• About us
  • Contact us
  • Disclaimer
Saturday, May 30, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

Coastal Times by Coastal Times
September 27, 2025
in ಕ್ರೈಮ್ ನ್ಯೂಸ್
ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ
60
VIEWS
WhatsappTelegramShare on FacebookShare on Twitter

ಮಂಗಳೂರು: ಬರ್ಕೆ ಪೊಲೀಸ್‌ ಠಾಣೆ ಹಾಗೂ ಮಂಗಳೂರು ಪೂರ್ವ ಪೊಲೀಸ್‌ ಠಾಣೆಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಕಳೆದ 5 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಂಗಳೂರಿನ ಅಬ್ಟಾಸ್‌ ಹಾಜಿ ಕಾಂಪೌಂಡ್‌ ನಿವಾಸಿ ಶೇಕ್‌ ಶಹಬಾಜ್‌ (31) ಮತ್ತು 1 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಕಸಬಾ ಬೆಂಗ್ರೆ ನಿವಾಸಿ ಮೊಹಮ್ಮದ್‌ ನಿಜಾಮುದ್ದೀನ್‌ ಅಲಿಯಾಸ್‌ ಬ್ರೋ ನಿಜಾಮ್‌ (30) ಬಂಧಿತ ಆರೋಪಿಗಳು.

ಶೇಕ್‌ ಶಹಬಾಜ್‌ನನ್ನು ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಇಂದುಪುರ ತಾಲೂಕಿನ 2 ಟೌನ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಸುರುಗೂರು ಪ್ರದೇಶದಿಂದ ವಶಕ್ಕೆ ಪಡೆಯಲಾಗಿದೆ. ತಲೆ ಮರೆಸಿಕೊಂಡು ತಿರುಗುತ್ತಿದ್ದ ಆತನನ್ನು ಬರ್ಕೆ ಠಾಣೆಯ ವಾರಂಟ್‌ ಸಿಬಂದಿ ಚೇತನ್‌ ಬಿ.ಆರ್‌. ಹಾಗೂ ಮೋಹನ್‌ ಅವರು ಇಂದುಪುರ 2ಟೌನ್‌ ಠಾಣೆಯ ಸಿಐ ಅಬ್ದುಲ್‌ ಕರೀಂ ಹಾಗೂ ಕ್ರೈಂ ಸಿಬಂದಿಯ ಸಹಾಯದಿಂದ ಸೆ.24ರಂದು ರಾತ್ರಿ ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಬರ್ಕೆಯ ಠಾಣೆಯಲ್ಲಿ ಮತ್ತೂಂದು ಪ್ರಕರಣ ದಾಖಲಿಸಲಾಗಿದೆ.

ಈತನ ವಿರುದ್ಧ ಬರ್ಕೆ ಠಾಣೆಯಲ್ಲಿ 2 ಪ್ರಕರಣ, ಮಂಗಳೂರು ಉತ್ತರ ಠಾಣೆ, ಮಂಗಳೂರು ದಕ್ಷಿಣ ಠಾಣೆ, ಉತ್ತರ ಠಾಣೆ, ಕೊಣಾಜೆ ಠಾಣೆಗಳಲ್ಲಿ ಕರ್ನಾಟಕ ಪ್ರಿಸನರ್ ಆ್ಯಕ್ಟ್, ಪೋಕ್ಸೋ ಕಾಯ್ದೆ, ಎನ್‌ಡಿಪಿಎಸ್‌ ಕಾಯ್ದೆ ಸಹಿತ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿತ್ತು.

ಮೊಹಮ್ಮದ್‌ ನಿಜಾಮುದ್ದೀನ್‌ ಅಲಿಯಾಸ್‌ ಬ್ರೋ ನಿಜಾಮ್‌ನನ್ನು ಮಂಗಳೂರು ಪೂರ್ವ ಪೊಲೀಸ್‌ ಠಾಣಾ ಎಎಸ್‌ಐ ಮಚ್ಚೀಂದ್ರನಾಥ ಜೋಗಿ, ಸಿಬಂದಿಯವರಾದ ಅಭಿಷೇಕ್‌, ವಿಠಲ್‌ ಗಡದಾರ್‌ ಅವರು ನಿರೀಕ್ಷಕ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಸೆ.25ರಂದು ಸಂಜೆ 5 ಗಂಟೆಗೆ ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಪೂರ್ವ ಠಾಣೆಯಲ್ಲಿ ಮತ್ತೂಂದು ಪ್ರಕರಣ ದಾಖಲಿಸಲಾಗಿದೆ. ಈತನ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ಠಾಣೆ, ಉಡುಪಿ ನಗರ ಪೊಲೀಸ್‌ ಠಾಣೆಗಳಲ್ಲಿಯೂ ವಾರಂಟ್‌ ಇದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ.

ಮಂಗಳೂರು ಪೂರ್ವ ಠಾಣೆ, ಪಣಂಬೂರು ಪೊಲೀಸ್‌ ಠಾಣೆ, ಉರ್ವ ಪೊಲೀಸ್‌ಠಾಣೆ, ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಗಳಲ್ಲಿ  ಎನ್‌ಡಿಪಿಎಸ್‌, ಕೆಪಿ ಆ್ಯಕ್ಟ್ಗಳಲ್ಲಿ ಪ್ರಕರಣ ದಾಖಲಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಅಮೆರಿಕದಲ್ಲಿ ಮಕ್ಕಳಿಗೆ ಕಿರುಕುಳ ನೀಡಿದ್ದ ಕಿಡಿಗೇಡಿಯನ್ನು ಕೊಂದ ಭಾರತೀಯ

Next Post

ರಾಜ್ಯ ಸರ್ಕಾರ ನಿಗಮ ಮಂಡಳಿಗೆ ನೇಮಕ: ಮೆಸ್ಕಾಂ ಹರೀಶ್ ಕುಮಾರ್, ಕರಾವಳಿ ಪ್ರಾಧಿಕಾರಕ್ಕೆ ಗಫೂರ್, ಪ್ರವಾಸೋದ್ಯಮ ಶಾಲೆಟ್ ಪಿಂಟೋ

Related Posts

ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ
ಕ್ರೈಮ್ ನ್ಯೂಸ್

ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ

May 30, 2026
66
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ ಪರಾರಿಯಾಗಿದ್ದ ಆರೋಪಿಗಳ ಬಂಧನ
ಕ್ರೈಮ್ ನ್ಯೂಸ್

ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ ಪರಾರಿಯಾಗಿದ್ದ ಆರೋಪಿಗಳ ಬಂಧನ

May 27, 2026
88
Next Post
ರಾಜ್ಯ ಸರ್ಕಾರ ನಿಗಮ ಮಂಡಳಿಗೆ ನೇಮಕ: ಮೆಸ್ಕಾಂ ಹರೀಶ್ ಕುಮಾರ್, ಕರಾವಳಿ ಪ್ರಾಧಿಕಾರಕ್ಕೆ ಗಫೂರ್, ಪ್ರವಾಸೋದ್ಯಮ ಶಾಲೆಟ್ ಪಿಂಟೋ

ರಾಜ್ಯ ಸರ್ಕಾರ ನಿಗಮ ಮಂಡಳಿಗೆ ನೇಮಕ: ಮೆಸ್ಕಾಂ ಹರೀಶ್ ಕುಮಾರ್, ಕರಾವಳಿ ಪ್ರಾಧಿಕಾರಕ್ಕೆ ಗಫೂರ್, ಪ್ರವಾಸೋದ್ಯಮ ಶಾಲೆಟ್ ಪಿಂಟೋ

Discussion about this post

Recent News

ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ

ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ

May 30, 2026
66
2026ರ ಫಿಫಾ ವಿಶ್ವಕಪ್​ಗೆ 26 ಸದಸ್ಯರ ಅರ್ಜೆಂಟೀನಾ ತಂಡ ಪ್ರಕಟ ಲಿಯೋನೆಲ್​ ಮೆಸ್ಸಿಗೆ ನಾಯಕ ಪಟ್ಟ

2026ರ ಫಿಫಾ ವಿಶ್ವಕಪ್​ಗೆ 26 ಸದಸ್ಯರ ಅರ್ಜೆಂಟೀನಾ ತಂಡ ಪ್ರಕಟ ಲಿಯೋನೆಲ್​ ಮೆಸ್ಸಿಗೆ ನಾಯಕ ಪಟ್ಟ

May 29, 2026
29
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ

ವೆಬ್​ ಸೀರೀಸ್ ನೋಡಿ ಒಂದೇ ಕುಟುಂಬದ ನಾಲ್ವರನ್ನು ಕೊಂದ 17ರ ಬಾಲಕ, ಕೊನೆಗೂ ಸಿಕ್ಕಿ ಬಿದ್ದ

May 30, 2026
2026ರ ಫಿಫಾ ವಿಶ್ವಕಪ್​ಗೆ 26 ಸದಸ್ಯರ ಅರ್ಜೆಂಟೀನಾ ತಂಡ ಪ್ರಕಟ ಲಿಯೋನೆಲ್​ ಮೆಸ್ಸಿಗೆ ನಾಯಕ ಪಟ್ಟ

2026ರ ಫಿಫಾ ವಿಶ್ವಕಪ್​ಗೆ 26 ಸದಸ್ಯರ ಅರ್ಜೆಂಟೀನಾ ತಂಡ ಪ್ರಕಟ ಲಿಯೋನೆಲ್​ ಮೆಸ್ಸಿಗೆ ನಾಯಕ ಪಟ್ಟ

May 29, 2026
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ! ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ! ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ

May 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d