ದ್ವಾರಕಾ ಫೆ 26: ಈ ಹಿಂದೆ ಲಕ್ಷದ್ವೀಪದಲ್ಲಿ ಸಮುದ್ರಕ್ಕಿಳಿದು ‘ಸ್ನಾರ್ಕಲಿಂಗ್’ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತಿನ ದ್ವಾರಕಾದಲ್ಲಿ ‘ಸ್ಕೂಬಾ ಡೈವಿಂಗ್’ ಮಾಡಿದರು.ಸಮುದ್ರದಲ್ಲಿ ಮುಳುಗಿರುವ ಶ್ರೀಕೃಷ್ಣನ ನಗರ ದ್ವಾರಕೆಯ ಅವಶೇಷಗಳನ್ನು ವೀಕ್ಷಿಸಿದ ಮೋದಿ ಅವರು, ಸಮುದ್ರದ ಆಶದಲ್ಲೇ ಕೃಷ್ಣನ ಪಾರ್ಧನೆ ಮಾಡಿದರು. ಈ ಕುರಿತು ಮಾಹಿತಿಯನ್ನು ಜಾಲತಾಣದ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೋದಿ ‘ಸಮುದ್ರದೊಳಗೆ ಮುಳುಗಿರುವ ದ್ವಾರಾ ನಗರಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಒಂದು ದೈವಿಕ ಅನುಭೂತಿ. ದ್ವಾರಕೆಯ ದರ್ಶನದೊಂದಿಗೆ ಆಧ್ಯಾತ್ಮಿಕ ಭವ್ಯತೆ ಮತ್ತು ಕಾಲತೀತ ಭಕ್ತಿಯ ಅನುಭವವನ್ನು ಪಡೆದುಕೊಂಡೆ. ಕೇಷ್ಣ ಭಗವಾನ್ ನಮ್ಮೆಲ್ಲರನ್ನೂ ಆಶೀರ್ವದಿಸಲಿ’ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸ್ಕೂಬಾ ಡೈವಿಂಗ್‌ಗೆ ಅಗತ್ಯವಾದ ವಸ್ತ್ರ ಧರಿಸಿ ತಜ್ಞರೊಂದಿಗೆ ಸ್ಕೂಬಾ ಡೈವಿಂಗ್ ನಡೆಸಿದ ಪ್ರಧಾನಿ ಮೋದಿ, ಇದೇ ವೇಳೆ ನವಿಲುಗರಿಯನ್ನು ಸಮುದ್ರದಾಳದಲ್ಲಿರುವ ದ್ವಾರಕೆ ಕೃಷ್ನನಿಗೆ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು. ಈ ಕುರಿತಾದ ಫೋಟೋ ಮತ್ತು ವಿಡಿಯೋಗಳನ್ನು ಮೋದಿ ಹಂಚಿಕೊಂಡಿದ್ದಾರೆ.
ಶ್ರೀಕೃಷ್ಣ ದ್ವಾರಕೆಯ ರಾಜನಾಗಿದ್ದ, ಪ್ರಧಾನಿ ಮೋದಿ ನಗರದ ಭವ್ಯತೆ ಹಾಗೂ ಸಮೃದ್ಧಿಯನ್ನು ನೆನಪಿಸಿಕೊಂಡು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ, ಅವರು ದ್ವಾರಕಾದಲ್ಲಿ ಸುದರ್ಶನ ಸೇತುವನ್ನು ಉದ್ಘಾಟಿಸಿದರು, ಇದು ದೇಶದ ಅತಿ ಉದ್ದದ ಕೇಬಲ್ ಬೆಂಬಲಿತ ಸೇತುವೆಯಾಗಿದೆ. ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವುದು ಬಹಳ ದೈವಿಕ ಅನುಭವವಾಗಿದೆ. ಆಧ್ಯಾತ್ಮಿಕ ವೈಭವ ಮತ್ತು ಶಾಶ್ವತ ಭಕ್ತಿಯ ಪ್ರಾಚೀನ ಯುಗಕ್ಕೆ ನಾನು ಸಂಪರ್ಕ ಹೊಂದಿದ್ದೇನೆ. ಶ್ರೀ ಕೃಷ್ಣನು ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಬೇಡಿಕೊಂಡು ಅದೇ ಸಮಯದಲ್ಲಿ ಅವರು ಸಮುದ್ರದಲ್ಲಿ ನವಿಲು ಗರಿಗಳನ್ನು ಅರ್ಪಿಸಿದರು.
ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಪೌರಾಣಿಕ ನಗರವಾದ ದ್ವಾರಕಾವನ್ನು ಶ್ರೀಕೃಷ್ಣನು ಆಳುತ್ತಿದ್ದನೆಂದು ನಂಬಲಾಗಿದೆ. ಹಿಂದೂ ನಂಬಿಕೆಯ ಪ್ರಕಾರ, ಕೃಷ್ಣನು ಭೂಮಿಯಿಂದ ನಿರ್ಗಮಿಸಿದ ನಂತರ ನಗರವು ಅಂತಿಮವಾಗಿ ಸಮುದ್ರದಾಳಕ್ಕೆ ಹೋಗಿ ಬಳಿಕ ಕಾಣದಾಯಿತು. ನಾನು ಸಮುದ್ರದ ಆಳಕ್ಕೆ ಹೋಗಿ ಪ್ರಾಚೀನ ದ್ವಾರಕಾ ನಗರದ ‘ದರ್ಶನ’ ಮಾಡಿದೆ. ಪುರಾತತ್ತ್ವ ಶಾಸ್ತ್ರಜ್ಞರು ನೀರಿನ ಅಡಿಯಲ್ಲಿ ಅಡಗಿರುವ ದ್ವಾರಕಾ ನಗರದ ಬಗ್ಗೆ ಸಾಕಷ್ಟು ಬರೆದಿದ್ದಾರೆ. ನಮ್ಮ ಧರ್ಮಗ್ರಂಥಗಳಲ್ಲಿಯೂ, ದ್ವಾರಕಾದ ಬಗ್ಗೆ ಹೇಳಲಾಗುತ್ತದೆ, ಇದು ಸುಂದರವಾದ ದ್ವಾರಗಳು ಮತ್ತು ಎತ್ತರದ ಕಟ್ಟಡಗಳನ್ನು ಹೊಂದಿರುವ ನಗರ ಎಂದು ಹೇಳಲಾಗುತ್ತದೆ ಎಂದರು.
6 ವರ್ಷಗಳ ಹಿಂದೆ ಈ ಸೇತುವೆಯ ಶಂಕುಸ್ಥಾಪನೆ ಮಾಡಲು ನನಗೆ ಅವಕಾಶ ಸಿಕ್ಕಿತ್ತು ಎಂದು ಪ್ರಧಾನಿ ಹೇಳಿದರು. ಈ ಸೇತುವೆಯು ಓಖಾವನ್ನು ಬೆಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕಿಸುತ್ತದೆ. ಈ ಸೇತುವೆಯು ದ್ವಾರಕಾಧೀಶನ ದರ್ಶನವನ್ನು ಸುಲಭಗೊಳಿಸುತ್ತದೆ ಮತ್ತು ಈ ಸ್ಥಳದ ದೈವಿಕತೆಯನ್ನು ಹೆಚ್ಚಿಸುತ್ತದೆ. ಈ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಕಾಲದಲ್ಲಿ ಆಗುತ್ತಿದ್ದ ಹಗರಣಗಳನ್ನು ತಡೆದಿದ್ದೇವೆ ಎಂದರು.
ಸ್ಕೂಬಾ ಡೈವಿಂಗ್ : ಅರಬ್ಬೀ ಸಮುದ್ರದಲ್ಲಿ ಬರುವ ಬೇಟ್ ದ್ವಾರಕಾ ದ್ವೀಪದ ದ್ವಾರಕಾ ಕರಾವಳಿಯಲ್ಲಿ ಈ ಸ್ಕೂಬಾ ಡೈವಿಂಗ್ ನಡೆಸಲು ಪ್ರವಾಸಿಗರಿಗೆ ಅವಕಾಶವಿದೆ. ಇದು ಮಹಾ ಭಾರತದ ಕಾಲದಲ್ಲಿ ಕೃಷ್ಣನ ರಾಜಧಾನಿ ಆಗಿದ್ದ ದ್ವಾರಕಾ ನಗರಿ ಎಂಬುದನ್ನು ಪ್ರಾಚ್ಯವಸ್ತು ಇಲಾಖೆಯ ತಜ್ಞರು ದಶಕಗಳ ಹಿಂದೆ ಪತ್ತೆ ಮಾಡಿದ್ದರು. ಸಮುದ್ರದಾಳದಲ್ಲಿ ಕಂಡುಬಂರುವ ಅನೇಕ ಅವಶೇಷಗಳು ದ್ವಾರಕೆಯ ನೆನಪನ್ನು ಭಕ್ತರ ಮುಂದಿಡುತ್ತವೆ. ಇಲ್ಲಿ 15-20 ನಿಮಿಷದ ಸ್ಕೂಬಾ ಡೈವ್‌ಗೆ 2000-3000 ರೂಪಾಯಿವರೆಗೂ ಶುಲ್ಕವಿದೆ.
Discover more from Coastal Times Kannada
Subscribe to get the latest posts sent to your email.
Discussion about this post