ಮಂಗಳೂರು, ಎ.28: ನಗರದ ಪಾಂಡೇಶ್ವರ ಬಳಿಯ ಎಮ್ಮೆಕೆರೆ ಮೈದಾನದಲ್ಲಿ ರೌಡಿ ಶೀಟರ್ ಯುವಕನೊಬ್ಬನನ್ನು ತಂಡವೊಂದು ಬರ್ಬರವಾಗಿ ಕಡಿದು ಕೊಲೆ ಮಾಡಿದೆ.
ಪಾಂಡೇಶ್ವರ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಕಕ್ಕೆ ರಾಹುಲ್ (26) ಕೊಲೆಯಾದ ವ್ಯಕ್ತಿ. ಎಮ್ಮೆಕೆರೆ ಬಳಿ ಕೋಳಿ ಅಂಕ ನಡೆಯುತ್ತಿದ್ದ ಸಂದರ್ಭ ಅಲ್ಲಿಂದ ಅಟ್ಟಿಸಿಕೊಂಡು ಬಂದ ನಾಲ್ವರ ತಂಡ ಮೈದಾನದ ಬಳಿ ಬರ್ಬರವಾಗಿ ಕೊಂದು ಹಾಕಿದೆ.
ಎಮ್ಮೆಕೆರೆ ತಂಡದ ಮಹೇಂದ್ರ ಮತ್ತಿತರ ನಾಲ್ಕು ಮಂದಿ ಯುವಕರು ಸೇರಿ ಕೊಂದು ಹಾಕಿದ್ದಾರೆ. ಹಳೆ ದ್ವೇಷದಲ್ಲಿ ಹಗೆ ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಕ್ಕೆ ರಾಹುಲ್ ಹೊಯ್ಗೆಬಜಾರ್ ನಿವಾಸಿಯಾಗಿದ್ದು ಅಲ್ಲಿನ ರೌಡಿ ತಂಡದಲ್ಲಿ ಗುರುತಿಸಿಕೊಂಡಿದ್ದ. ಎರಡು ವರ್ಷಗಳ ಹಿಂದೆ ಇದೇ ರಾಹುಲ್, ಎಮ್ಮೆಕೆರೆಯ ಹುಲಿ ತಂಡದ ಸದಸ್ಯರೊಬ್ಬರ ಮನೆಯಲ್ಲಿ ಜಗಳ ಮಾಡಿ ಮಹೇಂದ್ರ ಮತ್ತಿತರರ ಮೇಲೆ ಹಲ್ಲೆ ನಡೆಸಿದ್ದ. ಇದೇ ದ್ವೇಷದಲ್ಲಿದ್ದ ತಂಡ ಇಂದು ರಾಹುಲ್ ಎಮ್ಮೆಕೆರೆಯ ಕೋಳಿ ಅಂಕ ನಡೆಯುತ್ತಿದ್ದಲ್ಲಿಗೆ ಬಂದಿದ್ದಾಗ ಹಳೆ ದ್ವೇಷವನ್ನು ಕೊಲೆಯ ಮೂಲಕ ತೀರಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಹೆಚ್ಚಿನ ವಿವರಗಳನ್ನು ನೀರಿಕ್ಷಿಸಲಾಗುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post