ಮಂಗಳೂರು, ಫೆ.27: ಐತಿಹಾಸಿಕ ಉಳ್ಳಾಲ ದರ್ಗಾ ಕಮಿಟಿಯಲ್ಲಿ ಎಂಟು ವರ್ಷಗಳ ಹೋರಾಟದ ಬಳಿಕ ಎಸ್ಸೆಸ್ಸೆಎಫ್ ಕಡೆಯವರು ಅಧಿಕಾರ ಹಿಡಿದಿದ್ದಾರೆ. ಫೆ.25ರಂದು ಉಳ್ಳಾಲ ದರ್ಗಾ ಕಮಿಟಿಗೆ ಚುನಾವಣೆ ನಡೆದಿದ್ದು, ಎಲ್ಲ 55 ಸ್ಥಾನಗಳಿಗೂ ವಕ್ಫ್ ಕಮಿಟಿ ಅಧ್ಯಕ್ಷ ಶಾಫಿ ಸಾದಿ ಪರವಾಗಿರುವ ಎಸ್ಸೆಸ್ಸೆಫ್ ಸಂಘಟನೆಯ ಸದಸ್ಯರು ಆಯ್ಕೆಯಾಗಿದ್ದಾರೆ.
ಒಟ್ಟು 2,935 ಮಂದಿ ಮತ ಚಲಾಯಿಸಿದ್ದು, ಶೇ.83ರಷ್ಟು ಮತದಾನವಾಗಿದೆ. ಬಳಿಕ ಮತಗಳ ಎಣಿಕೆ ನಡೆಯಿತು. ಪ್ರತಿ ಕರಿಯದಿಂದ 11ರಂತೆ ಒಟ್ಟು 5 ಕರಿಯಗಳಿಂದ 55 ಸ್ಥಾನಗಳಿಗೆ 80 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಅತ್ಯಧಿಕ ಮತ ಪಡೆದ 55 ಮಂದಿ ಆಯ್ಕೆಯಾದರು. ಮತದಾನ ಕೇಂದ್ರದ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು
ಉಳ್ಳಾಲ ದರ್ಗಾದಲ್ಲಿ ಎಂಟು ವರ್ಷಗಳಿಂದ ಚುನಾವಣೆ ನಡೆಯದೆ ಎಸ್ಕೆಎಸ್ಸೆಸ್ಸೆಫ್ ಸಂಘಟನೆಗೆ ಸೇರಿದ ಅಬ್ದುಲ್ ರಶೀದ್ ಹಾಜಿ ಮತ್ತು ಇತರರು ಆಡಳಿತ ನಡೆಸುತ್ತಿದ್ದರು. ಇವರ ಆಡಳಿತದಲ್ಲಿ ಭಾರೀ ಅವ್ಯವಹಾರ ಆಗಿದೆಯೆಂದು ವಿರೋಧಿ ಬಣ ಆರೋಪಿಸಿತ್ತು. ಈ ಬಗ್ಗೆ ವಕ್ಫ್ ಕಮಿಟಿಗೂ ದೂರು ನೀಡಲಾಗಿತ್ತು. ಈ ನಡುವೆ, ವಕ್ಫ್ ಕಮಿಟಿಯ ಬೈಲಾ ಪ್ರಕಾರ ಚುನಾವಣೆ ನಡೆಸಬೇಕು ಎಂದು ವಕ್ಫ್ ಇಲಾಖೆಯಿಂದ ಉಳ್ಳಾಲ ದರ್ಗಾ ಆಡಳಿತಕ್ಕೆ ನೋಟೀಸ್ ಮಾಡಲಾಗಿತ್ತು. ಆದರೆ, ಚುನಾವಣೆ ನಡೆಸುವುದನ್ನು ಪ್ರಶ್ನಿಸಿ ಮತ್ತು ವಕ್ಫ್ ಕಮಿಟಿಯ ಬೈಲಾವನ್ನು ವಿರೋಧಿಸಿ ರಶೀದ್ ಹಾಜಿಯ ತಂಡ ಹೈಕೋರ್ಟಿನಲ್ಲಿ ತಡೆಯಾಜ್ಞೆ ತಂದಿತ್ತು. ಇತ್ತೀಚೆಗೆ, ಹೈಕೋರ್ಟಿನಲ್ಲಿದ್ದ ತಡೆ ತೆರವಾಗಿದ್ದು, ವಕ್ಫ್ ಇಲಾಖೆಯ ಬೈಲಾವನ್ನು ಹೈಕೋರ್ಟ್ ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಬ್ದುಲ್ ರಶೀದ್ ವಕ್ಫ್ ಇಲಾಖೆಯಿಂದ ಚುನಾವಣಾಧಿಕಾರಿಯನ್ನು ನೇಮಿಸಿ, ಚುನಾವಣೆಗೆ ತಯಾರಿ ನಡೆಸಲಾಗಿತ್ತು. ಹೊಸ ಮತದಾರ ಪಟ್ಟಿಯನ್ನು ಮಾಡಿ, ಉಳ್ಳಾಲ ದರ್ಗಾ ವ್ಯಾಪ್ತಿಯ ಐದು ವಿಭಾಗದಲ್ಲಿ ತಲಾ 11 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಒಂಬತ್ತುಕೆರೆಯ ಶಾಲೆಯಲ್ಲಿ ಫೆ.25ರಂದು ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದ ಚುನಾವಣೆಗೆ 80 ಮಂದಿ ಸ್ಪರ್ಧಿಸಿದ್ದು 55 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಅಬ್ದುಲ್ ರಶೀದ್ ಅವರಲ್ಲಿ ಕೇಳಿದಾಗ, ಇಡೀ ಚುನಾವಣೆ ಪ್ರಕ್ರಿಯೆಯೇ ಅಕ್ರಮ. ಚುನಾವಣೆಗೆ ಕಾಲಾವಕಾಶ ಕೇಳಿದ್ದೆವು. ಆದರೆ ನಮ್ಮ ಮನವಿಗೆ ಒಪ್ಪದೆ ತರಾತುರಿಯಲ್ಲಿ 3056 ಮಂದಿ ಮತದಾರರನ್ನು ಹೊಸತಾಗಿ ನೋಂದಣಿ ಮಾಡಿ, ಚುನಾವಣೆ ನಡೆಸಲಾಗಿದೆ. ಈ ರೀತಿ ಚುನಾವಣೆ ನಡೆಸಿರುವುದು ಅಕ್ಷಮ್ಯ, ಅಧಿಕಾರದ ದುರುಪಯೋಗ ಎಂದು ಹೇಳಿದ್ದಾರೆ. ನಮ್ಮಲ್ಲಿದ್ದ ದಾಖಲೆಯನ್ನು ನಾವು ಒಯ್ದಿದ್ದೇವೆ. ನಮ್ಮ ಆಡಳಿತ ಅಕ್ರಮ ಅಲ್ಲ ಎಂಬುದನ್ನು ತೋರಿಸಲು ಅಕೌಂಟ್ ಪುಸ್ತಕ, ಸೆನ್ಸಸ್ ಪುಸ್ತಕ ಬೇಕಲ್ಲವೇ. ಅದನ್ನು ನಮ್ಮ ಕಾರಿನ ಚಾಲಕ ಹಿಡಿದುಕೊಂಡು ಹೋಗುತ್ತಿದ್ದಾಗ ಯಾರೋ ಹಿಂಬಾಲಿಸಿ ಬಂದು ಅಡ್ಡಹಾಕಿ ಪೊಲೀಸರಿಗೆ ಕೊಡಿಸಿದ್ದಾರೆ. ನಾವೇನು ಅಕ್ರಮ ಮಾಡಿಲ್ಲ. ನಮ್ಮ ಪ್ರಕಾರ, ಉಳ್ಳಾಲದಲ್ಲಿ 22 ಸಾವಿರ ಮತದಾರರಿದ್ದಾರೆ. ಇವರು ಕೆಲವರನ್ನು ಮಾತ್ರ ಸೇರಿಸಿ, ಚುನಾವಣೆ ನಡೆಸಿದ್ದು ಅಕ್ರಮ ಅಲ್ಲವೇ ಎಂದು ಕಿಡಿಕಾರಿದ್ದಾರೆ. ವಕ್ಫ್ ಕಮಿಟಿಯಿಂದ ನಡೆದಿರುವ ಚುನಾವಣೆಯನ್ನು ಮತ್ತೆ ಅಬ್ದುಲ್ ರಶೀದ್ ಹಾಜಿ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದು, ಫೆ.28ರಂದು ವಿಚಾರಣೆ ಇದೆ. ಆಡಳಿತಕ್ಕೆ ಮತ್ತೆ ತಡೆಯಾಜ್ಞೆ ಬೀಳುತ್ತಾ ಅನ್ನುವ ಶಂಕೆಯೂ ಇದೆ.
ಚುನಾಯಿತರಾದ ನೂತನ ಸದಸ್ಯರ ವಿವರ:- ಕೋಟೆಪುರ ಕರಿಯ: ಅಬ್ದುಲ್ ಅಜೀಜ್, ಅಬ್ದುಲ್ ಖಾದರ್, ಬಶೀರ್ ಯುಬಿಎಂ, ಮುಹಮ್ಮದ್ ರಫೀಕ್, ಹಸೈನಾರ್ ಯುಕೆ, ಹಸೈನಾರ್ ಯು, ಅಬೂಬಕ್ಕರ್, ಅಶ್ರಫ್ ಮುಹಮ್ಮದ್, ರಫೀಕ್ ಯುಎಂ, ತಹಸೀನ್ ಯುಟಿ, ಮುಹಮ್ಮದ್ ಅಬ್ದುಲ್ ಖಾದರ್.
ಮುಕ್ಕಚ್ಚೇರಿ ಕರಿಯ: ಅಬೂಬಕ್ಕರ್, ಅಯ್ಯೂಬ್ ಯು.ಕೆ, ಖಲೀಲ್, ಅಹಮದ್ ತಂಝಿಲ್, ಇಸ್ಮಾಯಿಲ್, ಖಲೀಲ್, ಫಾರೂಕ್ ಅಬೂಬಕ್ಕರ್, ಆಜಾದ್ ಇಸ್ಮಾಯಿಲ್, ನಜೀಂ ರಹಮಾನ್, ಮಯ್ಯದ್ದಿ ಬಸ್ತಿಪಡ್ಪು, ಉಳ್ಳಾಲ ನಾಸೀರ್.
ಕಲ್ಲಾಪು ಕರಿಯ: ಮುಹಮ್ಮದ್ ಕೆ, ಫಾರೂಕ್ ಯು.ಎಚ್, ಮಹಮ್ಮದ್ ಅರೀಫ್ ಯು, ಅಮೀರ್ ಅಹಮದ್, ಮುಹಮದ್ ಇಮ್ತಿಯಾಜ್ ಹುಸೇನ್ ಮುಹಮ್ಮದ್ ಇಜಾಝ್, ಮುಹಮ್ಮದ್ ಮುಸ್ತಫ, ಮುಹಮ್ಮದ್ ಪಿ.ಎಚ್, ಮುಹಮ್ಮದ್ ಮುಸ್ತಫ, ಮೊಹಿದೀನ್, ಹೊಸಹಿತ್ಲು ಹಮೀದ್.
ಮೇಲಂಗಡಿ ಕರಿಯ: ಜಬ್ಬಾರ್ ಯು.ಎಂ, ನಜೀರ್ ಉಳ್ಳಾಲ ಬಾವಾ, ಮುಹಮ್ಮದ್ ಇಸಾಕ್, ಮೊಹಿದೀನಬ್ಬ ಅಶ್ರಫ್, ಅಬ್ದುಲ್ ಸಮದ್, ಇಬ್ರಾಹಿಂ ಶೌಕತ್, ಜೈನುದ್ದೀನ್, ಮುಹಮ್ಮದ್ ಬಾವಾ ಉಳ್ಳಾಲ, ಮುಹಮ್ಮದ್ ರಫೀಕ್, ಬಾವಾ ಹನೀಫ್.
Discover more from Coastal Times Kannada
Subscribe to get the latest posts sent to your email.







Discussion about this post