• About us
  • Contact us
  • Disclaimer
Saturday, September 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಭಾರತೀಯ ಮೂಲದ ಮಹಿಳೆಯ ಮೇಲೆ ಅಮೆರಿಕದಲ್ಲಿ ಹಲ್ಲೆ ನಡೆಸಿದ ವಿಡಿಯೋ ವೈರಲ್ : ಮಹಿಳೆಯ ಬಂಧನ

Coastal Times by Coastal Times
August 27, 2022
in ವಿದೇಶಿ ಸುದ್ದಿ
ಭಾರತೀಯ ಮೂಲದ ಮಹಿಳೆಯ ಮೇಲೆ ಅಮೆರಿಕದಲ್ಲಿ ಹಲ್ಲೆ ನಡೆಸಿದ ವಿಡಿಯೋ ವೈರಲ್ : ಮಹಿಳೆಯ ಬಂಧನ
113
VIEWS
WhatsappTelegramShare on FacebookShare on Twitter

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ ಪ್ರದೇಶದ ಡಲ್ಲಾಸ್‌ನಲ್ಲಿ ಭಾರತೀಯ ಮೂಲದ ನಾಲ್ವರಿಗೆ ಹಲ್ಲೆ ನಡೆಸಿ, ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ಮೂಲದ ಅಮೆರಿಕನ್ ಮಹಿಳೆಯರ ಗುಂಪೊಂದರ ವಿರುದ್ಧ ಮೆಕ್ಸಿಕನ್ ಮೂಲದ ಅಮೆರಿಕನ್ ಮಹಿಳೆಯೊಬ್ಬಳು ಜನಾಂಗೀಯ ನಿಂದನೆಯಲ್ಲಿ (racial abuse) ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳ್ಲಿ ವೈರಲ್ ಆಗಿದೆ. ಈ ಮಹಿಳೆ ಭಾರತೀಯ ಮಹಿಳೆಯರನ್ನು ಎಫ್… ಪದ ಬಳಸಿ ನಿಂದಿಸುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ‘ಈ ದರಿದ್ರ ಭಾರತೀಯರನ್ನು ನಾನು ದ್ವೇಷಿಸುತ್ತೇನೆ (I hate f… Indians)’ ಅಂತ ಅವಳು ಹೇಳಿರುವುದನ್ನು ಕೇಳಿದ ಭಾರತೀಯರು ಆಘಾತಕ್ಕೊಳಗಾಗಿದ್ದಾರೆ. ಸದರಿ ಘಟನೆಯು ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿರುವ ಸಿಕ್ಸ್ಟಿ ವೈನ್ಸ್ ರೆಸ್ಟುರಾಂಟ್ ನ ಪಾರ್ಕಿಂಗ್ ಲಾಟ್ ನಲ್ಲಿ ನಡೆದಿದೆ. ಅಮೆರಿಕದಲ್ಲಿ ಹುಟ್ಟಿರುವಳೆಂದು ಹೇಳಲಾಗಿರುವ ಮೆಕ್ಸಿಕನ್ ಮಹಿಳೆಯು ಭಾರತೀಯ ಮೂಲದ ಮಹಿಳೆಯರನ್ನು ಉದ್ದೇಶಿಸಿ, ‘ಭಾರತಕ್ಕೆ ವಾಪಸ್ಸು ಹೋಗಿ!’ ಅಂತ ಅರಚುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.

Mexican-American female arrested after racist attack on four Indian women

Authorities said the woman, identified as Esmeralda Upton, is also being investigated for hate crime, and additional charges may be forthcoming.

Read: https://t.co/FTD4FTYYUt pic.twitter.com/VzYYKN1TZA

— The Times Of India (@timesofindia) August 26, 2022

ಮಹಿಳೆಯರ ನಡುವೆ ವಾಗ್ವಾದ ಶುರುವಾದ ಸ್ವಲ್ಪ ಹೊತ್ತಿಗೆ ವಿಡಿಯೋ ಆರಂಭವಾಗುತ್ತದೆ. ‘ಭಾರತೀಯ ಮಹಿಳೆಯರೆಲ್ಲ ಒಂದು ಉತ್ತಮ ಬದುಕನ್ನು ಅರಸಿಕೊಂಡು ಅಮೆರಿಕ ಬರುತ್ತಾರೆ. ನಮ್ಮ ದೇಶಕ್ಕೆ ಬಂದ ನಂತರ ನಿಮಗೆ ಎಲ್ಲವೂ ಪುಕ್ಕಟೆಯಾಗಿ ಬೇಕು. ನಾನು ಮೆಕ್ಸಿಕನ್-ಅಮೆರಿಕನ್ ಆಗಿದ್ದು ಇಲ್ಲೇ ಹುಟ್ಟಿದ್ದೇನೆ,’ ಎಂದು ನಾಲ್ಕು ಸದಸ್ಯರ ಬಾರತೀಯ-ಅಮೆರಿಕನ್ ಮಹಿಳೆಯರ ಗುಂಪನ್ನು ಬಯ್ಯುತ್ತಾ, ನಿಂದಿಸುತ್ತಾ ಅವಳು ಹೇಳುತ್ತಾಳೆ. ಅಕೆಯನ್ನು ಎಸ್ಮೆರಾಲ್ಡಾ ಉಪ್ಟನ್ ಎಂದು ಗುರುತಿಸಲಾಗಿದ್ದು ಪ್ಲಾನೋದಲ್ಲಿ ವಾಸವಾಗಿದ್ದಾಳೆ. ಭಾರತೀಯ ಮೂಲದ ಮಹಿಳೆಯರು ಉಪ್ಟನ್ ಮಾಡಿದ ನಿಂದನೆ ಬಗ್ಗೆ ಪ್ಲಾನೋ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ ಬಳಿಕ ಪೊಲೀಸ್ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆ. ‘ಉಪ್ಪನ್ ಳನ್ನು ದೈಹಿಕವಾಗಿ ಘಾಸಿಗೊಳಿಸಿದ ಮತ್ತು ಭಯೋತ್ಪಾದನೆ ಬೆದರಿಕೆಗಳ ಆರೋಪಗಳ ಆಧಾರದಲ್ಲಿ ಬಂಧಿಸಲಾಗಿದೆ,’ ಎಂದು ಪೊಲೀಸರು ಹೇಳಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಉಪ್ಟನ್ ಳನ್ನು ಸುಮಾರು 8 ಲಕ್ಷ ರೂ. ಗಳ ಬಾಂಡ್ ಮೇಲೆ ಬಂಧಿಸಲಾಗಿದೆ.

ASSAULT ARREST
On Thursday, August 25, 2022, at approximately 3:50 p.m., Plano Police Detectives arrested Esmeralda Upton of Plano on one charge of Assault Bodily Injury and one for Terroristic Threats and is being held on a total bond amount of $10,000. A jail photo is attached. pic.twitter.com/cEj9RwWdt1

— Plano Police (Texas) (@PlanoPoliceDept) August 25, 2022

ಭಾರತೀಯರನ್ನು ನಾನು ದ್ವೇಷಿಸುತ್ತೇನೆ. ನೀವೆಲ್ಲಾ ಉತ್ತಮ ಜೀವನ ನಡೆಸುವ ಸಲುವಾಗಿ ಅಮೆರಿಕಾಗೆ ಬರುತ್ತಿದ್ದೀರಿ ಎಂದು ಮಾತು ಆರಂಭಿಸಿದ ಬಳಿಕ ಮಹಿಳೆ, ನಿಂದಿಸಿ, ವಾಪಸ್ ಹೋಗಿ ಎಂದು ಒತ್ತಾಯಿಸಿದ್ದಾರೆ. ಜತೆಗೆ ಮಹಿಳೆಯ ಬಳಿ ಗನ್ ಕೂಡ ಇತ್ತು. ಅವರು ಭಾರತೀಯರಿಗೆ ಗುಂಡು ಹಾರಿಸುವ ಉದ್ದೇಶ ಹೊಂದಿರಬಹುದು ಎಂದು ರೀಮಾ ರಸೂಲ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮೈಸೂರಿನ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯಿಂದ ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ಕಿರುಕುಳ: ದೂರು

Next Post

ಮೈಸೂರು: ಲೈಂಗಿಕ ಕಿರುಕುಳ ಆರೋಪ: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಎಫ್‌ಐಆರ್‌

Related Posts

ಗಾಲ್ಫ್ ಆಟಕ್ಕೆ ನೂತನ ಅಲೈನ್‌ಮೆಂಟ್ ಸಾಧನಗಳ ಪರಿಚಯ ಮಾಡಿದ ಮಂಗಳೂರು ಮೂಲದ ಡಾ. ದಿನಕರ್ ರೈ
ವಿದೇಶಿ ಸುದ್ದಿ

ಗಾಲ್ಫ್ ಆಟಕ್ಕೆ ನೂತನ ಅಲೈನ್‌ಮೆಂಟ್ ಸಾಧನಗಳ ಪರಿಚಯ ಮಾಡಿದ ಮಂಗಳೂರು ಮೂಲದ ಡಾ. ದಿನಕರ್ ರೈ

August 10, 2026
20
ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ
ವಿದೇಶಿ ಸುದ್ದಿ

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

July 15, 2026
19
Next Post
ಮೈಸೂರು: ಲೈಂಗಿಕ ಕಿರುಕುಳ ಆರೋಪ: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಎಫ್‌ಐಆರ್‌

ಮೈಸೂರು: ಲೈಂಗಿಕ ಕಿರುಕುಳ ಆರೋಪ: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಎಫ್‌ಐಆರ್‌

Discussion about this post

Recent News

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
40
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
58
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d