• About us
  • Contact us
  • Disclaimer
Friday, March 13, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು| ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಉಪನ್ಯಾಸಕನಿಗೆ ಜೀವಾವಧಿ ಶಿಕ್ಷೆ

Coastal Times by Coastal Times
July 27, 2023
in ಕ್ರೈಮ್ ನ್ಯೂಸ್
ಮಂಗಳೂರು| ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಉಪನ್ಯಾಸಕನಿಗೆ ಜೀವಾವಧಿ ಶಿಕ್ಷೆ
142
VIEWS
WhatsappTelegramShare on FacebookShare on Twitter

ಮಂಗಳೂರು, ಜು 27 : ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಅನೈಸರ್ಗಿಕ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ ಅಪರಾಧಿ ಉಪನ್ಯಾಸಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ ಟಿಎಸ್‌ಸಿ-1) ಜೀವಾವಧಿ ಶಿಕ್ಷೆ ವಿಧಿಸಿದೆ.

ಕುಳಾಯಿಯ ಪೃಥ್ವಿರಾಜ್ (33) ಶಿಕ್ಷೆಗೊಳಗಾದವನು. ಈತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೋರ್ವನಿಗೆ 2014ರ ಆ.1ರಿಂದ 2016ರ ಸೆ.2ರವರೆಗೆ ಅನೈಸರ್ಗಿಕ ರೀತಿಯ ಲೈಂಗಿಕ ಕ್ರಿಯೆ ಮೂಲಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೃಥ್ವಿರಾಜ್ ವಿದ್ಯಾರ್ಥಿಯನ್ನು ತನ್ನ ಮನೆಗೆ ಕರೆಯಿಸಿ ನಿರಂತರವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಯಾರಿಗಾದರೂ ಹೇಳಿದರೆ ಬಿಡುವುದಿಲ್ಲ, ಪರೀಕ್ಷೆಯಲ್ಲಿ ಅಂಕ ಕಡಿತ ಮಾಡುತ್ತೇನೆ. ಹಾಜರಾತಿ ಕಡಿತ ಮಾಡುತ್ತೇನೆ ಎಂದು ಹೆದರಿಸಿದ್ದ. ಬಾಲಕನ ಜನನಾಂಗದಲ್ಲಿ ಹುಣ್ಣಾಗಿ ಗಾಯವಾಗಿ ವೈದ್ಯರಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ಪಡೆಯುವ ವೇಳೆ ಬಾಲಕ ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಮನೆಯವರು ಮತ್ತು ವೈದ್ಯರಿಗೆ ತಿಳಿಸಿದ್ದ.

ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು, ಆರೋಪಿಯ ಅಪರಾಧ ದೃಢಪಟ್ಟಿರುವುದರಿಂದ ಆರೋಪಿ ತಪ್ಪಿತಸ್ಥನೆಂದು ತೀರ್ಪು ನೀಡಿ ಬುಧವಾರದಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಆರೋಪಿಗೆ ಪೊಕ್ಸೋ ಕಾಯಿದೆ ಸೆಕ್ಷನ್ 6ರಡಿ ಜೀವಾವಧಿ ಶಿಕ್ಷೆ ಮತ್ತು 25,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಕಠಿಣ ಸಜೆ, ಪೋಕ್ಸೋ ಸೆಕ್ಷನ್ 10ರಂತೆ 5 ವರ್ಷ ಸಾದಾ ಸಜೆ, 5,000 ರೂ. ದಂಡ ಮತ್ತು ದಂಡ ಪಾವತಿಸಲು ತಪ್ಪಿದರೆ 3 ತಿಂಗಳ ಸಾದಾ ಸಜೆ, ಐಪಿಸಿ ಸೆಕ್ಷನ್ 377ರಡಿ 10 ವರ್ಷ ಕಠಿಣ ಸಜೆ, 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಕಠಿಣ ಸಜೆ, ಐಪಿಸಿ 506ರಡಿ 1 ವರ್ಷ ಸಾದಾ ಸಜೆ, 1,000 ರೂ. ದಂಡ, ದಂಡ ಪಾವತಿಸದಿದ್ದರೆ ಹೆಚ್ಚುವರಿ 1 ತಿಂಗಳು ಹೆಚ್ಚುವರಿ ಸಾದಾ ಸಜೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತ ಬಾಲಕನಿಗೆ ರಾಜ್ಯ ಸರ್ಕಾರ 1 ಲ.ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ವಾದಿಸಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಸೆನೆಗಲ್‌ನಿಂದ ಹಸ್ತಾಂತರಿಸಲ್ಪಟ್ಟ ಪ್ರಕರಣಗಳ ಶೀಘ್ರ ವಿಚಾರಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಗ್ಯಾಂಗ್‌ಸ್ಟರ್ ರವಿ ಪೂಜಾರಿ!

Next Post

ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇರಲಿಲ್ಲ ! ವಾಟ್ಸಪ್ ಮೆಸೇಜ್‌‌ಗಳಿಗೆ ಗಮನ ಕೊಡಬೇಡಿ’ – ಖುಷ್ಬೂ ಸುಂದರ್

Related Posts

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ
ಕ್ರೈಮ್ ನ್ಯೂಸ್

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

March 13, 2026
134
ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 4 ಮಂದಿ ಆರೋಪಿಯ ಬಂಧನ
ಕ್ರೈಮ್ ನ್ಯೂಸ್

ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 4 ಮಂದಿ ಆರೋಪಿಯ ಬಂಧನ

March 12, 2026
31
Next Post
ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇರಲಿಲ್ಲ ! ವಾಟ್ಸಪ್ ಮೆಸೇಜ್‌‌ಗಳಿಗೆ ಗಮನ ಕೊಡಬೇಡಿ’ – ಖುಷ್ಬೂ ಸುಂದರ್

ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇರಲಿಲ್ಲ ! ವಾಟ್ಸಪ್ ಮೆಸೇಜ್‌‌ಗಳಿಗೆ ಗಮನ ಕೊಡಬೇಡಿ' - ಖುಷ್ಬೂ ಸುಂದರ್

Discussion about this post

Recent News

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

March 13, 2026
134
ಊಟಕ್ಕೆ ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ

ಊಟಕ್ಕೆ ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ

March 12, 2026
71
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

March 13, 2026
ಊಟಕ್ಕೆ ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ

ಊಟಕ್ಕೆ ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ

March 12, 2026
ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 4 ಮಂದಿ ಆರೋಪಿಯ ಬಂಧನ

ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 4 ಮಂದಿ ಆರೋಪಿಯ ಬಂಧನ

March 12, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d