ಮಂಗಳೂರು: ಬರ್ಕೆ ಪೊಲೀಸ್ ಠಾಣೆ ಹಾಗೂ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕಳೆದ 5 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಂಗಳೂರಿನ ಅಬ್ಟಾಸ್ ಹಾಜಿ ಕಾಂಪೌಂಡ್ ನಿವಾಸಿ ಶೇಕ್ ಶಹಬಾಜ್ (31) ಮತ್ತು 1 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಕಸಬಾ ಬೆಂಗ್ರೆ ನಿವಾಸಿ ಮೊಹಮ್ಮದ್ ನಿಜಾಮುದ್ದೀನ್ ಅಲಿಯಾಸ್ ಬ್ರೋ ನಿಜಾಮ್ (30) ಬಂಧಿತ ಆರೋಪಿಗಳು.
ಶೇಕ್ ಶಹಬಾಜ್‌ನನ್ನು ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಇಂದುಪುರ ತಾಲೂಕಿನ 2 ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರುಗೂರು ಪ್ರದೇಶದಿಂದ ವಶಕ್ಕೆ ಪಡೆಯಲಾಗಿದೆ. ತಲೆ ಮರೆಸಿಕೊಂಡು ತಿರುಗುತ್ತಿದ್ದ ಆತನನ್ನು ಬರ್ಕೆ ಠಾಣೆಯ ವಾರಂಟ್ ಸಿಬಂದಿ ಚೇತನ್ ಬಿ.ಆರ್. ಹಾಗೂ ಮೋಹನ್ ಅವರು ಇಂದುಪುರ 2ಟೌನ್ ಠಾಣೆಯ ಸಿಐ ಅಬ್ದುಲ್ ಕರೀಂ ಹಾಗೂ ಕ್ರೈಂ ಸಿಬಂದಿಯ ಸಹಾಯದಿಂದ ಸೆ.24ರಂದು ರಾತ್ರಿ ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಬರ್ಕೆಯ ಠಾಣೆಯಲ್ಲಿ ಮತ್ತೂಂದು ಪ್ರಕರಣ ದಾಖಲಿಸಲಾಗಿದೆ.
ಈತನ ವಿರುದ್ಧ ಬರ್ಕೆ ಠಾಣೆಯಲ್ಲಿ 2 ಪ್ರಕರಣ, ಮಂಗಳೂರು ಉತ್ತರ ಠಾಣೆ, ಮಂಗಳೂರು ದಕ್ಷಿಣ ಠಾಣೆ, ಉತ್ತರ ಠಾಣೆ, ಕೊಣಾಜೆ ಠಾಣೆಗಳಲ್ಲಿ ಕರ್ನಾಟಕ ಪ್ರಿಸನರ್ ಆ್ಯಕ್ಟ್, ಪೋಕ್ಸೋ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ ಸಹಿತ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿತ್ತು.
ಮೊಹಮ್ಮದ್ ನಿಜಾಮುದ್ದೀನ್ ಅಲಿಯಾಸ್ ಬ್ರೋ ನಿಜಾಮ್‌ನನ್ನು ಮಂಗಳೂರು ಪೂರ್ವ ಪೊಲೀಸ್ ಠಾಣಾ ಎಎಸ್‌ಐ ಮಚ್ಚೀಂದ್ರನಾಥ ಜೋಗಿ, ಸಿಬಂದಿಯವರಾದ ಅಭಿಷೇಕ್, ವಿಠಲ್ ಗಡದಾರ್ ಅವರು ನಿರೀಕ್ಷಕ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಸೆ.25ರಂದು ಸಂಜೆ 5 ಗಂಟೆಗೆ ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಪೂರ್ವ ಠಾಣೆಯಲ್ಲಿ ಮತ್ತೂಂದು ಪ್ರಕರಣ ದಾಖಲಿಸಲಾಗಿದೆ. ಈತನ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ಠಾಣೆ, ಉಡುಪಿ ನಗರ ಪೊಲೀಸ್ ಠಾಣೆಗಳಲ್ಲಿಯೂ ವಾರಂಟ್ ಇದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ.
ಮಂಗಳೂರು ಪೂರ್ವ ಠಾಣೆ, ಪಣಂಬೂರು ಪೊಲೀಸ್ ಠಾಣೆ, ಉರ್ವ ಪೊಲೀಸ್‌ಠಾಣೆ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್, ಕೆಪಿ ಆ್ಯಕ್ಟ್ಗಳಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post