ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ಪ್ರದೇಶದ ಡಲ್ಲಾಸ್‌ನಲ್ಲಿ ಭಾರತೀಯ ಮೂಲದ ನಾಲ್ವರಿಗೆ ಹಲ್ಲೆ ನಡೆಸಿ, ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ಮೂಲದ ಅಮೆರಿಕನ್ ಮಹಿಳೆಯರ ಗುಂಪೊಂದರ ವಿರುದ್ಧ ಮೆಕ್ಸಿಕನ್ ಮೂಲದ ಅಮೆರಿಕನ್ ಮಹಿಳೆಯೊಬ್ಬಳು ಜನಾಂಗೀಯ ನಿಂದನೆಯಲ್ಲಿ (racial abuse) ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳ್ಲಿ ವೈರಲ್ ಆಗಿದೆ. ಈ ಮಹಿಳೆ ಭಾರತೀಯ ಮಹಿಳೆಯರನ್ನು ಎಫ್… ಪದ ಬಳಸಿ ನಿಂದಿಸುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ‘ಈ ದರಿದ್ರ ಭಾರತೀಯರನ್ನು ನಾನು ದ್ವೇಷಿಸುತ್ತೇನೆ (I hate f… Indians)’ ಅಂತ ಅವಳು ಹೇಳಿರುವುದನ್ನು ಕೇಳಿದ ಭಾರತೀಯರು ಆಘಾತಕ್ಕೊಳಗಾಗಿದ್ದಾರೆ. ಸದರಿ ಘಟನೆಯು ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿರುವ ಸಿಕ್ಸ್ಟಿ ವೈನ್ಸ್ ರೆಸ್ಟುರಾಂಟ್ ನ ಪಾರ್ಕಿಂಗ್ ಲಾಟ್ ನಲ್ಲಿ ನಡೆದಿದೆ. ಅಮೆರಿಕದಲ್ಲಿ ಹುಟ್ಟಿರುವಳೆಂದು ಹೇಳಲಾಗಿರುವ ಮೆಕ್ಸಿಕನ್ ಮಹಿಳೆಯು ಭಾರತೀಯ ಮೂಲದ ಮಹಿಳೆಯರನ್ನು ಉದ್ದೇಶಿಸಿ, ‘ಭಾರತಕ್ಕೆ ವಾಪಸ್ಸು ಹೋಗಿ!’ ಅಂತ ಅರಚುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.
Mexican-American female arrested after racist attack on four Indian women
Authorities said the woman, identified as Esmeralda Upton, is also being investigated for hate crime, and additional charges may be forthcoming.
Read: https://t.co/FTD4FTYYUt pic.twitter.com/VzYYKN1TZA
— The Times Of India (@timesofindia) August 26, 2022
ಮಹಿಳೆಯರ ನಡುವೆ ವಾಗ್ವಾದ ಶುರುವಾದ ಸ್ವಲ್ಪ ಹೊತ್ತಿಗೆ ವಿಡಿಯೋ ಆರಂಭವಾಗುತ್ತದೆ. ‘ಭಾರತೀಯ ಮಹಿಳೆಯರೆಲ್ಲ ಒಂದು ಉತ್ತಮ ಬದುಕನ್ನು ಅರಸಿಕೊಂಡು ಅಮೆರಿಕ ಬರುತ್ತಾರೆ. ನಮ್ಮ ದೇಶಕ್ಕೆ ಬಂದ ನಂತರ ನಿಮಗೆ ಎಲ್ಲವೂ ಪುಕ್ಕಟೆಯಾಗಿ ಬೇಕು. ನಾನು ಮೆಕ್ಸಿಕನ್-ಅಮೆರಿಕನ್ ಆಗಿದ್ದು ಇಲ್ಲೇ ಹುಟ್ಟಿದ್ದೇನೆ,’ ಎಂದು ನಾಲ್ಕು ಸದಸ್ಯರ ಬಾರತೀಯ-ಅಮೆರಿಕನ್ ಮಹಿಳೆಯರ ಗುಂಪನ್ನು ಬಯ್ಯುತ್ತಾ, ನಿಂದಿಸುತ್ತಾ ಅವಳು ಹೇಳುತ್ತಾಳೆ. ಅಕೆಯನ್ನು ಎಸ್ಮೆರಾಲ್ಡಾ ಉಪ್ಟನ್ ಎಂದು ಗುರುತಿಸಲಾಗಿದ್ದು ಪ್ಲಾನೋದಲ್ಲಿ ವಾಸವಾಗಿದ್ದಾಳೆ. ಭಾರತೀಯ ಮೂಲದ ಮಹಿಳೆಯರು ಉಪ್ಟನ್ ಮಾಡಿದ ನಿಂದನೆ ಬಗ್ಗೆ ಪ್ಲಾನೋ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ ಬಳಿಕ ಪೊಲೀಸ್ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆ. ‘ಉಪ್ಪನ್ ಳನ್ನು ದೈಹಿಕವಾಗಿ ಘಾಸಿಗೊಳಿಸಿದ ಮತ್ತು ಭಯೋತ್ಪಾದನೆ ಬೆದರಿಕೆಗಳ ಆರೋಪಗಳ ಆಧಾರದಲ್ಲಿ ಬಂಧಿಸಲಾಗಿದೆ,’ ಎಂದು ಪೊಲೀಸರು ಹೇಳಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಉಪ್ಟನ್ ಳನ್ನು ಸುಮಾರು 8 ಲಕ್ಷ ರೂ. ಗಳ ಬಾಂಡ್ ಮೇಲೆ ಬಂಧಿಸಲಾಗಿದೆ.
ASSAULT ARREST
On Thursday, August 25, 2022, at approximately 3:50 p.m., Plano Police Detectives arrested Esmeralda Upton of Plano on one charge of Assault Bodily Injury and one for Terroristic Threats and is being held on a total bond amount of $10,000. A jail photo is attached. pic.twitter.com/cEj9RwWdt1— Plano Police (Texas) (@PlanoPoliceDept) August 25, 2022
ಭಾರತೀಯರನ್ನು ನಾನು ದ್ವೇಷಿಸುತ್ತೇನೆ. ನೀವೆಲ್ಲಾ ಉತ್ತಮ ಜೀವನ ನಡೆಸುವ ಸಲುವಾಗಿ ಅಮೆರಿಕಾಗೆ ಬರುತ್ತಿದ್ದೀರಿ ಎಂದು ಮಾತು ಆರಂಭಿಸಿದ ಬಳಿಕ ಮಹಿಳೆ, ನಿಂದಿಸಿ, ವಾಪಸ್ ಹೋಗಿ ಎಂದು ಒತ್ತಾಯಿಸಿದ್ದಾರೆ. ಜತೆಗೆ ಮಹಿಳೆಯ ಬಳಿ ಗನ್ ಕೂಡ ಇತ್ತು. ಅವರು ಭಾರತೀಯರಿಗೆ ಗುಂಡು ಹಾರಿಸುವ ಉದ್ದೇಶ ಹೊಂದಿರಬಹುದು ಎಂದು ರೀಮಾ ರಸೂಲ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post