ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಇಂದು (ಭಾನುವಾರ) ಸಂಜೆ ಘೋಷಿಸಿತು. ಈ ಬಾರಿ ಒಟ್ಟು 5 ಮಂದಿ ಸಾಧಕರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಇವರ ಪೈಕಿ ಬಾಲಿವುಡ್‌ನ ಹೆಸರಾಂತ ಹಿರಿಯ ನಟ ದಿ.ಧರ್ಮೇಂದ್ರ, ಕೇರಳದ ಮಾಜಿ ಸಿಎಂ ದಿ.ವಿ.ಎಸ್.ಅಚ್ಯುತಾನಂದನ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. 13 ಗಣ್ಯರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿದೆ. ಈ ಪೈಕಿ ಕಲಾ ಕ್ಷೇತ್ರಕ್ಕೆ ಸಲ್ಲಿಸಿದ ಶ್ರೇಷ್ಠ ಕೊಡುಗೆಗಳಿಗಾಗಿ ಕರ್ನಾಟಕದ ಶತಾವಧಾನಿ ಆರ್.ಗಣೇಶ್, ಕೇರಳದ ಪ್ರಸಿದ್ಧ ಸಿನಿಮಾ ತಾರೆ ಮಮ್ಮುಟ್ಟಿ ಸೇರಿದಂತೆ 13 ಗಣ್ಯರಿದ್ದಾರೆ. ಒಟ್ಟು 131 ಸಾಧಕರನ್ನು ಪದ್ಮಶ್ರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರಲ್ಲಿ 19 ಮಂದಿ ಮಹಿಳೆಯರು ಮತ್ತು ಪಟ್ಟಿಯಲ್ಲಿ ವಿದೇಶಿಯರು/ಎನ್‌ಆರ್‌ಐ-ಅನಿವಾಸಿ ಭಾರತೀಯರು/ಪಿಐಒ/ಒಸಿಐ ವರ್ಗದಿಂದ 6 ವ್ಯಕ್ತಿಗಳು ಮತ್ತು 16 ಮರಣೋತ್ತರ ಪ್ರಶಸ್ತಿ ಪುರಸ್ಕೃತರಿದ್ದಾರೆ.
ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ಔಷಧ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಇತ್ಯಾದಿ ವಿವಿಧ ವಿಭಾಗಗಳು ಅಥವಾ ಚಟುವಟಿಕೆಗಳ ಕ್ಷೇತ್ರಗಳ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಇವರಲ್ಲಿ ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ‘ಪದ್ಮವಿಭೂಷಣ’, ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ‘ಪದ್ಮಭೂಷಣ’ ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ ‘ಪದ್ಮಶ್ರೀ’ ನೀಡಲಾಗುತ್ತದೆ. ಪ್ರತೀ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಘೋಷಿಸುವುದು ಸಂಪ್ರದಾಯ.
ಮಾರ್ಚ್/ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ: ಈ ಪ್ರಶಸ್ತಿಗಳನ್ನು ರಾಷ್ಟ್ರಪತಿಗಳು ಪ್ರತೀ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭಗಳಲ್ಲಿ ಪ್ರದಾನ ಮಾಡುತ್ತಾರೆ.
Discover more from Coastal Times Kannada
Subscribe to get the latest posts sent to your email.







Discussion about this post