ ಅಧ್ಯಕ್ಷರು , ಬಿ. ರಿತೇಶ್ ಬಾಳಿಗ, ಜಿಲ್ಲಾ ಸಮ್ಮೇಳನ ಕಾರ್ಯದರ್ಶಿ . ಪಿಡಿಜಿ. ಕೃಷ್ಣ ಶೆಟ್ಟಿ, ಜಿಲ್ಲಾ ಸಮ್ಮೇಳನ ಮುಖ್ಯ ಸಲಹೆಗಾರರು, ರೊ. ನಾರಾಯಣ ಪಿ.ಎಮ್, ಜಿಲ್ಲಾ ಸಮ್ಮೇಳನ ಸಲಹೆಗಾರರು , ರೊ. ನಾರಾಯಣ ಹೆಗ್ಡೆ, ಜಿಲ್ಲಾ ಆಡಳಿತ, ಕಾರ್ಯದರ್ಶಿ .
Discover more from Coastal Times Kannada
Subscribe to get the latest posts sent to your email.
Discussion about this post