• About us
  • Contact us
  • Disclaimer
Friday, May 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ವಿಟ್ಲ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಗಂಡನ ಕುತ್ತಿಗೆ ಹಿಸುಕಿ ಹತ್ಯೆ

Coastal Times by Coastal Times
February 27, 2023
in ಕ್ರೈಮ್ ನ್ಯೂಸ್
ವಿಟ್ಲ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಗಂಡನ ಕುತ್ತಿಗೆ ಹಿಸುಕಿ ಹತ್ಯೆ
215
VIEWS
WhatsappTelegramShare on FacebookShare on Twitter

ಬಂಟ್ವಾಳ, ಫೆ.27: ಮೇಸ್ತ್ರಿ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯೊಬ್ಬ ಮನೆ ಮಾಲೀಕನ ಪತ್ನಿಯನ್ನೇ ಸಲುಗೆ ಮಾಡಿಕೊಂಡು ಅಕ್ರಮ ಸಂಬಂಧ ಬೆಳೆಸಿದ್ದಲ್ಲದೆ, ಕೊನೆಗೆ ಆಕೆಯ ಜೊತೆಗೂಡಿ ಮಾಲಕನನ್ನೇ ಕತ್ತು ಹಿಸುಕಿ ಕೊಂದು ಹಾಕಿರುವ ಘಟನೆ ವಿಟ್ಲದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಭಾಸ್ಕರನಿಗೆ ಇಬ್ಬರು ಸಣ್ಣ ಹೆಣ್ಮಕ್ಕಳಿದ್ದು, ಅದರ ನಡುವೆಯೂ ಆಶಾ ಇನ್ನೊಬ್ಬನ ಜೊತೆ ಸಂಬಂಧ ಇರಿಸಿಕೊಂಡಿದ್ದಳು. ಮೊನ್ನೆ ಶನಿವಾರ ರಾತ್ರಿ ಭಾಸ್ಕರ ಕುಡಿದು ಬಂದು ಗಲಾಟೆ ಮಾಡಿದ್ದು ಆನಂತರ ಮಲಗಿದ್ದಾಗ ತಲೆದಿಂಬನ್ನು ಮುಖಕ್ಕೆ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ‘ಭಾನುವಾರ (ಫೆ. 26) ಬೆಳಿಗ್ಗೆ 8ಗಂಟೆ ಸುಮಾರಿಗೆ ತಂದೆಗೆ ಫೋನಾಯಿಸಿದ್ದ ಆಶಾ, ‘ಪತಿ ನಿನ್ನೆ ರಾತ್ರಿ 10ಗಂಟೆಗೆ ಕೋಣೆಯಲ್ಲಿ ಮಲಗಿದ್ದರು. ಬೆಳಿಗ್ಗೆ 7.30ರ ಸುಮಾರಿಗೆ ನೋಡುವಾಗ ಗಂಡನವರು ಅವರು ಎದ್ದಿರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ಮಲಗಿದ್ದಲ್ಲಿಂದ ಏಳುತ್ತಿಲ್ಲ ಮನೆಗೆ ಬನ್ನಿ’ ಎಂದು ತಿಳಿಸಿದ್ದರು. ಇದೇ ವೇಳೆ, ಯೋಗೀಶ ಗೌಡನ ಜೊತೆ ಸೇರಿ ಭಾಸ್ಕರನನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಒಯ್ದಿದ್ದಳು. ಅಲ್ಲಿ ಪರಿಶೀಲಿಸಿದ ವೈದ್ಯರು ಭಾಸ್ಕರ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಆಸ್ಪತ್ರೆ ಸಿಬಂದಿ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು ಇವರ ನಾಟಕ ಬಯಲಾಗಿತ್ತು. ವಿಟ್ಲ ಪೊಲೀಸರು ಸಂಶಯದ ಮೇರೆಗೆ ಆಶಾ ಮತ್ತು ಯೋಗೀಶ್ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

‘ಅರವಿಂದ ಅವರ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯವಿದೆ’ ಎಂದು ಮೃತರ ಹತ್ತಿರದ ಸಂಬಂಧಿ ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ನಿವಾಸಿ ರಘುನಾಥ ಅವರು ಪೊಲೀಸರಿಗೆ ದೂರೂ ನೀಡಿದ್ದರು.

‘ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತೀರಿ ಎಂದು ಆಶಾ ಆಗಾಗ ಪತಿಯ ಬಗ್ಗೆ ತಗಾದೆ ತೆಗೆಯುತ್ತಿದ್ದರು. ಯೋಗೀಶನ ಜೊತೆ ಸೇರಿ ಪತಿಯ ಮೇಲೆ ಹಲ್ಲೆಯನ್ನೂ ನಡೆಸುತ್ತಿದ್ದರು. ಇದಕ್ಕೆ ಹೆದರಿ ರಾತ್ರಿ ವೇಳೆಯಲ್ಲಿ ಮನೆಯ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿ ಮಲಗುತ್ತಿದ್ದರು. ಈ ವಿಷಯವನ್ನು ಅರವಿಂದ ಭಾಸ್ಕರ ಅವರು ಸುಮಾರು 1 ತಿಂಗಳ ಹಿಂದೆ ತಿಳಿಸಿದ್ದರು’ ಎಂದೂ ದೂರುದಾರ ರಘುನಾಥ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ‘ಅರವಿಂದ ಭಾಸ್ಕರ ಅವರು ಹೊಸ ಮನೆಯ ನಿರ್ಮಾಣ ಕಾರ್ಯವನ್ನು ಎರಡು ವರ್ಷಗಳ ಹಿಂದೆ ಆರಂಭಿಸಿದ್ದರು. ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಅದರ ಸೆಂಟ್ರಿಂಗ್‌ ಕೆಲಸವನ್ನು ಅದೇ ಗ್ರಾಮದ ಯೋಗೀಶ ಗೌಡ ನಿರ್ವಹಿಸಿದ್ದರು. ಅರವಿಂದ ಭಾಸ್ಕರ ಅವರ ಪತ್ನಿ ಆಶಾಳೊಂದಿಗೆ ಯೋಗೀಶ ತುಂಬಾ ಅನ್ಯೋನ್ಯವಾಗಿದ್ದರು’ ಎಂದೂ ಪೊಲೀಸರು ಮಾಹಿತಿ ನೀಡಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಕೊಂಕಣಿ ಲೇಖಕ ಸಂಘದಿಂದ ಶ್ರೀಮತಿ ಐರಿನ್ ಪಿಂಟೊರವರಿಗೆ ಪ್ರಶಸ್ತಿ ಪ್ರದಾನ

Next Post

ಉಳ್ಳಾಲ ದರ್ಗಾ ಚುನಾವಣೆ: ನೂತನ ಸಮಿತಿಗೆ 55 ಮಂದಿ ಸದಸ್ಯರ ಆಯ್ಕೆ ,ಕೋರ್ಟ್ ಮೆಟ್ಟಿಲೇರಿದ ಹಳೆ ಆಡಳಿತ

Related Posts

ಸಚಿವ ಜಮೀರ್ ಮನೆಯಿಂದ 1 ಕೆ.ಜಿ 200 ಗ್ರಾಂ ಚಿನ್ನಾಭರಣ ಕಳ್ಳತನ; ಸಂಬಂಧಿ ಸೇರಿ ಇಬ್ಬರು ಸೆರೆ
ಕ್ರೈಮ್ ನ್ಯೂಸ್

ಸಚಿವ ಜಮೀರ್ ಮನೆಯಿಂದ 1 ಕೆ.ಜಿ 200 ಗ್ರಾಂ ಚಿನ್ನಾಭರಣ ಕಳ್ಳತನ; ಸಂಬಂಧಿ ಸೇರಿ ಇಬ್ಬರು ಸೆರೆ

May 6, 2026
27
ಬಂಟ್ವಾಳ : ಮಾದಕ ವಸ್ತು MDMA ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 46 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ
ಕ್ರೈಮ್ ನ್ಯೂಸ್

ಬಂಟ್ವಾಳ : ಮಾದಕ ವಸ್ತು MDMA ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 46 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ

May 3, 2026
19
Next Post
ಉಳ್ಳಾಲ ದರ್ಗಾ ಚುನಾವಣೆ: ನೂತನ ಸಮಿತಿಗೆ 55 ಮಂದಿ ಸದಸ್ಯರ ಆಯ್ಕೆ ,ಕೋರ್ಟ್ ಮೆಟ್ಟಿಲೇರಿದ ಹಳೆ ಆಡಳಿತ

ಉಳ್ಳಾಲ ದರ್ಗಾ ಚುನಾವಣೆ: ನೂತನ ಸಮಿತಿಗೆ 55 ಮಂದಿ ಸದಸ್ಯರ ಆಯ್ಕೆ ,ಕೋರ್ಟ್ ಮೆಟ್ಟಿಲೇರಿದ ಹಳೆ ಆಡಳಿತ

Discussion about this post

Recent News

ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ

ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ

May 8, 2026
7
ಮಂಗಳೂರು- ತಣ್ಣೀರುಬಾವಿಗೆ ಸಂಪರ್ಕಿಸುವ ನೂತನ ಸೇತುವೆ ಸೆಪ್ಟೆಂಬರ್ ಅಂತ್ಯಕ್ಕೆ ಲೋಕಾರ್ಪಣೆ – ಸಚಿವ ದಿನೇಶ್ ಗುಂಡೂರಾವ್

ಮಂಗಳೂರು- ತಣ್ಣೀರುಬಾವಿಗೆ ಸಂಪರ್ಕಿಸುವ ನೂತನ ಸೇತುವೆ ಸೆಪ್ಟೆಂಬರ್ ಅಂತ್ಯಕ್ಕೆ ಲೋಕಾರ್ಪಣೆ – ಸಚಿವ ದಿನೇಶ್ ಗುಂಡೂರಾವ್

May 8, 2026
24
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ

ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ

May 8, 2026
ಮಂಗಳೂರು- ತಣ್ಣೀರುಬಾವಿಗೆ ಸಂಪರ್ಕಿಸುವ ನೂತನ ಸೇತುವೆ ಸೆಪ್ಟೆಂಬರ್ ಅಂತ್ಯಕ್ಕೆ ಲೋಕಾರ್ಪಣೆ – ಸಚಿವ ದಿನೇಶ್ ಗುಂಡೂರಾವ್

ಮಂಗಳೂರು- ತಣ್ಣೀರುಬಾವಿಗೆ ಸಂಪರ್ಕಿಸುವ ನೂತನ ಸೇತುವೆ ಸೆಪ್ಟೆಂಬರ್ ಅಂತ್ಯಕ್ಕೆ ಲೋಕಾರ್ಪಣೆ – ಸಚಿವ ದಿನೇಶ್ ಗುಂಡೂರಾವ್

May 8, 2026
ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ

May 7, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d