ಪಾಲಕ್ಕಾಡ್ : ಕೇರಳದ ಮಾನ್ಸೂನ್ ಬಂಪರ್ ಲಾಟರಿ ಬಂಪರ್ ಈ ಬಾರಿ ಮಹಿಳಾ ಪೌರ ಕಾರ್ಮಿಕರಿಗೆ ಸಿಕ್ಕಿದೆ. ಪ್ರತಿದಿನ ಮನೆ ಮನೆಗೆ ತಿರುಗಿ ಕಸ ಸಂಗ್ರಹಿಸು ಮಹಿಳಾ ತಂಡ ಇದೀಗ 10 ಕೋಟಿ ರೂಪಾಯಿ ಲಾಟರಿ ಗೆಲ್ಲುವ ಮೂಲಕ ಕೋಟ್ಯಾಧೀಶರಾಗಿದ್ದಾರೆ.
ಪರಪ್ಪನಂಗಡಿ ನಗರಸಭೆಯ 11 ಹಸಿರು ಸೇನೆ ಕಾರ್ಯಕರ್ತರು ಒಟ್ಟಾಗಿ ಹಣ ಸಂಗ್ರಹಿಸಿದ ಮಾನ್ಸೂನ್ ಲಾಟರಿ ಬಂಪರ್ ಟಿಕೆಟ್ ಖರೀದಿಸಿದ್ದರು. ಇದೀಗ ಆ 11 ಮಂದಿ ಮಹಿಳಾ ತಂಡ ಖರೀದಿಸಿದ ಆ ಲಾಟರಿಗೆ ಈ ಬಾರಿ ಪ್ರಥಮ ಬಹುಮಾನ 10 ಕೋಟಿ ರೂಪಾಯಿ ಬಂಪರ್ ಸಿಕ್ಕಿದೆ. ಈ ಮೂಲಕ ಮಾನ್ಸೂನ್ ಪಂಪರ್ ಲಾಟರಿಯ ವಿಜೇತರು ಯಾರೆಂಬುದುದು ಬಯಲಾಗಿದೆ.
11 ಮಹಿಳಾ ತಂಡ ಒಟ್ಟು 250 ರೂಪಾಯಿಯನ್ನ ಒಟ್ಟುಗೂಡಿಸಿ ಪಾಲಕ್ಕಾಡ್ ಏಜೆನ್ಸಿಯಿಂದ MB 200261 ನಂಬರ್ನ ಲಾಟರಿ ಟಿಕೆಟ್ ಖರೀದಿಸಿತ್ತು. ಪರಪ್ಪನಂಗಡಿಗೆ ಬಂದಿದ್ದ ವ್ಯಕ್ತಿಯೊಬ್ಬರು ಈ ಲಾಟರಿ ಟಿಕೆಟ್ ಮಾರಾಟ ಮಾಡಿದ್ದರು. ಹರಿತ ಕರ್ಮ ಸೇನಾ ಮಹಿಳೆಯರು ನಿಂತಿದ್ದ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬ ಲಾಟರಿ ಟಿಕೆಟ್ ಬೇಕೇ ಎಂದು ಕೇಳಿದ್ದಾರೆ. ಆದರೆ ಅದರ ಬೆಲೆ 250 ರೂಪಾಯಿ ಎಂದು ಕೇಳಿ ಖರೀದಿಸಲು ಹಿಂಜರಿದಿದ್ದಾರೆ. ಆದರೆ ಅದೃಷ್ಟ ಪರೀಕ್ಷೆ ಮಾಡುವುದಕ್ಕೆ ಎಲ್ಲರೂ ತಲಾ 50 ರೂಪಾಯಿ ಸೇರಿಸಿ ಕೊಳ್ಳಲು ನಿರ್ಧಾರ ಮಾಡಿದ್ದಾರೆ. ಆದರೆ ಎಲ್ಲರೂ ತಮ್ಮ ಬ್ಯಾಗ್ ಚೆಕ್ ಮಾಡಿದಾಗ ಕೆಲವರ ಬಳಿ 50 ರೂ ಇಲ್ಲದಿರುವುದು ಕಂಡು, ಕೊನೆಗೆ ಹೆಚ್ಚು ಜನರು ಸೇರಿ 25 ರೂಪಾಯಿ ಶೇರ್ ಮಾಡಿಕೊಳ್ಳು ನಿರ್ಧರಿಸಿದ್ದಾರೆ.
ಮೊದಲು 9 ಮಂದಿ ಸೇರಿ ಲಾಟರಿ ಟಿಕೆಟ್ ಖರೀಸಲು ನೋಡಿದೆವು, ಆದರೆ ಹಣದ ಕೊರತೆಯಿಂದ ಮತ್ತಿಬ್ಬರು ಕಾರ್ಮಿಕರು ಸೇರಿಕೊಂಡರು. ಕೊನೆಗೆ 11 ಮಂದಿ ಸೇರಿದ 250 ರೂಪಾಯಿಯ ಟಿಕೆಟ್ ಖರೀದಿಸಿದೆವು ಎಂದು ಟಿಕೆಟ್ ಖರೀದಿಸಿದ ರಾಧ ತಿಳಿಸಿದ್ದಾರೆ. ಟಿಕೆಟ್ ಸಂಖ್ಯೆ MB 200261 ಮೊದಲ ಬಹುಮಾನ 10 ಕೋಟಿ ರೂ. ಬಹುಮಾನದ ಚೀಟಿಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಪರಪ್ಪನಂಗಡಿ ಶಾಖೆಗೆ ಹಸ್ತಾಂತರಿಸಲಾಗಿದೆ. ಪಾಲಕ್ಕಾಡ್‌ನಲ್ಲಿ ಏಜೆಂಟ್ ಕಾಜಾ ಹುಸೇನ್ ಮಾರಾಟ ಮಾಡಿದ ಟಿಕೆಟ್‌ಗೆ ಪ್ರಥಮ ಬಹುಮಾನ ಬಂದಿದೆ. ಈ ಬಾರಿ ಲಾಟರಿ ನಿರ್ದೇಶನಾಲಯದಿಂದ 27 ಲಕ್ಷ ಮಾನ್ಸೂನ್ ಬಂಪರ್ ಟಿಕೆಟ್ ಮುದ್ರಿಸಲಾಗಿದೆ.
ಇದೇ ವೇಳೆ ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಬಹುಮಾನವಾಗಿ ತಲಾ ಐವರಿಗೆ ಕ್ರಮವಾಗಿ 10 ಲಕ್ಷ, 5 ಲಕ್ಷ ಹಾಗೂ 3 ಲಕ್ಷ ರೂಪಾಯಿಗಳು ಸಿಗಲಿವೆ. ಸಮಾಧಾನಕರ ಬಹುಮಾನವಾಗಿ 4 ಜನರಿಗೆ ತಲಾ ಒಂದು ಲಕ್ಷ ಸಿಗಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post