ಬಾಲಿವುಡ್ ನಟಿ ಕಾಜೋಲ್ ಆಗಾಗ್ಗೆ ತಮ್ಮ ಹಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿರುತ್ತಾರೆ. ಇಂದು ಕೂಡ ತಮ್ಮ ಉದ್ದನೆಯ ಕರ್ಲಿ ಕೂದಲಿನ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಬ್ಲಾಕ್ ಅಂಡ್ ವೈಟ್ನ ಈ ಚಿತ್ರದಲ್ಲಿ, ನಟಿ ಕಪ್ಪು ಬಣ್ಣದ ಟಾಪ್ ಮತ್ತು ಕಪ್ಪು-ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕಾಜೋಲ್ ತಮ್ಮ ಮಗಳು ನೈಸಾ ದೇವ್‌ಗನ್ ಜೊತೆ ಸಿಂಗಾಪುರಕ್ಕೆ ತೆರಳಿದ್ದು, ಜುಲೈ 23 ರಂದು ಮುಂಬೈಗೆ ವಾಪಾಸ್ ಆಗಿದ್ದರು. ಕಾಜೋಲ್ ಹಂಚಿಕೊಂಡ ಚಿತ್ರದಲ್ಲಿ, ತನ್ನ ಕರ್ಲಿ ಕೂದಲನ್ನು ತೋರಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟಿಯ ಹಳೆ ಫೋಟೋ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.