ಮಂಗಳೂರು: ಈಶಾನ್ಯ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಭಾರತೀಯ ರೈಲ್ವೆ, ಸೌತ್ ಸ್ಟಾರ್ ರೈಲ್ ಇಂಡಿಯಾ ಮತ್ತು ಟೂರ್ ಟೈಮ್ಸ್ ಸಹಯೋಗದೊಂದಿಗೆ ಭಾರತ ಗೌರವ್ ವಿಶೇಷ ಪ್ರವಾಸ ರೈಲು ಸೇವೆ ಆರಂಭಿಸಿದ್ದು, 14 ದಿನಗಳ ಈ ಪ್ರವಾಸ ಏಪ್ರಿಲ್ 25ರಂದು ಉತ್ತರ ತಮಿಳುನಾಡಿನಿಂದ ಆರಂಭವಾಗಲಿದೆ.
ಮಂಗಳೂರು ಸೇರಿದಂತೆ ಕರ್ನಾಟಕದ ಪ್ರಯಾಣಿಕರಿಗೆ ಉಚಿತ ಸಂಪರ್ಕ ವ್ಯವಸ್ಥೆ ಒದಗಿಸಲಾಗಿದ್ದು, ಪಾಲಕ್ಕಾಡ್, ಒಟ್ಟಪಾಳಂ ಮತ್ತು ಶೋರ್ನೂರು ರೈಲು ನಿಲ್ದಾಣಗಳಿಂದ ರೈಲಿಗೆ ಹತ್ತುವ ಅವಕಾಶ ಕಲ್ಪಿಸಲಾಗಿದೆ. ಈ ಪ್ರವಾಸಕ್ಕ ಮೂರು ವಿಭಿನ್ನ ಪ್ಯಾಕೇಜ್‌ಗಳನ್ನು ರೂಪಿಸಲಾಗಿದ್ದು, ಪ್ರವಾಸಿಗರು ತಮ್ಮ ಸೌಲಭ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು.
ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಪ್ರವಾಸಿ ರೈಲು ದೇಶದ ಕೆಲವು ಅತ್ಯಂತ ಸುಂದರವಾದ ಮತ್ತು ಸಾಂಸ್ಕøತಿಕವಾಗಿ ಮಹತ್ವದ ತಾಣಗಳನ್ನು ಒಳಗೊಂಡಿದೆ. ಮೊದಲ ಪ್ಯಾಕೇಜ್‍ನಲ್ಲಿ ಗ್ಯಾಂಗ್ಟಾಕ್, ಡಾರ್ಜಿಲಿಂಗ್‍ಗೆ ಭೇಟಿ ನೀಡಬಹುದು. ಎರಡನೇ ಪ್ಯಾಕೇಜ್ ಈಶಾನ್ಯದ ಸುಂದರ ತಾಣಗಳಾದ ಗುವಾಹಟಿ, ಶಿಲ್ಲಾಂಗ್, ಚಿರಾಪುಂಜಿ, ಮಾವ್ಲಿನ್ನಾಂಗ್ ಮತ್ತು ದಾವ್ಕಿಗಳನ್ನು ಒಳಗೊಂಡಿದೆ. ಮೂರನೇ ಪ್ಯಾಕೇಜ್ ಭೂತಾನ್ ಗೆ ಅಂತಾರಾಷ್ಟ್ರೀಯ ಪ್ರವಾಸವಾಗಿದ್ದು, ಇದು ಥಿಂಪು, ಪುನಾಖಾ, ಪಾರೋ ಮತ್ತು ಚೆಲೆ ಲಾ ಪಾಸ್ ಗಳನ್ನು ಒಳಗೊಂಡಿದೆ ಎಂದು ಭಾರತೀಯ ರೈಲ್ವೆ ಭಾರತ್ ಗೌರವ್ ರೈಲು ಸೌತ್‍ಸ್ಟಾರ್ ರೈಲು & ಟೂರ್ ಟೈಮ್ ನಿರ್ದೇಶಕ ವಿಘ್ನೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೌತ್ ಸ್ಟಾರ್ ರೈಲ್ ಮತ್ತು ಟೂರ್ ಟೈಮ್ಸ್ ಈಗಾಗಲೇ 53 ನಿರ್ಗಮನಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, 2,90,229 ರೈಲು ಕಿಲೋಮೀಟರ್ ಗಳನ್ನು ಕ್ರಮಿಸಿವೆ ಮತ್ತು 24,402 ಯಾತ್ರಿಕರು ಮತ್ತು ಪ್ರವಾಸಿಗರಿಗೆ ಪ್ರಯಾಣ ಸೌಲಭ್ಯಗಳನ್ನು ಒದಗಿಸಿವೆ. ಕೇರಳದಲ್ಲಿ ಅನುಕೂಲಕರ ಬೋಡಿರ್ಂಗ್ ಪಾಯಿಂಟ್‍ಗಳೊಂದಿಗೆ ಈ ರೈಲು ಮಧುರೈನಿಂದ ಹೊರಡಲಿದೆ. ಮಂಗಳೂರಿನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಅವರ ಆದ್ಯತೆಯ ಆಧಾರದ ಮೇಲೆ ಪಾಲಕ್ಕಾಡ್, ಒತ್ತಪಾಲಂ ಅಥವಾ ತ್ರಿಶೂರ್ ಗೆ ಪೂರಕ ವರ್ಗಾವಣೆ ನೀಡಲಾಗುವುದು ಎಂದು ವಿವರಿಸಿದರು.
ಸಾರ್ವಜನಿಕ ಪ್ರಕಟಣೆ ಮನರಂಜನಾ ವ್ಯವಸ್ಥೆಗಳು, ಪ್ರವಾಸ ವ್ಯವಸ್ಥಾಪಕರು, ವಿಶೇಷ ಕೋಚ್ ಭದ್ರತೆ, ರೈಲಿನ ಒಳಗೆ ಹಾಗೂ ಹೊರಗೆ ಅನಿಯಮಿತ ದಕ್ಷಿಣ ಭಾರತೀಯ ಊಟ ಮತ್ತಿತರ ಸೌಲಭ್ಯಗಳನ್ನು ಹೊಂದಿದೆ. ಒಂದು ಫಸ್ಟ್ ಎಸಿ, ಮೂರು 2ಎಸಿ, ಐದು 3ಎಸಿ, ಎರಡು ಸ್ಲೀಪರ್ ಕ್ಲಾಸ್ ಮತ್ತು ಪ್ಯಾಂಟ್ರಿ ಕಾರ್ ಹೊಂದಿದ್ದು, 650 ಪ್ರಯಾಣಿಕರಿಗೆ ಅವಕಾಶವಿದೆ. ಹೋಟೆಲ್ ತಂಗುವಿಕೆ, ದೃಶ್ಯವೀಕ್ಷಣೆ ಮತ್ತು ಸಂಚಾರ, ಪ್ರಯಾಣ ವಿಮೆಯನ್ನು ಈ ಪ್ಯಾಕೇಜ್ ಒಳಗೊಂಡಿದೆ. ಇದಲ್ಲದೆ, ಪ್ರವಾಸಿಗರು ಎಲ್‍ಟಿಸಿ/ಎಲ್‍ಎಫ್‍ಸಿ ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ.
- ಮೊದಲ ಪ್ಯಾಕೇಜ್ ಡಾರ್ಜಿಲಿಂಗ್ ಮತ್ತು ಗ್ಯಾಂಗ್ಟಾಕ್ ಪ್ರವಾಸವನ್ನು ಒಳಗೊಂಡಿದ್ದು, ಸ್ಲೀಪರ್ ದರ 45,950 ರೂ, ಥರ್ಡ್ ಎಸಿ 53,300 ರೂ, ಸೆಕೆಂಡ್ ಎಸಿ 66,500 ರೂ ಹಾಗೂ ಫಸ್ಟ್ ಎಸಿ 72,100 ರೂ ಎಂದು ನಿಗದಿಪಡಿಸಲಾಗಿದೆ.
- ಎರಡನೇ ಪ್ಯಾಕೇಜ್ ಈಶಾನ್ಯ ಸ್ಟ್ಯಾಂಡರ್ಡ್ ಪ್ಯಾಕೇಜ್ ಆಗಿದ್ದು, ಇದರಲ್ಲಿ ಅಸ್ಸಾಂ, ಶಿಲ್ಲಾಂಗ್, ಮೇಘಾಲಯ ಸೇರಿದಂತೆ ಪ್ರಮುಖ ಸ್ಥಳಗಳನ್ನು ವೀಕ್ಷಿಸಲು ಅವಕಾಶವಿದೆ. ಈ ಪ್ಯಾಕೇಜ್‌ನಲ್ಲಿ ಸ್ಲೀಪರ್ ದರ 59,350 ರೂ, ಥರ್ಡ್ ಎಸಿ 64,350 ರೂ, ಸೆಕೆಂಡ್ ಎಸಿ 74,450 ರೂ ಹಾಗೂ ಫಸ್ಟ್ ಎಸಿ 79,950 ರೂ ಎಂದು ನಿಗದಿಪಡಿಸಲಾಗಿದೆ.
- ಮೂರನೇ ಪ್ಯಾಕೇಜ್ ಭೂತಾನ್ ವಿಶೇಷ ಪ್ಯಾಕೇಜ್ ಆಗಿದ್ದು, ಅಂತಾರಾಷ್ಟ್ರೀಯ ತಾಣ ಭೂತಾನ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಈ ಪ್ಯಾಕೇಜ್‌ನಲ್ಲಿ ಸ್ಲೀಪರ್ ದರ 76,950 ರೂ, ಥರ್ಡ್ ಎಸಿ 83,500 ರೂ, ಸೆಕೆಂಡ್ ಎಸಿ 94,950 ರೂ ಹಾಗೂ ಫಸ್ಟ್ ಎಸಿ 97,900 ರೂ ನಿಗದಿಪಡಿಸಲಾಗಿದೆ.
ಸಾಮಾನ್ಯ ರೈಲುಗಳಿಗಿಂತ ಭಿನ್ನವಾಗಿ, ಈ ವಿಶೇಷ ಪ್ರವಾಸಿ ರೈಲು ಐಆರ್‍ಸಿಟಿಸಿ ವೆಬ್‍ಸೈಟ್ ನಲ್ಲಿ ಬುಕಿಂಗ್ ಮಾಡಲು ಲಭ್ಯವಿಲ್ಲ. ಟೂರ್ ಟೈಮ್ಸ್ ಅನ್ನು ನೇರವಾಗಿ 7305858585 ಕ್ಕೆ ಸಂಪರ್ಕಿಸುವ ಮೂಲಕ ಅಥವಾ www.tourtimes.in ಗೆ ಭೇಟಿ ನೀಡುವ ಮೂಲಕ ಮಾತ್ರ ಕಾಯ್ದಿರಿಸಬಹುದಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post