ಉಡುಪಿ: ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಶನಿವಾರ ಇಬ್ಬರು ಮೊಬೈಲ್ ಕಳ್ಳರನ್ನು ಬಂಧಿಸಿ ₹ 58,000 ಮೌಲ್ಯದ 5 ಮೊಬೈಲ್‌ಗಳನ್ನು ಆರ್‌ಪಿಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಬಿಹಾರ ಮೂಲದ ಸಾಬುದ್ದೀನ್ ಹಾಗೂ ತನ್ವೀರ್ ಅಲಂ ಬಂಧಿತರು.
ರೈಲು ನಿಲ್ದಾಣದ ಫ್ಲಾಟ್‌ಫಾರಂ 1ರಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ಗಮನಿಸಿದ ಆರ್‌ಪಿಎಫ್ ಸಿಬ್ಬಂದಿ ಶ್ರೀಕಾಂತ್ ಹಾಗೂ ಕರುಣಾಕರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಜೀನಾ ಪಿಂಟೊ ಹಾಗೂ ಸಜೀರ್ ಅವರ ನೆರವಿನಿಂದಿಗೆ ಆರೋಪಿಗಳನ್ನು ವಶಕ್ಕೆ ಪಡೆದು ಆರ್‌ಪಿಎಫ್ ಕಚೇರಿಗೆ ಕರೆದೊಯ್ದಿದ್ದಾರೆ.
ವಿಚಾರಣೆಯ ವೇಳೆ ಈ ಐದೂ ಮೊಬೈಲ್‌ಗಳನ್ನು ಕಳೆದ ಹತ್ತು ದಿನಗಳಲ್ಲಿ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರಿಂದ ಎಗರಿಸಿದ್ದಾಗಿ ಅವರು ತಿಳಿಸಿದರು. ರೈಲಿನಲ್ಲಿ ಸೀಟಿನ ಮೇಲಿಟ್ಟ ಹಾಗೂ ಚಾರ್ಜ್‌ಗೆ ಇಟ್ಟಿದ್ದ ಮೊಬೈಲ್‌ಗಳನ್ನು ಇವರು ಕಳವು ಮಾಡುತಿದ್ದರೆನ್ನಲಾಗಿದೆ. ಈ ಬಗ್ಗೆ ನವಿಮುಂಬೈ ಪನ್ವೇಲ್‌ನ ಪಿಂಟೋ ಪೌಲ್ ಎಂಬವರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕೆ ಮಣಿಪಾಲ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಆರ್‌ಪಿಎಫ್ ಸಿಬ್ಬಂದಿ ತಿಳಿಸಿದ್ದಾರೆ.
Discussion about this post