ಉಳ್ಳಾಲ, ಎ.27: ನಿನ್ನೆ ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆಯಲ್ಲಿ ಶೂ, ಮೊಬೈಲ್, ಪರ್ಸ್ ಇಟ್ಟು ನಾಪತ್ತೆಯಾಗಿದ್ದ ಕಾರ್ ಡೀಲರ್ ಮೃತದೇಹ ಸೋಮೇಶ್ವರದ ಉಚ್ಚಿಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಸಮುದ್ರಕ್ಕೆ ಹಾರಿ ಆತ್ಮಹತ್ಯಗೈದಿರು ಸಾಧ್ಯತೆಯ ಹಿನ್ನಲೆಯಲ್ಲಿ ಸ್ಥಳೀಯ ಈಜುಗಾರರು ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದು ಈವರೆಗೆ ಪತ್ತೆಯಾಗಿಲ್ಲ.
ಗುರುವಾರ ಮಧ್ಯಾಹ್ನ ಉಚ್ಚಿಲ ಕಡಲ ಕಿನಾರೆಯಲ್ಲಿ ವಿಹಾರಕ್ಕೆ ಬಂದಿದ್ದ ಜೋಡಿಯೊಂದು ನೀರಾಟಕ್ಕಿಳಿದಾಗ ಯುವಕನ ಕಾಲಿಗೆ ವಸಂತ್ ಅವರ ಮೃತದೇಹ ಸಿಕ್ಕಿಕೊಂಡಿದೆ. ಭಯಗೊಂಡ ಯುವಕನು ಬೊಬ್ಬೆ ಹಾಕಿದಾಗ ಅಲ್ಲೇ ಇದ್ದ ನಿವೃತ್ತ ಯೋಧರೊಬ್ಬರು ನೀರಿಗಿಳಿದು ಮೃತ ದೇಹವನ್ನ ಮೇಲಕ್ಕೆತ್ತಿದ್ದಾರೆ.

ವಸಂತ್ ಅವರು ಬಿಕರ್ನಕಟ್ಟೆಯ ಜಯಶ್ರೀ ಗೇಟ್ ಬಳಿ ಪಾಲುದಾರಿಕೆಯಲ್ಲಿ ಕಾರ್ ಡೀಲಿಂಗ್ ಕಚೇರಿ ಹೊಂದಿದ್ದಾರೆ. ಬಸ್ತಿಪಡ್ಪುವಿನಲ್ಲಿದ್ದ ಅವರು ಕೆಲವು ತಿಂಗಳ ಹಿಂದೆ ಧರ್ಮನಗರದಲ್ಲಿ ಸುಸಜ್ಜಿತ ಮನೆ ಕಟ್ಟಿ ಅಲ್ಲೇ ವಾಸವಾಗಿದ್ದರು. ಇಂದು ಬೆಳಗ್ಗೆ ಪತ್ನಿಯಲ್ಲಿ ಕೆಲಸಕ್ಕೆ ಹೋಗುತ್ತೇನೆ ಎಂದು ತಿಳಿಸಿದ್ದು, ಕಚೇರಿಗೆ ದೂರವಾಣಿ ಕರೆ ಮಾಡಿ ಅನಾರೋಗ್ಯದ ಕಾರಣ ಕಚೇರಿಗೆ ಬರುವುದಿಲ್ಲ ಎಂದು ತಿಳಿಸಿದ್ದರು. ಮಧ್ಯಾಹ್ನದ ವೇಳೆಗೆ ಸಮುದ್ರ ತೀರಕ್ಕೆ ಬಂದಿದ್ದ ಪ್ರವಾಸಿಗರು ರುದ್ರಪಾದೆಯ ಬಳಿ ಮೊಬೈಲ್ ಮತ್ತು ಪರ್ಸ್ ಬಟ್ಟೆಯಲ್ಲಿ ಕಟ್ಟಿರುವುದನ್ನು ನೋಡಿ ಅದನ್ನು ಸ್ಥಳೀಯ ಅಂಗಡಿಯಲ್ಲಿದ್ದವರಿಗೆ ಮಾಹಿತಿ ನೀಡಿದ್ದು, ಈ ಸಂದರ್ಭದಲ್ಲಿ ಸ್ಥಳೀಯವಾಗಿ ಕಾರು ಮತ್ತು ಶೂ ಪತ್ತೆಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಮನೆಯವರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳೀಯ ಈಜುಗಾರರ ಸಹಾಯದಿಂದ ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದು, ಈವರೆಗೆ ಪತ್ತೆಯಾಗಿಲ್ಲ. ಮೃತದೇಹವನ್ನ ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರು ಪತ್ನಿ ನೀತಾ, ಮಗಳು ಜಿಯಾಳನ್ನು ಅಗಲಿದ್ದಾರೆ
Discover more from Coastal Times Kannada
Subscribe to get the latest posts sent to your email.








Discussion about this post