ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೀಡಾಗಿ ಸಿಐಡಿ ವಶದಲ್ಲಿರುವ JDS MLC ಡಾ. ಸೂರಜ್ ರೇವಣ್ಣ ಅಮಾವಾಸ್ಯೆಯಂದು ಬಳೆ ತೊಟ್ಟು, ಸೀರೆ ಉಡುತ್ತಿದ್ದರು ಎಂದು ಪ್ರಕರಣದ ಸಂತ್ರಸ್ಥ ಹೇಳಿಕೆ ನೀಡಿದ್ದಾರೆ. ಸೂರಜ್ ರೇವಣ್ಣರನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಸಿಐಡಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಪ್ರಕರಣದ ದೂರುದಾರ ಜೆಡಿಎಸ್ ಕಾರ್ಯಕರ್ತನಾಗಿರುವ ಸಂತ್ರಸ್ತ ಸೂರಜ್ ಬಳೆ ತೊಟ್ಟು, ಸೀರೆ ಉಡುವ ಅಚ್ಚರಿಯ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಕಳೆದ 2019ರ ಚುನಾವಣೆ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದ ವೇಳೆ ಅರಕಲಗೂಡಿನಲ್ಲಿ ಜೆಡಿಎಸ್ ಕಾರ್ಯಕ್ರಮವನ್ನು ಹೆಚ್ಚಿನ ಜನ ಸೇರಿಸಿ ಮಾಡಿದ್ದಕ್ಕೆ ನನ್ನನ್ನು ಹೊಗಳಿ ನನ್ನ ಫೋನ್ ನಂಬರ್ ತೆಗೆದುಕೊಂಡರು. ನಂತರ ಅವರ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದು, ಬಳಿಕ ನನ್ನ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು, ಗುಡ್ ಇವನಿಂಗ್ ಮೆಸೇಜ್ ಜತೆ ಲವ್ ಸಿಂಬಲ್ ಕಳಿಸಿ ಮಾತು ಬೆಳೆಸುತ್ತಿದ್ದರು. ಬಳಿಕ ಫಾರ್ಮ್‌ಹೌಸ್‌ಗೆ ಒಂಟಿಯಾಗಿ ಕರೆಸಿಕೊಂಡು ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಸಂತ್ರಸ್ತ ಜೆಡಿಎಸ್ ಕಾರ್ಯಕರ್ತ ಹೇಳಿದ್ದಾರೆ.
ಸೂರಜ್ ರೇವಣ್ಣಗೆ ಎರಡು ವ್ಯಕ್ತಿತ್ವವಿದ್ದು, ಹೊರಗೆ ಒಂದು ಮುಖ, ಒಳಗೆ ಒಂದು ಮುಖ ಇದೆ. ಸಾರ್ವಜನಿಕ ಜೀವನದಲ್ಲಿರುವುದಕ್ಕೆ ವಿರುದ್ಧವಾಗಿ ಒಳಗಡೆ ಇರುತ್ತಾರೆ. ಸೂರಜ್ ರೇವಣ್ಣ ಕಾಮುಕ, ಹೊರಗೊಂದು ಮುಖ, ಒಳಗೆ ಇನ್ನೊಂದು ಮುಖ. ನಾಲ್ಕು ವರ್ಷದಿಂದ ಎಲ್ಲೂ ಹೇಳಿಕೊಳ್ಳಲು ನನಗೆ ಆಗಿರಲಿಲ್ಲ, ಮನಸ್ಸಿನಲ್ಲಿ ಕಾಡುತ್ತಿತ್ತು. ಒಂದು ದಿನ ನನ್ನ ಜೊತೆಗೆ ಸೂರಜ್ ರೇವಣ್ಣ ಮಾತಾಡುತ್ತಾ ನನ್ನ ಜೀವನ ಹೇಗೆ ಏನು ಎಂದೆಲ್ಲಾ ಕೇಳಿದರು, ನಾನು ನನ್ನ ಕೆಲಸ, ಕುಟುಂಬದ ಬಗ್ಗೆ ಹೇಳಿದೆ. ಯಾವುದಕ್ಕೂ ಯೋಚನೆ ಮಾಡಬೇಡ ನಾನು ಇದ್ದೇನೆ ಎಂದು ಹೇಳಿ ರೂಮ್ ಒಳಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಕಾಲು ಒತ್ತುವಂತೆ ಹೇಳಿದರು. ನಾನು ಕಾಲು ಒತ್ತಿದೆ.. ಮುಂದೆ ಏನಾಯ್ತು ಅಂತ ನಾನು ಹೇಳಲು ಸಾಧ್ಯವಿಲ್ಲ ಎಂದು ಸಂತ್ರಸ್ತ ಯುವಕ ವಿವರಿಸಿದ್ದಾನೆ.
ಪೊಲೀಸ್ ವಿಚಾರಣೆ ವೇಳೆ ಹಾಗೂ ದೂರು ಪ್ರತಿಯಲ್ಲಿ ಘಟನೆಯನ್ನು 27 ವರ್ಷದ ಸಂತ್ರಸ್ತ ಸೂರಜ್ ಅಸಹಜ ವರ್ತನೆಯನ್ನು ವಿವರಿಸಿದ್ದಾರೆ. ಕಳೆದ ಜೂನ್ 16ರಂದು ಗನ್ನಿಕಡದ ಫಾರ್ಮ್‌ಹೌಸ್‌ಗೆ ಒಂಟಿಯಾಗಿ ಬರಲು ತಿಳಿಸಿ ಅದರಂತೆ ಸಂಜೆ 6.15ರ ಸುಮಾರಿಗೆ ಫಾರ್ಮ್ ಹೌಸ್‌ಗೆ ತೆರಳಿದ್ದ ವೇಳೆ ತನ್ನ ಬೆಡ್ ರೂಂಗೆ ಕರೆದೊಯ್ದ ಸೂರಜ್ ರೇವಣ್ಣ ಬೆದರಿಕೆ ಒಡ್ಡಿ ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬೇಡ ಎಂದು ಗೋಳಾಡಿದರೂ ಸೂರಜ್ ರೇವಣ್ಣ ಬಿಡದೆ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತ ದೂರಿನಲ್ಲಿ ಆರೋಪಿಸಿದ್ದಾರೆ. ಸೂರಜ್ ರೇವಣ್ಣ ನನ್ನ ಮೇಲೆ ಎಸಗಿದ ಕೃತ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಇದನ್ನು ವಿವರಿಸಿದ್ದಕ್ಕೆ ಈ ವಿಚಾರ ಎಲ್ಲಿಯೂ ಹೇಳದಂತೆ 2 ಕೋಟಿ ರೂ. ಹಾಗೂ ಕೆಲಸದ ಆಮಿಷ ಒಡ್ಡಿದ್ದರು. ಒಪ್ಪದಿದ್ದಕ್ಕೆ ಜೀವಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತ ದೂರಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post