ಮಂಗಳೂರು : ಫಾ. ಮ್ಯಾಥ್ ವಾಸ್ ಸ್ಮಾರಕ ಅಂತರ=ಪಾರಿಶ್ ಫುಟ್ ಬಾಲ್ ಮತ್ತು ಹೋ ಬಾಲ್ ಪಂದ್ಯಾವಳಿ ಹಾಗೂ ಫಾ. ಮಾಕ್ಕೂ ವಾಸ್ ಎಕ್ಸಲೆನ್ಸ್ ಇನ್ ಸ್ಪೋರ್ಟ್ಸ್ ಅವಾರ್ಡ್ಸ್ 2023, ಅಕ್ಟೋಬರ್ 22ರಂದು, ಸಂತ ಆಲೋಶಿಯಸ್ ಪಿಯು ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಿತು.
ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ 30 ಫುಟ್‌ಬಾಲ್ ಮತ್ತು 17 ಫ್ರೀ ಬಾಲ್ ತಂಡಗಳು ಭಾಗವಹಿಸಿದ್ದವು. ಫಾದ ಮ್ಯಾಕ್ಯೂ ವಾಸ್ ಎರಡನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ, ಕಮ್ಯೂನಿಟಿ ಎಂಪವರ್ ಮೆಂಟ್ ಟ್ರಸ್ಟ್, ಮಂಗಳೂರು ಇವರು ಕ್ರಿಶ್ಚಿಯನ್ ಸ್ಪೋರ್ಟ್ಸ್ ಎಸೋಸಿಯೇಶನ್, ಕಥೋಲಿಕ್ ಸಭಾ ಮಂಗಳೂರು ಮತ್ತು ಉಡುಪಿ ಪ್ರದೇಶದ ಸಹಯೋಗದೊಂದಿಗೆ ಪಂದ್ಯಾವಳಿಯನ್ನು ಆಯೋಜಿಸಿತ್ತು.
ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಆತಿಃ ವಂದನೀಯ ಡಾ| ಆಲೋಶಿಯಸ್ ಪಾವ್ ಡಿಸೋಜಾ ಉದ್ಘಾಟಕರಾಗಿ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಷನ್ ಇಲೇಶನ್ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ರೋಹನ್ ಮೊಂತೆರೊ ಉಪಸ್ಥಿತರಿದ್ದು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ ಮತ್ತು ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಾಂಶುಪಾಲ ಹಾಗೂ ದಿವಂಗತ ಫಾದರ್ ಮ್ಯಾಥ್ ವಾಸ್ ಅವರ ಸಹೋದರ ಮೆಲ್ವಿನ್ ವಾಸ್ ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಸಂಚಾಲಕ ಹಾಗೂ ಕಮ್ಯೂನಿಟಿ ಎಂಪವಮೆಂಟ್ ಟ್ರಸ್ಟನ ಸಂಸ್ಥಾಪಕರಾದ ಅನಿಲ್ ಲೋಬೋ ಅವರು ಗಣ್ಯರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ರಾಜ್ಯಮಟ್ಟ, ರಾಷ್ಟ್ರಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆಗೈದ ಎರಡೂ ಧರ್ಮಪ್ರಾಂತ್ಯಗಳ 15 ಉದಯೋನ್ಮುಖ ಕ್ರೀಡಾಪಟುಗಳನ್ನು ಶಾಲು ಹೊದಿಸಿ, ಪುಷ್ಪಗುಚ್ಛ, ಸ್ಮರಣಿಕೆ ಹಾಗೂ 5000 ರೂಪಾಯಿ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ರೋಹನ್ ಮೊಂತೇರೊ ಸಂಘಟಕರ ಶ್ರಮವನ್ನು ಶ್ಲಾಘಿಸಿ ಸಾಧಕರನ್ನು ಅಭಿನಂದಿಸಿ, ಮುಂದೆ ಅಂತಹ ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ನಿಶಾಂತ್, ಡಿ’ಸೋಜಾ (ಪಿಯುಸ್ ನಗರ) – ಚಿಸ್, ಕ್ರಿಸ್ ಅಂಚೆನ್ ಬ್ಯಾಪ್ಟಿಸ್ಟ (ಉ) = ರಿಯಾನಾ ಧೃತಿ ಫೆರ್ನಾಡಿಸ್ (ಉರ್ವಾ) – ಈಜು ಪಿಯಾನ್ ಥಾಮಸ್ ಮಸ್ಕರೇನ್ದ್ರ (ಉಡುಪಿ) – ಟೇಬಲ್ ಟೆನಿಸ್, ಡ್ಯಾಶಿಯಲ್ ಅಮಂಡಾ ಕೊನ್ನೆ (ದರೆಬೈಲ್) – ರೋಲರ್ ಸೈಟಿಂಗ್, ಜೆಸ್ನಿಯಾ ಕೊರೆಯಾ (ಬಿಜೆ) – ರೋಟರ್ ಸ್ಟೇಟಿಂಗ್, ರೀಮಾ ಡಿಸೋಜಾ (ಮೂಡುಬೆಳ್ಳಿ) – ಬಾಕ್ಸಿಂಗ್, ಜಾನ್ ನತಾಲಿಯನ್ ಡಿಸೋಜಾ (63) – ಬಾಕ್ಸಿಂಗ್, ತನಿತಾ ಮಲಿನಾ ಕ್ಯಾಸ್ಟ್ (ಮಿಲಾಗ್ರೆಸ್ ಕಲ್ಯಾಣಪುರ) – ವಾಲಿಬಾಲ್, ಫ್ಲಾವಿಕಾ ವಲಿತಾ ಮೊಂತೆರೂ (ರಾಫೆರ) – ಅಥ್ಲೆಟಿಕ್ಸ್, ಡಲಿನಾ ಮಿರಾಂಡಾ (ಮೂಡುಬಿದಿರೆ) – ಫುಟ್ಬಾಲ್, ಶಾನ್ ಎಲ್ಲಾ ಭಾರ್ಂಡಿಸ್ (ಉಡುಪಿ) – ವಾಲಿಬಾಲ್, ಪಿಪಿನ್ ಡಿಸೋಜಾ (ಸವೇರಪುರ) – ಹಾಕಿ, ಆಶ್ವಿನ್ ಡಿಸೋಜಾ (ಉಡುಪಿ) – ಫುಟ್ಬಾಲ್, ಓನ್ ಜೋಶುವಾ ಡಿಮೆಲ್ಲೋ (ಪಿಯುಸ್‌ನಗರ) – ಹಿಸ್ ಇವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭಕ್ಕೆ ಸಂತ ಅಲೋಶಿಯಸ್ ಸಂಸ್ಥೆಯ ರಕ್ಷ ವಂದನೀಯ ಮೆಲ್ವಿನ್ ಪಿಂಟೊ ಮುಖ್ಯ ಅತಿಥಿಗಳಾಗಿ ಹಾಗೂ ಸಂತೋಷ್ ಆರೇಂಜರ್ಸ್ ಮಾಲೀಕ ಸಂತೋಷ್ ಸಿರಾ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಪಟು ನಿಶೆಲ್ ಡಿಸೋಜ ಗೌರವ ಅತಿಥಿಗಳಾಗಿ ಆಗಮಿಸಿದ್ದರು.
ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಿರಲ್ ಅವರನ್ನು ಸನ್ಮಾನಿಸಲಾಯಿತು.
ಸುಳ್ಯ ಚರ್ಚ್ ಧರ್ಮಗುರು ವಂದನೀಯ ವಿಕ್ಟರ್ ಡಿಸೋಜ, ಸಿಇಟಿ ಅಧ್ಯಕ್ಷ ಶ್ರೀಮತಿ ಸೆಲೆಸ್ಟಿನ್ ಡಿಸೋಜ, ಸಿಎಸ್ ಅಧ್ಯಕ್ಷ ಜಾನ್ ಪಾಯ್ಡ್, ಸಿಎಸ್‌ಎಂಪಿ ಅಧ್ಯಕ್ಷ ಅಲ್ಲಿನ್ ಡಿಸೋಜ, ಸಿಎಸ್‌ಪಿ ಅಧ್ಯಕ್ಷ ಸಂತೋ ಕರ್ನೆಲಿಯೋ, ಪಾರೆಸ್ಟ್ ಕ್ರಾಸ್ತಾ, ಅರುಣ್ ಬ್ಯಾಪ್ಟಿಸ್ಟ್, ಮುಂತಾದವರು ಉಪಸ್ಥಿತರಿದ್ದರು. ಮೆಲ್ವಿನ್’ ಪೆರಿಸ್’ ಕಾರ್ಯಕ್ರಮವನ್ನು ಮತ್ತು ಪ್ಯಾಟ್ರಿಕ್ ರನ್ನಿಂಗ್ ಕಾಮೆಂಟರಿಯನ್ನು ನಡೆಸಿಕೊಟ್ಟರು.
ಫಲಿತಾಂಶ: ಫುಟ್ಬಾಲ್ ವಿಜೇತರು – ಕುಲಶೇಖರ್ ಚರ್ಚ್, ರನ್ನರ್ ಅಪ್: ಬಜೋಡಿ ಚರ್ಚ್. ಸೆಮಿಫೈನಲಿಸ್ಟ್ – ಬೇಳ ಮತ್ತು ಕಾಸರಗೋಡು ಚರ್ಚ್, ಫ್ಲೋ-ಬಾಲ್: ವಿಜೇತರು- ಶಿರ್ತಾಡಿ ಚರ್ಚ್, ರನ್ನರ್ ಅಪ್: ಮಡಂತ್ಯಾರ್ ಚರ್ಚ್ ಸೆಮಿಫೈನಲಿಸ್ಟ್‌ಗಳು: ವಾಮಂಜೂರು ಮತ್ತು ಬೊಂದೇಲ್ ಚರ್ಚ್
ಪ್ರತಿ ವಿಜೇತ ತಂಡಕ್ಕೆ ಪ್ರಮಾಣಪತ್ರ, ಪದಕ, ಟ್ರೋಫಿ ಮತ್ತು ರೂ. 25,000/- ಪ್ರತಿ ರನ್ನರ್ಸ್ ಅಪ್ ತಂಡಕ್ಕೆ ಪ್ರಮಾಣಪತ್ರ, ಪದಕ, ಟ್ರೋಫಿ ಮತ್ತು ರೂ. 15000/- ಪ್ರತಿ ಸೆಮಿಫೈನಲ್’ ತಂಡಕ್ಕೆ ಟ್ರೋಫಿ ಮತ್ತು ರೂ. 7500/- ನೀಡಲಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post