ಗುರುವಾಯನಕೆರೆ: ಯಶಸ್ಸಿನ ಹಿಂದೆ ಓಡಬೇಕೆಂಬ ಛಲವಿರುವ ಈಗಿನ ಪಿಯುವಿದ್ಯಾರ್ಥಿಗಳಿಗೆ ಸರಿಯಾದ ಹಂತದಲ್ಲಿ ಸಮರ್ಥವಾದ ಆಪ್ತ-ಸಮಾಲೋಚನಾ ಮಾರ್ಗದರ್ಶನಬೇಕೇ-ಬೇಕುಎಂದು ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯ ಮಾಜೀ ಹಿರಿಯಮನೋವೈದ್ಯ, ಪದ್ಮಶ್ರೀಡಾ. ಸಿಆರ್‌ಚಂದ್ರಶೇಖರ್‌ರವರು ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಏರ್ಪಡಿಸಿದ್ದ “ಮಾನಸಮಾರ್ಗದರ್ಶನಹಾಗೂಸಂವಾದ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತೀ ಕಿರಿಯ ವಯಸ್ಸಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಯಶಸ್ಸುಗಳಿಸಬೇಕೆಂಬ ಛಲವಿರುವ ಹದಿಹರೆಯದ ವಿದ್ಯಾರ್ಥಿಗಳಿಗೆ “ಆಪ್ತ-ಸಮಾಲೋಚನೆ” ಅತ್ಯಂತ ಉತ್ತೇಜನಕಾರಿ ಎಂದು ತಿಳಿಸಿದ ಶ್ರೀಯುತರು ವಿದ್ವತ್‌ಪಿಯು ಕಾಲೇಜು ದಿನನಿತ್ಯದ ಕಾರ್ಯಸೂಚಿಯಾಗಿಆಪ್ತ-ಸಮಾಲೋಚನೆಯನ್ನು ಜಾರಿಗೊಳಿಸಿರುವುದು ರಾಜ್ಯದಪಿಯು ಶಿಕ್ಷಣವ್ಯವಸ್ಥೆಯಲ್ಲಿಯೇ ಪ್ರಥಮಎಂದುಬಣ್ಣಿಸಿದರು.
ಆಪ್ತ-ಸಮಾಲೋಚನೆ[ಕೌನ್ಸಲಿಂಗ್ ] ಒತ್ತಡ ರಹಿತಗ್ರಹಿಕೆ ಹಾಗೂ ಕಲಿಕೆಗೆ ರಾಮಬಾಣ ಎಂದಡಾ. ಸಿಆರ್‌ಚಂದ್ರಶೇಖರ್ ವಿದ್ಯಾಭ್ಯಾಸವನ್ನು ಹಿತಾಸಕ್ತಿಯ ಚಟುವಟಿಕೆಯನ್ನಾಗಿ ಪರಿವರ್ತಿಸುವ ಆಲೋಚನೆರೂಪಿಸಿಕೊಳ್ಳಲು ವಿದ್ಯಾರ್ಥಿಸಮೂಹಕ್ಕೆತಿಳಿಹೇಳಿದರು.ಬೆಂಗಳೂರಿನಂತಹ ನಗರಗಳಲ್ಲಿ ವಿದ್ಯಾಸಂಸ್ಥೆಗಳುಆಪ್ತ-ಸಮಾಲೋಚನೆಯ ಅಗತ್ಯತೆಯ ಬಗ್ಗೆಇನ್ನೂ ಚರ್ಚೆನಡೆಸುತ್ತಿರುವ ಈಸಂದರ್ಭದಲ್ಲಿ, ಗುರುವಾಯನಕೆರೆಯಂತಹ ಪಟ್ಟಣದಲ್ಲಿ ಪಿಯುಕಾಲೇಜೊಂದು “ಆಪ್ತ-ಸಮಾಲೋಚನಾವಿಭಾಗ” ವನ್ನು ಹೊಂದಿರುವುದು ವಿದ್ವತ್ ಚಿಂತಕರ ಛಾವಡಿ ಎಷ್ಟುಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದರು.ವಿದ್ವತ್‌ನ ಪಿಯುವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಜ್ಞಾಪಕಶಕ್ತಿವೃದ್ಧಿ, ಒತ್ತಡನಿವಾರಣೆ, ಪರೀಕ್ಷಾತಯಾರಿಯ ವಿಧಾನ ಹಾಗೂ ಮನಸ್ಸಿನ ಜಾಡ್ಯನಿವಾರಣೆ, ಇತ್ಯಾದಿ ವಿಷಯಗಳ ಬಗ್ಗೆ ಸಂದೇಹ ಪರಿಹಾರಕ್ಕಾಗಿ ಎರಡು ತಾಸಿಗೂ ಹೆಚ್ಚಿನಕಾಲ ಸಂವಾದ ನಡೆಸಿಯುವ ವಿದ್ಯಾರ್ಥಿಗಳಲ್ಲಿ ಹೊಸಚೈತನ್ಯತುಂಬಿದರು. ವಿದ್ವತ್‌ಪಿಯು ಕಾಲೇಜಿನ ಕೌನ್ಸಲಿಂಗ್ಮುಖ್ಯಸ್ಥರಾದ ಶ್ರೀಗಂಗಾಧರ ಇಮಂಡಗಳಲೆ, ಸಂಸ್ಥೆಯ ಸಂಸ್ಥಾಪಕಾಧ್ಯಕ್ಷರಾದ ಶ್ರೀಸುಭಾಶ್ಚಂದ್ರಶೆಟ್ಟಿ , ಪ್ರಗತಿಆಪಲ್ಎ ಜುಕೇಶನ್‌ನ ಮುಖ್ಯಸ್ಥಶ್ರೀವಿಜಯಕುಮಾರ್ , ಟ್ರಸ್ಟಿಶ್ರೀಎಂಕೆಕಾಶಿನಾಥ್ ಈಸಂದರ್ಭದಲ್ಲಿ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post