ಮಂಗಳೂರು, ನ.26: ಕಷ್ಟದಲ್ಲಿರುವವರ ಬಳಿಗೆ ತೆರಳಿ ನೆರವು ನೀಡುವ ಸಂಸ್ಕೃತಿ ದ.ಕ. ಜಿಲ್ಲೆಯಲ್ಲಿದೆ ಎಂದು ಜೆಪ್ಪ ಸೆಮಿನರಿಯ ಆಡಳಿತಾಧಿಕಾರಿ ಮತ್ತು ಪ್ರೊಫೆಸರ್ ವಂ.ನವೀನ್ ಪಿಂಟೊ ತಿಳಿಸಿದ್ದಾರೆ.

ಎಂಸಿಸಿ ಬ್ಯಾಂಕ್‌ನ ಶತಮಾನೋತ್ತರ ದಶಮಾನೋತ್ಸವ ಸಮಾರಂಭದ ಅಂಗವಾಗಿ ಬ್ಯಾಂಕಿನ ಹಂಪನಕಟ್ಟೆಯ ಪ್ರಧಾನ ಕಚೇರಿಯ ಪಿ.ಎಫ್.ಎಕ್ಸ್ ಸಲ್ದಾ ಸ್ಮಾರಕ ಸಭಾಂಗಣದಲ್ಲಿ ಸಮಾಜದ ಅಶಕ್ತ ವರ್ಗ ದವರಿಗೆ ಸಹಾಯಹಸ್ತ ನೀಡುವ ದತ್ತಿನಿಧಿ ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಬೆಳೆಯುತ್ತಿರುವ ದ.ಕ. ಜಿಲ್ಲೆಯಲ್ಲಿ ಕಷ್ಟ ಕಾಲದಲ್ಲಿ ಜಾತಿ, ಧರ್ಮ ನೋಡದೆ ಸಹಾಯ ಮಾಡುವ ಮನೋ ಭಾವ ಇನ್ನಷ್ಟು ಮುಂದುವರಿಯಲಿ, ಸಹಾಯ ಪಡೆ ದವರು, ಭವಿಷ್ಯದಲ್ಲಿ ಇತರರಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು


ಸಮಾರಂಭದ ಮುಖ್ಯ ಅತಿಥಿ ಮನಪಾ ಮೇಯರ್ ಜಯಾನಂದ ಮಾತನಾಡಿ, ಸಮಾಜದಲ್ಲಿ ದುರ್ಬಲರಿಗೆ ನೆರವು ನೀಡುವ ಮಹತ್ವದ ಕಾರ್ಯದ ಮೂಲಕ ಎಂಸಿಸಿ ಬ್ಯಾಂಕ್ ದೇಶಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.


ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಎಂಸಿಸಿ ಬ್ಯಾಂಕ್ ನ 110 ವರ್ಷಾಚರಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಎಂಸಿಸಿ ಬ್ಯಾಂಕ್ ವತಿಯಿಂದ ನೆರವು ನೀಡುವ ಕಾರ್ಯಕ್ರಮದಲ್ಲಿ ಶಿಕ್ಷಣ, ವೈದ್ಯಕೀಯ, ವಿವಾಹ ವೆಚ್ಚ ಮನೆ ನಿರ್ಮಾಣಕ್ಕಾಗಿ 90 ಕುಟುಂಬಗಳ ಫಲಾನುಭವಿ ಗಳಿಗೆ 15 ಲಕ್ಷ ರೂ. ಆರ್ಥಿಕ ನೆರವನ್ನು ಸಮಾರಂಭದಲ್ಲಿ ವಿತರಿಸಲಾಯಿತು.





ಸಮಾರಂಭದಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರ ಡಿಸೋಜ, ಮಾರ್ಸೆಲ್ ಎಂ. ಡಿಸೋಜ, ಜೋಸೆಫ್ ಅನಿಲ್ ಪಾವೊ, ಹೆರಾಲ್ಡ್ ಮೊಂತೇರೊ, ಎಲ್.ರೋಯ್ ಕೆ. ಕ್ರಾಸ್ಟ್, ಜೆ.ಪಿ.ರೋಡ್ರಿಗಸ್, ಸಿ.ಜಿ.ಪಿಂಟೊ, ಸುಶಾಂತ್ ಸಲ್ದಾನ, ರೋಶನ್ ಡಿಸೋಜ, ಡಾ.ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೊ ಡಾ.ಫ್ರೀಡಾ ಡಿಸೋಜ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರೂಜ್, ಅಲ್ವಿನ್ ಪಿ. ಮೊಂತೇರೊ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕ್ ನ ನಿರ್ದೇಶಕ ಡೇವಿಡ್ ಡಿಸೋಜ ಸಹಾಯ ಧನ ವಿತರಣಾ ಕಾರ್ಯಕ್ರಮ ನಿರೂಪಿಸಿದರು. ಎಂಸಿಸಿ ಬ್ಯಾಂಕ್‌ನ ಮಹಾಪ್ರಬಂಧಕ ಸುನೀಲ್ ಮಿನೇಜಸ್ ವಂದಿಸಿದರು. ವಯೆಲ್ಲಾ ಬಜಪೆ ಸಭಾ ಕಾರ್ಯಕ್ರಮ ನಿರೂಪಿಸಿದರು.

Discover more from Coastal Times Kannada
Subscribe to get the latest posts sent to your email.







Discussion about this post