ಬಂಟ್ವಾಳ, ಫೆ.27: ಮೇಸ್ತ್ರಿ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯೊಬ್ಬ ಮನೆ ಮಾಲೀಕನ ಪತ್ನಿಯನ್ನೇ ಸಲುಗೆ ಮಾಡಿಕೊಂಡು ಅಕ್ರಮ ಸಂಬಂಧ ಬೆಳೆಸಿದ್ದಲ್ಲದೆ, ಕೊನೆಗೆ ಆಕೆಯ ಜೊತೆಗೂಡಿ ಮಾಲಕನನ್ನೇ ಕತ್ತು ಹಿಸುಕಿ ಕೊಂದು ಹಾಕಿರುವ ಘಟನೆ ವಿಟ್ಲದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಭಾಸ್ಕರನಿಗೆ ಇಬ್ಬರು ಸಣ್ಣ ಹೆಣ್ಮಕ್ಕಳಿದ್ದು, ಅದರ ನಡುವೆಯೂ ಆಶಾ ಇನ್ನೊಬ್ಬನ ಜೊತೆ ಸಂಬಂಧ ಇರಿಸಿಕೊಂಡಿದ್ದಳು. ಮೊನ್ನೆ ಶನಿವಾರ ರಾತ್ರಿ ಭಾಸ್ಕರ ಕುಡಿದು ಬಂದು ಗಲಾಟೆ ಮಾಡಿದ್ದು ಆನಂತರ ಮಲಗಿದ್ದಾಗ ತಲೆದಿಂಬನ್ನು ಮುಖಕ್ಕೆ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ‘ಭಾನುವಾರ (ಫೆ. 26) ಬೆಳಿಗ್ಗೆ 8ಗಂಟೆ ಸುಮಾರಿಗೆ ತಂದೆಗೆ ಫೋನಾಯಿಸಿದ್ದ ಆಶಾ, ‘ಪತಿ ನಿನ್ನೆ ರಾತ್ರಿ 10ಗಂಟೆಗೆ ಕೋಣೆಯಲ್ಲಿ ಮಲಗಿದ್ದರು. ಬೆಳಿಗ್ಗೆ 7.30ರ ಸುಮಾರಿಗೆ ನೋಡುವಾಗ ಗಂಡನವರು ಅವರು ಎದ್ದಿರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ಮಲಗಿದ್ದಲ್ಲಿಂದ ಏಳುತ್ತಿಲ್ಲ ಮನೆಗೆ ಬನ್ನಿ’ ಎಂದು ತಿಳಿಸಿದ್ದರು. ಇದೇ ವೇಳೆ, ಯೋಗೀಶ ಗೌಡನ ಜೊತೆ ಸೇರಿ ಭಾಸ್ಕರನನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಒಯ್ದಿದ್ದಳು. ಅಲ್ಲಿ ಪರಿಶೀಲಿಸಿದ ವೈದ್ಯರು ಭಾಸ್ಕರ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಆಸ್ಪತ್ರೆ ಸಿಬಂದಿ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು ಇವರ ನಾಟಕ ಬಯಲಾಗಿತ್ತು. ವಿಟ್ಲ ಪೊಲೀಸರು ಸಂಶಯದ ಮೇರೆಗೆ ಆಶಾ ಮತ್ತು ಯೋಗೀಶ್ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
‘ಅರವಿಂದ ಅವರ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯವಿದೆ’ ಎಂದು ಮೃತರ ಹತ್ತಿರದ ಸಂಬಂಧಿ ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ನಿವಾಸಿ ರಘುನಾಥ ಅವರು ಪೊಲೀಸರಿಗೆ ದೂರೂ ನೀಡಿದ್ದರು.
‘ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತೀರಿ ಎಂದು ಆಶಾ ಆಗಾಗ ಪತಿಯ ಬಗ್ಗೆ ತಗಾದೆ ತೆಗೆಯುತ್ತಿದ್ದರು. ಯೋಗೀಶನ ಜೊತೆ ಸೇರಿ ಪತಿಯ ಮೇಲೆ ಹಲ್ಲೆಯನ್ನೂ ನಡೆಸುತ್ತಿದ್ದರು. ಇದಕ್ಕೆ ಹೆದರಿ ರಾತ್ರಿ ವೇಳೆಯಲ್ಲಿ ಮನೆಯ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿ ಮಲಗುತ್ತಿದ್ದರು. ಈ ವಿಷಯವನ್ನು ಅರವಿಂದ ಭಾಸ್ಕರ ಅವರು ಸುಮಾರು 1 ತಿಂಗಳ ಹಿಂದೆ ತಿಳಿಸಿದ್ದರು’ ಎಂದೂ ದೂರುದಾರ ರಘುನಾಥ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ‘ಅರವಿಂದ ಭಾಸ್ಕರ ಅವರು ಹೊಸ ಮನೆಯ ನಿರ್ಮಾಣ ಕಾರ್ಯವನ್ನು ಎರಡು ವರ್ಷಗಳ ಹಿಂದೆ ಆರಂಭಿಸಿದ್ದರು. ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಅದರ ಸೆಂಟ್ರಿಂಗ್ ಕೆಲಸವನ್ನು ಅದೇ ಗ್ರಾಮದ ಯೋಗೀಶ ಗೌಡ ನಿರ್ವಹಿಸಿದ್ದರು. ಅರವಿಂದ ಭಾಸ್ಕರ ಅವರ ಪತ್ನಿ ಆಶಾಳೊಂದಿಗೆ ಯೋಗೀಶ ತುಂಬಾ ಅನ್ಯೋನ್ಯವಾಗಿದ್ದರು’ ಎಂದೂ ಪೊಲೀಸರು ಮಾಹಿತಿ ನೀಡಿದರು.
Discover more from Coastal Times Kannada
Subscribe to get the latest posts sent to your email.








Discussion about this post