• About us
  • Contact us
  • Disclaimer
Monday, August 10, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಗಾಲ್ಫ್ ಆಟಕ್ಕೆ ನೂತನ ಅಲೈನ್‌ಮೆಂಟ್ ಸಾಧನಗಳ ಪರಿಚಯ ಮಾಡಿದ ಮಂಗಳೂರು ಮೂಲದ ಡಾ. ದಿನಕರ್ ರೈ

Coastal Times by Coastal Times
August 10, 2026
in ವಿದೇಶಿ ಸುದ್ದಿ
ಗಾಲ್ಫ್ ಆಟಕ್ಕೆ ನೂತನ ಅಲೈನ್‌ಮೆಂಟ್ ಸಾಧನಗಳ ಪರಿಚಯ ಮಾಡಿದ ಮಂಗಳೂರು ಮೂಲದ ಡಾ. ದಿನಕರ್ ರೈ
7
VIEWS
WhatsappTelegramShare on FacebookShare on Twitter

ನ್ಯೂಯಾರ್ಕ್, ಜುಲೈ 25: ಗಾಲ್ಫ್ ಆಟದಲ್ಲಿ ನಿಖರತೆ ಹಾಗೂ ಸ್ಥಿರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ಮೂಲದ ಖ್ಯಾತ ರಕ್ತನಾಳ ಶಸ್ತ್ರಚಿಕಿತ್ಸಕ, ವಿಜ್ಞಾನಿ, ಕ್ರೀಡಾಪಟು ಹಾಗೂ ಆವಿಷ್ಕಾರಕ ಡಾ. ದಿನಕರ್ ಬಿ. ರೈ ಅಭಿವೃದ್ಧಿಪಡಿಸಿರುವ ‘ರೈಸ್ ಸೂಪರ್ ಟಿ’ ಮತ್ತು ‘ರೈಸ್ ಡಿವೈಸ್’ ಎಂಬ ಎರಡು ನೂತನ ಗಾಲ್ಫ್ ಅಲೈನ್‌ಮೆಂಟ್ ಸಾಧನಗಳನ್ನು ನ್ಯೂಯಾರ್ಕ್‌ನ ವಿಲೇಜ್ ಕ್ಲಬ್ ಆಫ್ ಲೇಕ್ ಸಕ್ಸೆಸ್‌ನಲ್ಲಿ ಜುಲೈ 25ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗಾಲ್ಫ್ ಆಟಗಾರರು, ಕ್ಲಬ್ ಸದಸ್ಯರು, ವೃತ್ತಿಪರರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು. ಗಾಲ್ಫ್ ಆಟದಲ್ಲಿ ಅತ್ಯಂತ ಪ್ರಮುಖವಾದ ಅಲೈನ್‌ಮೆಂಟ್‌ ಅನ್ನು ಇನ್ನಷ್ಟು ನಿಖರವಾಗಿ ಮತ್ತು ಸುಲಭವಾಗಿ ಅರ್ಥೈಸಿಕೊಳ್ಳುವ ಉದ್ದೇಶದಿಂದ ಡಾ. ರೈ ಅವರು ಅಭಿವೃದ್ಧಿಪಡಿಸಿರುವ ಸಾಧನಗಳ ಕುರಿತು ಕಾರ್ಯಕ್ರಮದಲ್ಲಿ ವಿವರಿಸಲಾಯಿತು.

ಗಾಲ್ಫ್ ಆಟಗಾರರು ಸಾಮಾನ್ಯವಾಗಿ ತಾವು ಹೊಡೆಯಬೇಕಾದ ಗುರಿಯನ್ನು ಗುರುತಿಸಿ, ಚೆಂಡಿನಿಂದ ಗುರಿಯವರೆಗೆ ಮನಸ್ಸಿನಲ್ಲಿ ಒಂದು ಕಾಲ್ಪನಿಕ ರೇಖೆಯನ್ನು ಕಲ್ಪಿಸಿಕೊಳ್ಳುತ್ತಾರೆ. ಬಳಿಕ ಕ್ಲಬ್‌ಫೇಸ್, ಕಾಲು, ಭುಜ ಹಾಗೂ ಸೊಂಟವನ್ನು ಆ ರೇಖೆಗೆ ಅನುಗುಣವಾಗಿ ಹೊಂದಿಸಿಕೊಳ್ಳುತ್ತಾರೆ. ಆದರೆ ಈ ಕಾಲ್ಪನಿಕ ರೇಖೆ ಕಣ್ಣಿಗೆ ಕಾಣುವುದಿಲ್ಲ. ಡಾ. ರೈ ಅವರ ಆವಿಷ್ಕಾರಗಳು ಈ ಅಲೈನ್‌ಮೆಂಟ್ ಪ್ರಕ್ರಿಯೆಯನ್ನು ದೃಶ್ಯವಾಗಿ ಹಾಗೂ ಪುನರಾವರ್ತಿಸಲು ಸಾಧ್ಯವಾಗುವ ರೀತಿಯಲ್ಲಿ ಸರಳಗೊಳಿಸುವ ಉದ್ದೇಶ ಹೊಂದಿವೆ.

‘ರೈಸ್ ಸೂಪರ್ ಟಿ’ಯನ್ನು ಗಾಲ್ಫ್ ಕೋರ್ಸ್‌ನಲ್ಲಿ ನೇರವಾಗಿ ಬಳಸಬಹುದಾದ ದಿಕ್ಕು ಸೂಚಿಸುವ ಟೀ ಆಗಿ ವಿನ್ಯಾಸಗೊಳಿಸಲಾಗಿದೆ. ‘ರೈಸ್ ಡಿವೈಸ್’ ಅನ್ನು ಗಾಲ್ಫ್ ಅಭ್ಯಾಸ ಮೈದಾನದಲ್ಲಿ ತರಬೇತಿ ಮತ್ತು ಬೋಧನೆಗಾಗಿ ಬಳಸಬಹುದಾಗಿದೆ. ಎರಡೂ ಸಾಧನಗಳು ಪರಸ್ಪರ ಲಂಬವಾಗಿರುವ ದಿಕ್ಕು ಮತ್ತು ಅಲೈನ್‌ಮೆಂಟ್ ಭಾಗಗಳ ಮೂಲಕ ಗುರಿಯ ರೇಖೆಯನ್ನು ಗುರುತಿಸಲು, ಕ್ಲಬ್‌ಫೇಸ್ ಅನ್ನು ಸರಿಯಾಗಿ ಹೊಂದಿಸಲು, ದೇಹವನ್ನು ಅಲೈನ್ ಮಾಡಲು ಹಾಗೂ ಪುನರಾವರ್ತಿತ ಸ್ವಿಂಗ್ ಪಥವನ್ನು ಬೆಳೆಸಿಕೊಳ್ಳಲು ನೆರವಾಗುತ್ತವೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸಂವಾದ ಕಾರ್ಯಕ್ರಮವನ್ನು ಆರ್‌ಆರ್ ಗಾಲ್ಫ್ ಅಕಾಡೆಮಿಯ ರಾಜೀವ್ ರುದ್ರಾ ನಿರ್ವಹಿಸಿದರು. ವಿಲೇಜ್ ಕ್ಲಬ್‌ನ ಗಾಲ್ಫ್ ಪ್ರೊ ರೋಬಿ ಮಿಸ್ಟ್ರೆಟ್ಟಾ ಹಾಗೂ ಡಾ. ದಿನಕರ್ ಬಿ. ರೈ ಅವರು ಅಲೈನ್‌ಮೆಂಟ್‌ನ ಮಹತ್ವ, ಸಾಧನಗಳ ಅಭಿವೃದ್ಧಿಯ ಹಿಂದಿನ ಚಿಂತನೆ ಹಾಗೂ ಗಾಲ್ಫ್ ಆಟಗಾರರು, ತರಬೇತುದಾರರು ಮತ್ತು ವಿದ್ಯಾರ್ಥಿಗಳಿಗೆ ಇದರ ಉಪಯೋಗಗಳ ಕುರಿತು ಚರ್ಚಿಸಿದರು.

ಸಾಧನಗಳ ಬಳಕೆಯನ್ನು ವಿವರಿಸುವ ತರಬೇತಿ ವಿಡಿಯೊಗಳು ಹಾಗೂ ಡಾ. ರೈ ಅವರ ಕ್ರೀಡಾ ಮತ್ತು ವೃತ್ತಿಜೀವನದ ಕುರಿತ ವಿಡಿಯೊಗಳನ್ನೂ ಪ್ರದರ್ಶಿಸಲಾಯಿತು.

ಭಾರತದ ಖ್ಯಾತ ಗಾಲ್ಫ್ ಆಟಗಾರ ಹಾಗೂ Professional Golf Tour of Indiaಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮನ್ದೀಪ್ ಝೋಲ್, ನಾರ್ತ್ ಶೋರ್ ಕಂಟ್ರಿ ಕ್ಲಬ್‌ನ ಗಾಲ್ಫ್ ವೃತ್ತಿಪರ ಆಡಮ್ ಲೇರ್ಡ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಗಾಲ್ಫ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ರಿಷಿ ನಾರಾಯಣ್ ಅವರು ಸಾಧನಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಸಾಧನಗಳನ್ನು ನೇರವಾಗಿ ವೀಕ್ಷಿಸುವ ಹಾಗೂ ಡಾ. ರೈ ಮತ್ತು ಕಾರ್ಯಕ್ರಮದ ತಂಡದೊಂದಿಗೆ ಸಂವಾದ ನಡೆಸುವ ಅವಕಾಶವೂ ಕಲ್ಪಿಸಲಾಗಿತ್ತು.

ಗಲ್‌ವಿಂಗ್ ಮೋಟಾರ್ ಕಾರ್ಸ್, ಅಸ್ಟೋರಿಯಾ ಸಂಸ್ಥೆಯ ಅಧ್ಯಕ್ಷ ಪೀಟರ್ ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಪ್ರಾಯೋಜಕರಾಗಿ ಸಹಕರಿಸಿದರು. ವಿಲೇಜ್ ಕ್ಲಬ್ ಆಫ್ ಲೇಕ್ ಸಕ್ಸೆಸ್ ಹಾಗೂ ಅದರ ಆಡಳಿತ ಮಂಡಳಿಯೂ ಕಾರ್ಯಕ್ರಮಕ್ಕೆ ಬೆಂಬಲ ನೀಡಿತು. ಸಾಧನಗಳ ಅಭಿವೃದ್ಧಿಯ ಸಂದರ್ಭದಲ್ಲಿ ನೀಡಿದ ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕಾಗಿ ಕ್ಲಬ್‌ನ ಗಾಲ್ಫ್ ಪ್ರೊ ರೋಬಿ ಮಿಸ್ಟ್ರೆಟ್ಟಾ ಅವರಿಗೆ ಡಾ. ರೈ ಕೃತಜ್ಞತೆ ಸಲ್ಲಿಸಿದರು.

ಐದು ದಶಕಗಳಿಗೂ ಹೆಚ್ಚು ಕಾಲ ರಕ್ತನಾಳ ಶಸ್ತ್ರಚಿಕಿತ್ಸಕ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಾ. ಡಿಂಕರ್ ಬಿ. ರೈ ಅವರು ಕ್ರೀಡೆಯಲ್ಲಿಯೂ ಸಕ್ರಿಯರಾಗಿದ್ದು, ರಾಷ್ಟ್ರೀಯ ಮಟ್ಟದ ಮಾಜಿ ಕ್ರಿಕೆಟಿಗರಾಗಿದ್ದಾರೆ. ವೈದ್ಯಕೀಯ, ವಿಜ್ಞಾನ ಮತ್ತು ಕ್ರೀಡೆಯ ಅನುಭವದ ಹಿನ್ನೆಲೆಯಲ್ಲಿ ಗಾಲ್ಫ್ ಆಟದಲ್ಲಿ ಅಲೈನ್‌ಮೆಂಟ್ ಅನ್ನು ಸರಳ ಜ್ಯಾಮಿತೀಯ ತತ್ವಗಳ ಮೂಲಕ ದೃಶ್ಯವಾಗಿ ಅರ್ಥೈಸಿ, ಕಲಿತು ಹಾಗೂ ಪುನರಾವರ್ತಿಸಲು ಸಾಧ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ.

“ಅಲೈನ್‌ಮೆಂಟ್ ಅನ್ನು ದೃಶ್ಯವಾಗಿ, ನಿಖರವಾಗಿ ಮತ್ತು ಪುನರಾವರ್ತಿಸಲು ಸಾಧ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ. ಇದರಿಂದ ಗಾಲ್ಫ್ ಆಟಗಾರರು ಆತ್ಮವಿಶ್ವಾಸದಿಂದ ನಿಂತು, ತಮ್ಮ ಸಂಪೂರ್ಣ ಗಮನವನ್ನು ಸ್ವಿಂಗ್‌ನತ್ತ ಕೇಂದ್ರೀಕರಿಸಬಹುದು,” ಎಂದು ಡಾ. ರೈ ಹೇಳಿದರು.

‘ರೈಸ್ ಸೂಪರ್ ಟಿ’ ಹಾಗೂ ‘ರೈಸ್ ಡಿವೈಸ್’ ಎರಡೂ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿರುವ ಆವಿಷ್ಕಾರಗಳಾಗಿವೆ. ‘ರೈಸ್ ಸೂಪರ್ ಟಿ’ಯನ್ನು ಗಾಲ್ಫ್ ಕೋರ್ಸ್‌ನಲ್ಲಿ ಬಳಸಲು ಹಾಗೂ ‘ರೈಸ್ ಡಿವೈಸ್’ ಅನ್ನು ಅಭ್ಯಾಸ ಮೈದಾನದಲ್ಲಿ ಗಾಲ್ಫ್ ಆಟಗಾರರು ಮತ್ತು ತರಬೇತುದಾರರ ಬಳಕೆಗೆ ವಿನ್ಯಾಸಗೊಳಿಸಲಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಕಾಂಗ್ರೆಸ್‌ ಮುಖಂಡ, ಡೇವಿಡ್ ಡಿಸೋಜಾ ಹತ್ಯೆ;‌ ಹಂತಕನ ಕಾಲಿಗೆ ಗುಂಡೇಟು, ಸುಪಾರಿ ಕೊಟ್ಟವರು ಯಾರು?

Related Posts

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ
ವಿದೇಶಿ ಸುದ್ದಿ

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

July 15, 2026
19
ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ
ವಿದೇಶಿ ಸುದ್ದಿ

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ

March 1, 2026
77

Discussion about this post

Recent News

ಗಾಲ್ಫ್ ಆಟಕ್ಕೆ ನೂತನ ಅಲೈನ್‌ಮೆಂಟ್ ಸಾಧನಗಳ ಪರಿಚಯ ಮಾಡಿದ ಮಂಗಳೂರು ಮೂಲದ ಡಾ. ದಿನಕರ್ ರೈ

ಗಾಲ್ಫ್ ಆಟಕ್ಕೆ ನೂತನ ಅಲೈನ್‌ಮೆಂಟ್ ಸಾಧನಗಳ ಪರಿಚಯ ಮಾಡಿದ ಮಂಗಳೂರು ಮೂಲದ ಡಾ. ದಿನಕರ್ ರೈ

August 10, 2026
7
ಕಾಂಗ್ರೆಸ್‌ ಮುಖಂಡ, ಡೇವಿಡ್ ಡಿಸೋಜಾ ಹತ್ಯೆ;‌ ಹಂತಕನ ಕಾಲಿಗೆ ಗುಂಡೇಟು, ಸುಪಾರಿ ಕೊಟ್ಟವರು ಯಾರು?

ಕಾಂಗ್ರೆಸ್‌ ಮುಖಂಡ, ಡೇವಿಡ್ ಡಿಸೋಜಾ ಹತ್ಯೆ;‌ ಹಂತಕನ ಕಾಲಿಗೆ ಗುಂಡೇಟು, ಸುಪಾರಿ ಕೊಟ್ಟವರು ಯಾರು?

August 8, 2026
72
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಗಾಲ್ಫ್ ಆಟಕ್ಕೆ ನೂತನ ಅಲೈನ್‌ಮೆಂಟ್ ಸಾಧನಗಳ ಪರಿಚಯ ಮಾಡಿದ ಮಂಗಳೂರು ಮೂಲದ ಡಾ. ದಿನಕರ್ ರೈ

ಗಾಲ್ಫ್ ಆಟಕ್ಕೆ ನೂತನ ಅಲೈನ್‌ಮೆಂಟ್ ಸಾಧನಗಳ ಪರಿಚಯ ಮಾಡಿದ ಮಂಗಳೂರು ಮೂಲದ ಡಾ. ದಿನಕರ್ ರೈ

August 10, 2026
ಕಾಂಗ್ರೆಸ್‌ ಮುಖಂಡ, ಡೇವಿಡ್ ಡಿಸೋಜಾ ಹತ್ಯೆ;‌ ಹಂತಕನ ಕಾಲಿಗೆ ಗುಂಡೇಟು, ಸುಪಾರಿ ಕೊಟ್ಟವರು ಯಾರು?

ಕಾಂಗ್ರೆಸ್‌ ಮುಖಂಡ, ಡೇವಿಡ್ ಡಿಸೋಜಾ ಹತ್ಯೆ;‌ ಹಂತಕನ ಕಾಲಿಗೆ ಗುಂಡೇಟು, ಸುಪಾರಿ ಕೊಟ್ಟವರು ಯಾರು?

August 8, 2026
ಕಾರ್ಕಳ ಹೆಬ್ರಿ ಸಮೀಪ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಸಾವು

ಕಾರ್ಕಳ ಹೆಬ್ರಿ ಸಮೀಪ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಸಾವು

August 8, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d