ಉಡುಪಿ: ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಕಾಪು ಮೂಲದ ಎರಡು ತಂಡಗಳ ಯುವಕರು ಉಡುಪಿ – ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಲ್ಲಿ ಬಂದು ಜಗಳ ಮಾಡಿಕೊಂಡು ಕಾರಿನಲ್ಲಿಯೇ ಹೊಡೆದಾಟ ಮಾಡಿಕೊಂಡಿದ್ದಾರೆ.
ಮೇ 18ರಂದು ಉಡುಪಿ ಕುಂಜಿಬೆಟ್ಟುವಿನಲ್ಲಿ ನಡೆದಿರುವ ಈ ಘಟನೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಗೆ ಜೂನ್ 1 ರ ವರೆಗೆ ನ್ಯಾಯಂಗ ಬಂಧನ ವಿಧಿಸಿದ್ದಾರೆ.ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರ ಬಂಧನ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗರುಡ ಗ್ಯಾಂಗ್ನ ಕಾಪು ಮೂಲದ ಆಶಿಕ್ ಮತ್ತು ಗುಜ್ಜರಬೆಟ್ಟದ ರಾಕಿಬ್ ಎಂಬ ಯುವಕರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.ಕೃತ್ಯಕ್ಕೆ ಬಳಸಿದ್ದ 1 ಸ್ವಿಫ್ಟ್ ಕಾರು, 2 ದ್ವಿ ಚಕ್ರ ವಾಹನ, ಚಾಕು ಹಾಗೂ ತಲ್ವಾರ್ ಅನ್ನು ವಶಪಡಿಸಿಕೊಳ್ಳಲಾಗಿದೆ.ಉಳಿದ ಆರೋಪಿಗಳು ಪರಾರಿಯಾಗಿದ್ದು, ಆದಷ್ಟು ಬೇಗ ಪತ್ತೆ ಹಚ್ಚಿ ಮುಂದಿನ ಕಾನೂನು ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಉಡುಪಿ ಎಸ್ ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
Discussion about this post