• About us
  • Contact us
  • Disclaimer
Sunday, May 3, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು ನಿವಾಸಿಯ ಮೃತದೇಹ ರೈಲಿನ ಶೌಚಾಲಯದಲ್ಲೇ 24 ಗಂಟೆ ಬಾಕಿ, ಕೊಳೆತ ಶವ ಕೊಟ್ಟ ರೈಲ್ವೇ !

Coastal Times by Coastal Times
April 25, 2023
in ಕರಾವಳಿ
ಮಂಗಳೂರು ನಿವಾಸಿಯ ಮೃತದೇಹ ರೈಲಿನ ಶೌಚಾಲಯದಲ್ಲೇ 24 ಗಂಟೆ ಬಾಕಿ, ಕೊಳೆತ ಶವ ಕೊಟ್ಟ ರೈಲ್ವೇ !
179
VIEWS
WhatsappTelegramShare on FacebookShare on Twitter

ಮಂಗಳೂರು: ಮುಂಬಯಿ- ಮಂಗಳೂರು ರೈಲಿನಲ್ಲಿ ಊರಿಗೆ ಮರಳುತ್ತಿದ್ದ ವ್ಯಕ್ತಿ ರೈಲಿನ ಶೌಚಾಲಯದಲ್ಲೇ ಮೃತಪಟ್ಟು ರೈಲಿನ ಸಿಬಂದಿಯ ಗಮನಕ್ಕೇ ಬಾರದೆ ಮೃತದೇಹವು ಮತ್ತೆ ಅದೇ ರೈಲಿನಲ್ಲಿ ಮುಂಬಯಿಗೆ ಹೋದ ಹೃದಯ ಕಲಕುವ ವಿದ್ಯಮಾನ ಘಟಿಸಿದೆ.

ಇಲ್ಲಿನ ಕಿನ್ನಿಗೋಳಿಯ ಮೆನ್ನ ಬೆಟ್ಟಿ ನವರಾದ ಮೋಹನ್‌ ಬಂಗೇರ (56) ಅವರು ಮುಂಬಯಿಯಿಂದ ಊರಿಗೆ ಮರಳುವ ವೇಳೆಗೆ ಹೃದ ಯಾಘಾತದಿಂದ ಮೃತಪಟ್ಟಿದ್ದು ವಿಷಯ ಗೊತ್ತಾಗದೆ ಅವರ ಕುಟುಂಬಿಕರು ಮುಂಬಯಿ ವರೆಗೂ ಹುಡುಕಾಡಿದ್ದಾರೆ. ಆದರೆ ಅವರಿದ್ದ ಬೋಗಿಯ ಶೌಚಾಲಯ ಸಹಿತ ತಪಾಸಣೆ  ಮಾಡಬೇಕಿದ್ದ ರೈಲು ಸಿಬಂದಿ ಕರ್ತವ್ಯಲೋಪ ಮಾಡಿದ್ದಲ್ಲದೆ ತಾವು ತಪಾಸಣೆ ಮಾಡಿದ್ದಾಗಿ ವರದಿ ಕೊಟ್ಟಿ ರುವುದು ನೋವು ತಂದಿದೆ.

ಮುಂಬಯಿಯಿಂದ ಮೋಹನ್‌ ಬಂಗೇರ ಅವರು ಎ. 18ರ ಮುಂಬಯಿ ಸಿಎಸ್‌ಟಿ ಮಂಗಳೂರು ಜಂಕ್ಷನ್‌ ರೈಲಿನ ಬಿ-3 ಕೋಚ್‌ನಲ್ಲಿ ಪ್ರಯಾಣ ಆರಂಭಿಸಿದ್ದರು. ಅವರನ್ನು ಕರೆದೊಯ್ಯಲು ಸೋದರ ಹಾಗೂ ಇತರರು ಸುರತ್ಕಲ್‌ನಲ್ಲಿ ಕಾಯುತ್ತಿದ್ದರು. ಆಗ ಮೋಹನ್‌ ಬಂಗೇರ ಅವರು ರೈಲಿನಲ್ಲಿ ನಾಪತ್ತೆಯಾದ ವಿಚಾರ ಅವರಿಗೆ ರೈಲಿನ ಟಿಟಿಇ ಮೂಲಕ ಫೋನ್‌ನಲ್ಲಿ ಲಭಿಸಿತು. ಅವರ ಬ್ಯಾಗ್‌, ಪರ್ಸ್‌ ಮತ್ತು ಮೊಬೈಲ್‌ ಕುಳಿತಿದ್ದ ಜಾಗದಲ್ಲೇ ಇತ್ತು.

ಟಿಟಿಇಯಲ್ಲಿ ಈ ಕುರಿತು ಮಾತನಾಡಿದಾಗ, ಅವರು ಮೋಹನ್‌ ಬಂಗೇರರು ಕಂಕಾವಲಿ ಅಥವಾ ಮಡಗಾಂವ್‌ನಲ್ಲಿ ಇಳಿದು ಹೋದಂತಿದೆ, ಅಲ್ಲಿಯ ಸಿಸಿಟಿವಿ ಫೂಟೇಜ್‌ ನೋಡಿದರೆ ಗೊತ್ತಾಗಬಹುದು ಎಂದಿದ್ದರು. ಬಳಿಕ ಮೋಹನ್‌ ಕುಟುಂಬದವರು ಮಂಗಳೂರು ಜಂಕ್ಷನ್‌ಗೆ ತೆರಳಿ ಅಲ್ಲಿನ ಅಧಿಕಾರಿಗಳ ಸಲಹೆಯಂತೆ ರೈಲ್ವೇ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಈ ನಡುವೆ ಮುಂಬಯಿಯಲ್ಲಿರುವ ಸಂಬಂಧಿಕರೂ ಹಲವು ಸ್ಟೇಷನ್‌ಗಳಲ್ಲಿ ಸಿಸಿಟವಿ ದೃಶ್ಯಾವಳಿ ಪರಿಶೀಲನೆ ನಡೆಸಿದರೂ ಎಲ್ಲೂ ಪತ್ತೆಯಾಗಲಿಲ್ಲ. ಮರುದಿನ ಮೋಹನ್‌ ಅವರ ಅಣ್ಣ ರಾಮ ಬಂಗೇರ ಅವರಿಗೆ ಮುಂಬಯಿ ಸಿಎಸ್‌ಟಿ ಸ್ಟೇಷನ್‌ನಿಂದ ಟಿಟಿಇ ಕರೆ ಮಾಡಿದ್ದು ಮೃತದೇಹ ರೈಲಿನ ಟಾಯ್ಲೆಟ್‌ನಲ್ಲಿ ಪತ್ತೆಯಾಗಿರುವುದನ್ನು ತಿಳಿಸಿದ್ದ.

ಕೊಳೆತ ಶರೀರ ; ಮೃತದೇಹವನ್ನು ರೈಲಿನಲ್ಲೇ ಮತ್ತೆ ಹಿಂದೆ ಕಳುಹಿಸಲು, ಮರಣೋತ್ತರ ಪರೀಕ್ಷೆಗೆ 10 ಸಾವಿರ ರೂ.ಗಳನ್ನು ಪಾವತಿಸಿದ್ದು ಏಜೆನ್ಸಿಯೊಂದು ಪ್ಯಾಕ್‌ ಮಾಡಿ ಕಳಿಸಿದೆ. ಆದರೆ ಪಾರ್ಸೆಲ್‌ ಇಲ್ಲಿಗೆ ಬರುವಾಗ ದೇಹ ಪೂರ್ಣ ಕೊಳೆತು ದುರ್ವಾಸನೆ ಬೀರುತ್ತಿತ್ತು.

ಎಸಿ ಬೋಗಿಯಲ್ಲಿ ಸಂಚರಿಸುವವರಿಗೆ ಇಂತಹ ದುಃಸ್ಥಿತಿಯಾದರೆ ಹೇಗೆ? ಇಂತಹ ಸ್ಥಿತಿ ಯಾರಿಗೂ ಬರದಿರಲಿ. ರೈಲು ಸಿಬಂದಿ ಇಷ್ಟು ನಿರ್ಲಕ್ಷ್ಯ ವಹಿಸಿ ದ್ದರಿಂದ ಹೀಗಾಗಿದೆ. ಇದಕ್ಕಾಗಿ ಪರಿ ಹಾರಕ್ಕೂ ಆಗ್ರಹಿಸಿ ದೂರು ಸಲ್ಲಿಸಿದ್ದೇವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೋಹನ್‌ ಬಂಗೇರ ಹಲವು ವರ್ಷ ಗಳಿಂದ ಮುಂಬಯಿನಲ್ಲಿ ಮಿಲ್ಕ್ ಪಾರ್ಲರ್‌ ನಡೆಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರರು ಕಿನ್ನಿಗೋಳಿಯ ಮನೆಯಲ್ಲಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಪೊಲೀಸರ ಮೇಲೆ ಹಲ್ಲೆ ; ಆಂಧ್ರ ಪ್ರದೇಶ ಸಿಎಂ ವೈಎಸ್ ಜಗನ್ ಸಹೋದರಿ ವೈಎಸ್‌ ಶರ್ಮಿಳಾ ಬಂಧನ, 14 ದಿನ ಪೊಲೀಸ್ ಕಸ್ಟಡಿ

Next Post

ಉಳ್ಳಾಲ: ನಾಪತ್ತೆಯಾಗಿದ್ದ ಕಾರು ಡೀಲರ್ ಮೃತದೇಹ ಉಚ್ಚಿಲ ಸಮುದ್ರತೀರದಲ್ಲಿ ಪತ್ತೆ, ಆತ್ಮಹತ್ಯೆಗೆ ಕಾರಣ ನಿಗೂಢ

Related Posts

ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ
ಕರಾವಳಿ

ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ

April 30, 2026
98
ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ
ಕರಾವಳಿ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
3
Next Post
ಉಳ್ಳಾಲ: ನಾಪತ್ತೆಯಾಗಿದ್ದ ಕಾರು ಡೀಲರ್ ಮೃತದೇಹ ಉಚ್ಚಿಲ ಸಮುದ್ರತೀರದಲ್ಲಿ ಪತ್ತೆ, ಆತ್ಮಹತ್ಯೆಗೆ ಕಾರಣ ನಿಗೂಢ

ಉಳ್ಳಾಲ: ನಾಪತ್ತೆಯಾಗಿದ್ದ ಕಾರು ಡೀಲರ್ ಮೃತದೇಹ ಉಚ್ಚಿಲ ಸಮುದ್ರತೀರದಲ್ಲಿ ಪತ್ತೆ, ಆತ್ಮಹತ್ಯೆಗೆ ಕಾರಣ ನಿಗೂಢ

Discussion about this post

Recent News

ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!

ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!

May 3, 2026
14
ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿದ್ದ ವಿಮಾನದ ತುರ್ತು ಬಾಗಿಲು ತೆಗೆದು ಹೊರಗೆ ಹಾರಿದ ಪ್ರಯಾಣಿಕ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿದ್ದ ವಿಮಾನದ ತುರ್ತು ಬಾಗಿಲು ತೆಗೆದು ಹೊರಗೆ ಹಾರಿದ ಪ್ರಯಾಣಿಕ

May 3, 2026
32
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!

ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!

May 3, 2026
ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿದ್ದ ವಿಮಾನದ ತುರ್ತು ಬಾಗಿಲು ತೆಗೆದು ಹೊರಗೆ ಹಾರಿದ ಪ್ರಯಾಣಿಕ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿದ್ದ ವಿಮಾನದ ತುರ್ತು ಬಾಗಿಲು ತೆಗೆದು ಹೊರಗೆ ಹಾರಿದ ಪ್ರಯಾಣಿಕ

May 3, 2026
ಬಂಟ್ವಾಳ : ಮಾದಕ ವಸ್ತು MDMA ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 46 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ

ಬಂಟ್ವಾಳ : ಮಾದಕ ವಸ್ತು MDMA ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ, 46 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ

May 3, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d