• About us
  • Contact us
  • Disclaimer
Saturday, November 7, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಎಂಸಿಸಿ ಬ್ಯಾಂಕ್ ವತಿಯಿಂದ 93 ಕುಟುಂಬಗಳಿಗೆ ದತ್ತಿನಿಧಿ ವಿತರಣೆ

Coastal Times by Coastal Times
November 27, 2022
in ಕರಾವಳಿ
ಎಂಸಿಸಿ ಬ್ಯಾಂಕ್ ವತಿಯಿಂದ 93 ಕುಟುಂಬಗಳಿಗೆ ದತ್ತಿನಿಧಿ ವಿತರಣೆ
45
VIEWS
WhatsappTelegramShare on FacebookShare on Twitter

ಮಂಗಳೂರು, ನ.26: ಕಷ್ಟದಲ್ಲಿರುವವರ ಬಳಿಗೆ ತೆರಳಿ ನೆರವು ನೀಡುವ ಸಂಸ್ಕೃತಿ ದ.ಕ. ಜಿಲ್ಲೆಯಲ್ಲಿದೆ ಎಂದು ಜೆಪ್ಪ ಸೆಮಿನರಿಯ ಆಡಳಿತಾಧಿಕಾರಿ ಮತ್ತು ಪ್ರೊಫೆಸರ್ ವಂ.ನವೀನ್ ಪಿಂಟೊ ತಿಳಿಸಿದ್ದಾರೆ.

ಎಂಸಿಸಿ ಬ್ಯಾಂಕ್‌ನ ಶತಮಾನೋತ್ತರ ದಶಮಾನೋತ್ಸವ ಸಮಾರಂಭದ ಅಂಗವಾಗಿ ಬ್ಯಾಂಕಿನ ಹಂಪನಕಟ್ಟೆಯ ಪ್ರಧಾನ ಕಚೇರಿಯ ಪಿ.ಎಫ್.ಎಕ್ಸ್ ಸಲ್ದಾ ಸ್ಮಾರಕ ಸಭಾಂಗಣದಲ್ಲಿ ಸಮಾಜದ ಅಶಕ್ತ ವರ್ಗ ದವರಿಗೆ ಸಹಾಯಹಸ್ತ ನೀಡುವ ದತ್ತಿನಿಧಿ ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಬೆಳೆಯುತ್ತಿರುವ ದ.ಕ. ಜಿಲ್ಲೆಯಲ್ಲಿ ಕಷ್ಟ ಕಾಲದಲ್ಲಿ ಜಾತಿ, ಧರ್ಮ ನೋಡದೆ ಸಹಾಯ ಮಾಡುವ ಮನೋ ಭಾವ ಇನ್ನಷ್ಟು ಮುಂದುವರಿಯಲಿ, ಸಹಾಯ ಪಡೆ ದವರು, ಭವಿಷ್ಯದಲ್ಲಿ ಇತರರಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು

ಸಮಾರಂಭದ ಮುಖ್ಯ ಅತಿಥಿ ಮನಪಾ ಮೇಯರ್ ಜಯಾನಂದ ಮಾತನಾಡಿ, ಸಮಾಜದಲ್ಲಿ ದುರ್ಬಲರಿಗೆ ನೆರವು ನೀಡುವ ಮಹತ್ವದ ಕಾರ್ಯದ ಮೂಲಕ ಎಂಸಿಸಿ ಬ್ಯಾಂಕ್ ದೇಶಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್‌ ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಎಂಸಿಸಿ ಬ್ಯಾಂಕ್ ನ 110 ವರ್ಷಾಚರಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಎಂಸಿಸಿ ಬ್ಯಾಂಕ್‌ ವತಿಯಿಂದ ನೆರವು ನೀಡುವ ಕಾರ್ಯಕ್ರಮದಲ್ಲಿ ಶಿಕ್ಷಣ, ವೈದ್ಯಕೀಯ, ವಿವಾಹ ವೆಚ್ಚ ಮನೆ ನಿರ್ಮಾಣಕ್ಕಾಗಿ 90 ಕುಟುಂಬಗಳ ಫಲಾನುಭವಿ ಗಳಿಗೆ 15 ಲಕ್ಷ ರೂ. ಆರ್ಥಿಕ ನೆರವನ್ನು ಸಮಾರಂಭದಲ್ಲಿ ವಿತರಿಸಲಾಯಿತು.

ಸಮಾರಂಭದಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರ ಡಿಸೋಜ, ಮಾರ್ಸೆಲ್ ಎಂ. ಡಿಸೋಜ, ಜೋಸೆಫ್ ಅನಿಲ್ ಪಾವೊ, ಹೆರಾಲ್ಡ್ ಮೊಂತೇರೊ, ಎಲ್.ರೋಯ್ ಕೆ. ಕ್ರಾಸ್ಟ್, ಜೆ.ಪಿ.ರೋಡ್ರಿಗಸ್, ಸಿ.ಜಿ.ಪಿಂಟೊ, ಸುಶಾಂತ್ ಸಲ್ದಾನ, ರೋಶನ್ ಡಿಸೋಜ, ಡಾ.ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೊ ಡಾ.ಫ್ರೀಡಾ ಡಿಸೋಜ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರೂಜ್, ಅಲ್ವಿನ್ ಪಿ. ಮೊಂತೇರೊ ಮತ್ತಿತರರು ಉಪಸ್ಥಿತರಿದ್ದರು.

ಬ್ಯಾಂಕ್‌ ನ ನಿರ್ದೇಶಕ ಡೇವಿಡ್ ಡಿಸೋಜ ಸಹಾಯ ಧನ ವಿತರಣಾ ಕಾರ್ಯಕ್ರಮ ನಿರೂಪಿಸಿದರು. ಎಂಸಿಸಿ ಬ್ಯಾಂಕ್‌ನ ಮಹಾಪ್ರಬಂಧಕ ಸುನೀಲ್‌ ಮಿನೇಜಸ್ ವಂದಿಸಿದರು. ವಯೆಲ್ಲಾ ಬಜಪೆ ಸಭಾ ಕಾರ್ಯಕ್ರಮ ನಿರೂಪಿಸಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು ಬಲ್ಮಠ ದ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಲಾಗಿದ್ದ ಕಾರಿಗೆ ಬೆಂಕಿ

Next Post

ಹಿಂದು ಯುವತಿ ಮುಸ್ಲಿಂ ಆಗಿ ಮತಾಂತರಕ್ಕೆ ಯತ್ನ , ಬುರ್ಖಾ ಹಾಕಿಸಿ, ನಮಾಜ್‌ ಮಾಡಿಸುತ್ತಿದ್ದರು; ಖ್ಯಾತ ವೈದ್ಯೆ ಸೇರಿ ಮೂವರ ವಿರುದ್ಧ ದೂರು

Related Posts

ಮುಡಾದಿಂದ ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್, ಅವೈಜ್ಞಾನಿಕ ನೀತಿ ಬದಲಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ.!
ಕರಾವಳಿ

ಮುಡಾದಿಂದ ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್, ಅವೈಜ್ಞಾನಿಕ ನೀತಿ ಬದಲಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ.!

November 5, 2026
31
ಮಂಗಳೂರು: ನ.6.‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಎಂಬ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ಅಭಿಯಾನ
ಕರಾವಳಿ

ಮಂಗಳೂರು: ನ.6.‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಎಂಬ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ಅಭಿಯಾನ

November 4, 2026
16
Next Post
ಹಿಂದು ಯುವತಿ ಮುಸ್ಲಿಂ ಆಗಿ ಮತಾಂತರಕ್ಕೆ ಯತ್ನ , ಬುರ್ಖಾ ಹಾಕಿಸಿ, ನಮಾಜ್‌ ಮಾಡಿಸುತ್ತಿದ್ದರು; ಖ್ಯಾತ ವೈದ್ಯೆ ಸೇರಿ ಮೂವರ ವಿರುದ್ಧ ದೂರು

ಹಿಂದು ಯುವತಿ ಮುಸ್ಲಿಂ ಆಗಿ ಮತಾಂತರಕ್ಕೆ ಯತ್ನ , ಬುರ್ಖಾ ಹಾಕಿಸಿ, ನಮಾಜ್‌ ಮಾಡಿಸುತ್ತಿದ್ದರು; ಖ್ಯಾತ ವೈದ್ಯೆ ಸೇರಿ ಮೂವರ ವಿರುದ್ಧ ದೂರು

Discussion about this post

Recent News

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

November 5, 2026
18
ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ- ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ ಅವಕಾಶ

ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ- ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ ಅವಕಾಶ

November 5, 2026
50
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

November 5, 2026
ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ- ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ ಅವಕಾಶ

ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ- ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ ಅವಕಾಶ

November 5, 2026
ಮುಡಾದಿಂದ ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್, ಅವೈಜ್ಞಾನಿಕ ನೀತಿ ಬದಲಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ.!

ಮುಡಾದಿಂದ ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್, ಅವೈಜ್ಞಾನಿಕ ನೀತಿ ಬದಲಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ.!

November 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d