• About us
  • Contact us
  • Disclaimer
Friday, July 31, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪುತ್ತೂರು: ಬಿಜೆಪಿ ನಾಯಕನ ಪುತ್ರನಿಂದ ಅತ್ಯಾಚಾರ, ವಂಚನೆ ಪ್ರಕರಣ; ಶ್ರೀಕೃಷ್ಣ ರಾವ್ ಮಗುವಿನ ತಂದೆ ಎಂಬುದು ಡಿಎನ್ಎ ವರದಿ ಬಹಿರಂಗ

Coastal Times by Coastal Times
September 27, 2025
in ಕರಾವಳಿ
ಪುತ್ತೂರು: ಬಿಜೆಪಿ ನಾಯಕನ ಪುತ್ರನಿಂದ ಅತ್ಯಾಚಾರ, ವಂಚನೆ ಪ್ರಕರಣ; ಶ್ರೀಕೃಷ್ಣ ರಾವ್ ಮಗುವಿನ ತಂದೆ ಎಂಬುದು ಡಿಎನ್ಎ ವರದಿ ಬಹಿರಂಗ
72
VIEWS
WhatsappTelegramShare on FacebookShare on Twitter

ಪುತ್ತೂರು, ಸೆ.27 : ಪುತ್ತೂರಿನಲ್ಲಿ ಸಹಪಾಠಿ ವಿದ್ಯಾರ್ಥಿನಿಗೆ ಮಗು ಕರುಣಿಸಿದ ಪ್ರಕರಣದಲ್ಲಿ ಕಡೆಗೂ ಡಿಎನ್ಎ ವರದಿ ಬಂದಿದೆ. ಆರೋಪಿಯೆಂದು ಗುರುತಿಸಲ್ಪಟ್ಟ ಶ್ರೀಕೃಷ್ಣ ರಾವ್ ಮಗುವಿನ ತಂದೆ ಎಂಬುದು ಸಾಬೀತಾಗಿದ್ದು ಇದನ್ನು ಪುತ್ತೂರು ಠಾಣೆಯ ಪೊಲೀಸರು ಕೂಡ ತಿಳಿಸಿದ್ದಾರೆ ಎಂದು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದ್ದಾರೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್, ಎಲ್ಲ ಪಕ್ಷಗಳ ನಾಯಕರು, ಆರೆಸ್ಸೆಸ್ ನಾಯಕರನ್ನು ಭೇಟಿಯಾಗಿದ್ದೇನೆ. ನಾನಾ ರೀತಿಯ ಆರೋಪಗಳನ್ನು ಹೊರಿಸಿ ಬಡ ಕುಟುಂಬವನ್ನು ಒಂಟಿಯನ್ನಾಗಿ ಮಾಡಲಾಗಿತ್ತು. ಆದರೆ ಬಡ ಹುಡುಗಿಯ ಜೀವನ, ಮಗುವಿನ ಭವಿಷ್ಯದ ಬಗ್ಗೆ ಯಾರೂ ಚಿಂತೆ ಮಾಡಲಿಲ್ಲ. ಅದಕ್ಕಾಗಿ ಆ ಮಗುವಿನ ತಂದೆ ಯಾರೆಂದು ತಿಳಿಯಲು ಡಿಎನ್ಎ ಟೆಸ್ಟ್ ಮಾಡಲಾಯಿತು. ಈಗ ಪಾಸಿಟಿವ್ ವರದಿ ಬಂದಿದೆ.

ನಮಗೇನೂ ಆರೋಪಿ ವಿರುದ್ಧ ಕಾನೂನು ಹೋರಾಟ ನಡೆಸಬೇಕೆಂದು ಇಲ್ಲ. ಅವರಿಬ್ಬರು ಸಂತೋಷದಲ್ಲಿ ಜೀವನ ಮಾಡಲಿ ಎನ್ನುವುದಷ್ಟೆ ನಮ್ಮ ಬಯಕೆ. ಕಾನೂನು ಪ್ರಕಾರ ಯಾವುದೇ ಕಾರಣಕ್ಕು ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಸದ್ಯ ಪ್ರಕರಣ ಕೋರ್ಟಿನಲ್ಲಿದ್ದು ಒಳ್ಳೆಯ ರೀತಿಯಲ್ಲಿ ಮುಗಿಸಬೇಕಿದೆ. ಶ್ರೀಕೃಷ್ಣನ ತಂದೆ ಜಗನ್ನಿವಾಸ ರಾವ್ ಭೇಟಿಯಾಗಲು ಭಾರೀ ಪ್ರಯತ್ನ ಪಟ್ಟೆ. ಆದರೆ ಅವರು ಭೇಟಿಗೆ ಅವಕಾಶ ಕೊಟ್ಟಿಲ್ಲ.

ಪ್ರಕರಣದಲ್ಲಿ ಆಗಬಾರದ ಘಟನೆಯೇನೂ ಆಗಿದ್ದಲ್ಲ. ಸಹಜವಾಗಿ ಸಹಪಾಠಿಗಳಾಗಿದ್ದವರು ಪ್ರೀತಿಸಿ ಏನೋ ಆಸೆ ಆಕಾಂಕ್ಷೆಯಿಂದ ಮಾಡಿಕೊಂಡಿದ್ದಾರೆ. ಇದನ್ನು ಇಷ್ಟು ದೊಡ್ಡಕ್ಕೆ ಮಾಡುವ ಅಗತ್ಯವೇ ಇರಲಿಲ್ಲ. ಹಿಂದುತ್ವಕ್ಕೆ ಪುತ್ತೂರು ಶಕ್ತಿಕೇಂದ್ರ. ವಿಶ್ವಕರ್ಮ ಸಮಾಜವೂ ಹಿಂದುತ್ವದ ಪ್ರತೀಕ. ವಿಶ್ವಕರ್ಮ ಸಮಾಜವೇ ಹಿಂದುತ್ವದ ಸಾಂಸ್ಕೃತಿಕ ರೂಪ. ಇದಕ್ಕಾಗಿ ಹಿಂದುತ್ವದ ಸಂಘಟನೆಗಳಿಗೆ, ಪುತ್ತೂರಿನ ಶಾಸಕರಿಗೆ, ಎಲ್ಲ ನಾಯಕರಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಇದನ್ನು ಒಳ್ಳೆಯ ರೀತಿಯಲ್ಲಿ ಮುಕ್ತಾಯ ಮಾಡಲು ಸಹಕರಿಸಬೇಕು. ಈ ಬಗ್ಗೆ ವಿಶ್ವಕರ್ಮ ಸಮಾಜ ಹೋರಾಟ ಮಾಡುವುದು ಹಿಂದುತ್ವಕ್ಕೆ ಅವಮಾನ ಅಂದುಕೊಳ್ಳುತ್ತೇನೆ, ಹಾಗಂತ ನ್ಯಾಯ ದೊರಕದಿದ್ದರೆ ನಮ್ಮ ಸಮಾಜ ವಿರಮಿಸುವುದೂ ಇಲ್ಲ ಎಂದು ಕೆಪಿ ನಂಜುಂಡಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಂತ್ರಸ್ತೆ, ಆಕೆಯ ತಾಯಿ ನಮಿತಾ ಆಚಾರ್ಯ ಮತ್ತು ಸಂಘದ ಪ್ರಮುಖರು ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಉಡುಪಿ: ಎ.ಕೆ.ಎಂ.ಎಸ್ ಬಸ್ ಮಾಲೀಕನ ಮನೆಗೆ ನುಗ್ಗಿ ಬರ್ಬರ ಹತ್ಯೆ

Next Post

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ: 11 ಮಂದಿ ಕಾಲೇಜು ವಿದ್ಯಾರ್ಥಿಗಳ ಸೆರೆ

Related Posts

ಮಂಗಳೂರಿನಲ್ಲಿ ಕ್ರೂಸ್ ಸೇವೆ ಆರಂಭಿಸಲು ವಾಟರ್‌ವೇಸ್ ಲೀಜರ್ ಟೂರಿಸಂ ಲಿಮಿಟೆಡ್ ನಿಂದ ತಾತ್ವಿಕ ಒಪ್ಪಿಗೆ
ಕರಾವಳಿ

ಮಂಗಳೂರಿನಲ್ಲಿ ಕ್ರೂಸ್ ಸೇವೆ ಆರಂಭಿಸಲು ವಾಟರ್‌ವೇಸ್ ಲೀಜರ್ ಟೂರಿಸಂ ಲಿಮಿಟೆಡ್ ನಿಂದ ತಾತ್ವಿಕ ಒಪ್ಪಿಗೆ

July 31, 2026
15
16ನೇ ಆವೃತ್ತಿಯ ಆಳ್ವಾಸ್ ಪ್ರಗತಿ–2026 ದೇಶದ ಅತಿದೊಡ್ಡ ಉದ್ಯೋಗ ಮೇಳ ಆಗಸ್ಟ್ 7 ಮತ್ತು 8, 2026
ಕರಾವಳಿ

16ನೇ ಆವೃತ್ತಿಯ ಆಳ್ವಾಸ್ ಪ್ರಗತಿ–2026 ದೇಶದ ಅತಿದೊಡ್ಡ ಉದ್ಯೋಗ ಮೇಳ ಆಗಸ್ಟ್ 7 ಮತ್ತು 8, 2026

July 31, 2026
7
Next Post
ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ: 11 ಮಂದಿ ಕಾಲೇಜು ವಿದ್ಯಾರ್ಥಿಗಳ ಸೆರೆ

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ: 11 ಮಂದಿ ಕಾಲೇಜು ವಿದ್ಯಾರ್ಥಿಗಳ ಸೆರೆ

Discussion about this post

Recent News

ಮಂಗಳೂರಿನಲ್ಲಿ ಕ್ರೂಸ್ ಸೇವೆ ಆರಂಭಿಸಲು ವಾಟರ್‌ವೇಸ್ ಲೀಜರ್ ಟೂರಿಸಂ ಲಿಮಿಟೆಡ್ ನಿಂದ ತಾತ್ವಿಕ ಒಪ್ಪಿಗೆ

ಮಂಗಳೂರಿನಲ್ಲಿ ಕ್ರೂಸ್ ಸೇವೆ ಆರಂಭಿಸಲು ವಾಟರ್‌ವೇಸ್ ಲೀಜರ್ ಟೂರಿಸಂ ಲಿಮಿಟೆಡ್ ನಿಂದ ತಾತ್ವಿಕ ಒಪ್ಪಿಗೆ

July 31, 2026
15
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ

July 31, 2026
86
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರಿನಲ್ಲಿ ಕ್ರೂಸ್ ಸೇವೆ ಆರಂಭಿಸಲು ವಾಟರ್‌ವೇಸ್ ಲೀಜರ್ ಟೂರಿಸಂ ಲಿಮಿಟೆಡ್ ನಿಂದ ತಾತ್ವಿಕ ಒಪ್ಪಿಗೆ

ಮಂಗಳೂರಿನಲ್ಲಿ ಕ್ರೂಸ್ ಸೇವೆ ಆರಂಭಿಸಲು ವಾಟರ್‌ವೇಸ್ ಲೀಜರ್ ಟೂರಿಸಂ ಲಿಮಿಟೆಡ್ ನಿಂದ ತಾತ್ವಿಕ ಒಪ್ಪಿಗೆ

July 31, 2026
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ

July 31, 2026
ಆಕಾಶಭವನದಲ್ಲಿ ಮದರಂಗಿ ಶಾಸ್ತ್ರದ ಸಂದರ್ಭದಲ್ಲಿ ತಲವಾರಿನಿಂದ ಹಲ್ಲೆ; 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಆರೋಪಿಯ ಬಂಧನ

ಆಕಾಶಭವನದಲ್ಲಿ ಮದರಂಗಿ ಶಾಸ್ತ್ರದ ಸಂದರ್ಭದಲ್ಲಿ ತಲವಾರಿನಿಂದ ಹಲ್ಲೆ; 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಆರೋಪಿಯ ಬಂಧನ

July 31, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d